ಕಲಬುರಗಿ: ‘ಅದ್ವೈತ, ಮಾನವಕುಲಕ್ಕೆ ಏಕತೆಯ ದಾರಿ ತೋರಿಸುವುದರ ಜೊತೆಗೆ ಸಮಾಜದಲ್ಲಿ ಜ್ಞಾನ, ಸಹಿಷ್ಣುತೆ ಮತ್ತು ಸೌಹಾರ್ದ ಬೆಳೆಸುವ ಶಕ್ತಿಯಾಗಿದೆ’ ಎಂದು ಸನಾತನ ಯುವಶಕ್ತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಗುರುರಾಜ ಕುಲಕರ್ಣಿ ಅಭಿಪ್ರಾಯಪಟ್ಟರು.

ಆದಿ ಶಂಕರಾಚಾರ್ಯರ ಜಯಂತಿ ಪ್ರಯುಕ್ತ ನಗರದ ಜೈ ವೀರ ಹನುಮಾನ ದೇವಸ್ಥಾನದಲ್ಲಿ ಸನಾತನ ಯುವಶಕ್ತಿ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ‘ಶಂಕರಾಚಾರ್ಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದರು.

ಈ ವೇಳೆ ಅಪ್ಪನ ಕೆರೆ ಮಧ್ಯದಲ್ಲಿ ಶಂಕರಾಚಾರ್ಯರ ಪ್ರತಿಮೆ ನಿರ್ಮಿಸಬೇಕು ಎಂದು ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ಶಂಕರಾಚಾರ್ಯರು ಸಣ್ಣ ವಯಸ್ಸಿನಲ್ಲಿಯೇ ಅಪಾರ ಸಾಧನೆ ಮಾಡಿದ ಮಹಾನುಭಾವರು. ಅವರ ಪ್ರತಿಮೆ ನಿರ್ಮಾಣಕ್ಕೆ ತಮ್ಮಿಂದಾದ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಗೋಪಾಲ ಆಚಾರ್ಯ ಅಕಮಂಚಿ, ಯೋಗೇಶ್ ಭಟ್ ಜೋಶಿ ಮಾತನಾಡಿದರು. ದತ್ತಪ್ಪಯ್ಯ ಸ್ವಾಮಿ, ರಾಮಾಚಾರ್ಯ ಘಂಟಿ, ಪಿ.ವಿ.ಜೋಶಿ, ಮಾಜಿ ಮೇಯರ್ ಯಲ್ಲಪ್ಪ ನಾಯಕೊಡಿ, ಅವಿನಾಶ ಕುಲಕರ್ಣಿ, ಚಂದ್ರಕಾಂತ ಕುಲಕರ್ಣಿ ನಾಗೂರ್, ಅರ್ಚನಾ ಬಿರಾಳ, ಶಿವಕುಮಾರ ತೋಟನಹಳ್ಳಿ ಹಾಗೂ ವಿನೋದ ಹೊಲಗುಂಟಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-34-1381778243

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.