ಕಲಬುರಗಿ: ಶಹಾಬಾದ್–ಕಲಬುರಗಿ ನಡುವೆ ಹೆಚ್ಚಿನ ಬಸ್ಗಳನ್ನು ಓಡಿಸಬೇಕು ಮತ್ತು ಶಹಾಬಾದ್ನ ಎಬಿಎಲ್ ಕ್ರಾಸ್ ಹಾಗೂ ಭಂಕೂರ ಕ್ರಾಸ್ನಲ್ಲಿ ಎಲ್ಲಾ ಬಸ್ಗಳ ನಿಲುಗಡೆಗೆ ಒತ್ತಾಯಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ (ಎಸ್ಯುಸಿಐ–ಸಿ) ಪಕ್ಷದ ಶಹಾಬಾದ್ ಸ್ಥಳೀಯ ಸಮಿತಿ ವತಿಯಿಂದ ಕೆಕೆಆರ್ಟಿಸಿ ಅಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

‘ಜಿಲ್ಲೆಯಲ್ಲಿಯೇ ಶಹಾಬಾದ್ ದೊಡ್ಡ ನಗರವಾಗಿದ್ದರೂ ಇಲ್ಲಿನ ಜನರು ಕನಿಷ್ಠ ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇದು ಅಲ್ಲದೇ ಶಹಾಬಾದ್ ಹಾಗೂ ಸುತ್ತ–ಮುತ್ತಲಿನ ಗ್ರಾಮಗಳಿಂದ ಕಲಬುರಗಿ–ಜೇವರ್ಗಿ–ಚಿತ್ತಾಪುರ–ಯಾದಗಿರಿಗೆ ಹೋಗಲು ಸಮರ್ಪಕವಾದ ಬಸ್ ವ್ಯವಸ್ಥೆಯಿಲ್ಲ. ಶಹಾಬಾದ್ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಯು ಕಲಬುರಗಿ, ಚಿತ್ತಾಪುರ, ಯಾದಗಿರಿ ಹಾಗೂ ಜೇವರ್ಗಿ ತಾಲ್ಲೂಕಿನ ಜನರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿಯಾಗಿದೆ. ಶಹಾಬಾದ್ ನಗರದಿಂದ ದಿನನಿತ್ಯ ಸಾವಿರಾರು ಜನ ವಿದ್ಯಾರ್ಥಿ–ಯುವಜನರು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಜನಸಾಮಾನ್ಯರು ವಿವಿಧ ಕಾರ್ಯಗಳಿಗಾಗಿ ಕಲಬುರಗಿ, ಯಾದಗಿರಿ, ಚಿತ್ತಾಪುರ ಹಾಗೂ ಜೇವರ್ಗಿಗೆ ಹೋಗಲು ಸಾರಿಗೆ ಸಂಸ್ಥೆಯ ಬಸ್ಗಳನ್ನು ಅವಲಂಬಿಸಿದ್ದಾರೆ. ಸರಿಯಾದ ಸಮಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಸ್ಗಳು ಇಲ್ಲದೇ ಇರುವುದರಿಂದ ಶಹಾಬಾದ್ನಿಂದ ಬೇರೆ ನಗರಕ್ಕೆ ಹೋಗಲು ಇಲ್ಲಿನ ಜನರು ಹರಸಾಹಸ ಪಡಬೇಕಾಗಿದೆ. ಅದರಲ್ಲೂ ಮುಖ್ಯವಾಗಿ ಶಹಾಬಾದದಿಂದ ಕಲಬುರಗಿ ಮತ್ತು ಯಾದಗಿರಿಗೆ ತೆರಳಬೇಕಾದರೆ ಎಬಿಎಲ್ ಕ್ರಾಸ್ ಹಾಗೂ ಭಂಕೂರ್ ಕ್ರಾಸ್ನಲ್ಲಿ ಕಲಬುರಗಿ–ಯಾದಗಿರಿ ಮಾರ್ಗದಲ್ಲಿ ಸಂಚರಿಸುವ ಬಸ್ಗಳು ನಾನ್ ಸ್ಟಾಪ್ ಎಂದು ಹೇಳಿ ನಿಲುಗಡೆ ಮಾಡದೆ ಇರುವುದರಿಂದ ಜನರು ಮತ್ತಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಪಕ್ಷದ ಶಹಾಬಾದ್ ಸ್ಥಳೀಯ ಸಮಿತಿ ಸದಸ್ಯರಾದ ರಾಘವೇಂದ್ರ ಎಂ.ಜಿ., ಜಗನ್ನಾಥ ಎಸ್.ಎಚ್., ರಮೇಶ ದೇವಕರ್ ಹಾಗೂ ತಿಮ್ಮಯ್ಯ ಮಾನೆ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-30-423616157

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.