ಸೇಡಂ: ತಾಲ್ಲೂಕಿನ ಕೋಡ್ಲಾ ಗ್ರಾಮದ ಉರಿಲಿಂಗ ಪೆದ್ದೀಶ್ವರ ಮಠದ ಶಿವಯೋಗಿಶ್ವರರ 78ನೇ ಪುಣ್ಯಸ್ಮರಣೆ ಹಾಗೂ 46ನೇ ರಥೋತ್ಸವ ಭಕ್ತಿ ಸಡಗರದಿಂದ ಶನಿವಾರ ಜರುಗಿತು.

ರಥೋತ್ಸವ ನಿಮಿತ್ತ ಮಠದಲ್ಲಿ ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನಂತರ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಮೆರವಣಿಗೆ ವಿವಿಧ ವಾದ್ಯ ಮೇಳಗಳೊಂದಿಗೆ ಜರುಗಿತು. ಮಹಿಳೆಯರ ಕುಂಭಮೇಳ ಗಮನ ಸೆಳೆಯಿತು. ಪಲ್ಕಕ್ಕಿಗೆ ಭಕ್ತರು ತೆಂಗು, ಕಾಯಿ ಒಡೆದು, ಕರ್ಪೂರ ಬೆಳಗಿಸಿ ನಮಿಸಿದರು.

ಮೆರವಣಿಗೆಯುದ್ದಕ್ಕೂ ಪುರವಂತರ ಕುಣಿತ ಗಮನ ಸಳೆಯಿತು. ಮಠದ ಭಕ್ತರು ಭಜನೆ ಮಾಡುತ್ತಾ ರಥದ ಮೈದಾನಕ್ಕೆ ತೆರಳಿದರು. ರಥಕ್ಕೆ ಸುತ್ತಲೂ ಐದು ಸುತ್ತ ಹಾಕಿ ರಥಕ್ಕೆ ನೈವೇದ್ಯ ಸಮರ್ಪಿಸಲಾಯಿತು. ನಂತರ ಶಿವಯೋಗೀಶ್ವರ ಮಹಾರಾಜ್ ಕಿ ಜೈ ಹಾಗೂ ಓಂ ಶ್ರೀ ಗುರುಬಸವಲಿಂಗ ನಮಃ ಎನ್ನುತ್ತ ರಥಕ್ಕೆ ಜೈಘೋಷ ಹಾಕಲಾಯಿತು.

ರಥ ನಿಂತ ಸ್ಥಳದಿಂದ ಕದಲುತ್ತಿದ್ದಂತೆ ಸಾವಿರಾರು ಭಕ್ತರು ನಮಿಸಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಗುರುಮಠಕಲ್ ಖಾಸಾ ಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಉರಿಲಿಂಗ ಪೆದ್ದೀಶ್ವರ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ರಾಜಕೀಯ ಧುರೀಣರು ಹಾಗೂ ಭಕ್ತರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-31-2069516472

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.