ಕಲಬುರಗಿ: ‘ಜೇವರ್ಗಿ ರಸ್ತೆಯಲ್ಲಿರುವ ತಪೋನಿಧಿ ಸಾಂಬ ಶಿವಯೋಗೀಶ್ವರ ಹಿರೇಮಠದಲ್ಲಿ ಲೋಕಕಲ್ಯಾಣಕ್ಕಾಗಿ ಮೇ 20ರಿಂದ 29ರವರೆಗೆ 10 ದಿನಗಳ ಕಾಲ ಶ್ರೀರುದ್ರ ಉಚಿತ ಶಿಬಿರ ಆಯೋಜಿಸಲಾಗಿದೆ’ ಎಂದು ಸಾಂಬಸೇನಾ ಜಿಲ್ಲಾಧ್ಯಕ್ಷ ಶರಣಗೌಡ ಪಾಟೀಲ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾನಸಿಕ ಒತ್ತಡ ಕಳೆಯಲು ಹಾಗೂ ಮನಸ್ಸಿಗೆ ಶಾಂತಿ ಉಂಟು ಮಾಡಲು ದ್ವಿತೀಯ ಸಾಂಬ ಶಿವಾಚಾರ್ಯರ ನೇತೃತ್ವದಲ್ಲಿ ಶಿಬಿರ ನಡೆಯಲಿದ್ದು, ಬಂದ ಭಕ್ತರಿಗೆ ಮಠದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ’ ಎಂದರು.

‘ಪ್ರತಿನಿತ್ಯ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಯೋಗದೊಂದಿಗೆ ಆರಂಭವಾಗಿ ಶ್ರೀರುದ್ರ ಪಠಣ ಜೊತೆಗೆ ಭಜನೆ, ಸಾಮೂಹಿಕ ಜಪ, ಸಂಗೀತ, ನೃತ್ಯ, ಆಟ ಪಾಠಗಳು ಮತ್ತು ಅಗತ್ಯ ಸಂಸ್ಕಾರ ಪಾಠವೂ ನಡೆಯಲಿದೆ. ಶಿಬಿರದಲ್ಲಿ ಭಾಗವಹಿಸಲು ಈಗಾಗಲೇ 100ಕ್ಕೂ ಹೆಚ್ಚು ಜನರು ಹೆಸರು ನೋಂದಾಯಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಶರಣಗೌಡ (ಮೊ: 9964212666), ಮಲ್ಲಿಕಾರ್ಜುನ (ಮೊ:7829662985) ಅವರನ್ನು ಸಂಪರ್ಕಿಸಬಹುದು’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆನಂದ ಪಾಟೀಲ, ಸಾವಿತ್ರಿ ಹಿರೇಮಠ, ಮಲ್ಲಿಕಾರ್ಜುನ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-34-976249533

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.