ಕಲಬುರಗಿ: ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಮರಾಠಿ ಸಾಹಿತ್ಯ ಮಂಡಳದ ಆವರಣವು ಭಾನುವಾರ ಸಂಜೆ ತಬಲಾ–ಸಿತಾರ್ ವಾದನ, ಹಿಂದೂಸ್ತಾನಿ ಗಾಯನದ ಜುಗಲಬಂದಿಗೆ ಸಾಕ್ಷಿಯಾಯಿತು.

ಕಲ್ಮೇಶ್ವರ ಸಂಗೀತ ಸಾಂಸ್ಕೃತಿಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯು ಆಯೋಜಿಸಿದ್ದ ‘ಸುಗಮ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವು ಇದಕ್ಕೆ ವೇದಿಕೆ ಒದಗಿಸಿತು.

ಧಾರವಾಡ ಆಕಾಶವಾಣಿ ಕಲಾವಿದೆ ಭಾಗ್ಯಶ್ರೀ ಹೂಗಾರ ಸಿತಾರ ವಾದನದ ಮೂಲಕ ‘ಸಂಗೀತ ಕಛೇರಿ’ ಆರಂಭಿಸಿದರು. ‘ಮಾಂತ್ರಿಕ ನಾದ’ ಹೊಮ್ಮಿಸಿ ಶ್ರೋತೃಗಳ ಮನಗೆದ್ದರು. ಅವರಿಗೆ ಸಹೋದರ ಮಳೆಮಲ್ಲೇಶ ಹೂಗಾರ ತಬಲಾ ಸಾಥ್ ನೀಡಿದರು. ಸಿತಾರ– ತಬಲಾ ವಾದನದ ಜುಗಲಬಂದಿ ಮೂಲಕ ನೆರೆದಿದ್ದ ಜನರನ್ನೂ ಸಂಗೀತಲೋಕದಲ್ಲಿ ತೇಲಿಸಿದರು.

ಬಳಿಕ ಧಾರವಾಡ ಆಕಾಶವಾಣಿಯ ಖ್ಯಾತ ಕಲಾವಿದ ಸಾತಲಿಂಗಪ್ಪ ಹೂಗಾರ ಹಾಗೂ ಅವರ ಪುತ್ರ ಮಳೆಮಲ್ಲೇಶ ಹೂಗಾರ ತಬಲಾ ಸೋಲೊ ಜುಗಲಬಂದಿ ನೆರೆದಿದ್ದವರನ್ನು ಸಂಗೀತದ ರಸದೌತಣ ಉಣಬಡಿಸಿತು. ತಂದೆ–ಮಗ ಸೇರಿಕೊಂಡು ತಮ್ಮ ಬೆರಳುಗಳ ಮೂಲಕ ತಬಲಾದಿಂದ ಬೆರಗಿನ ನಾದ ಹೊಮ್ಮಿಸಿದರು. ಅವರಿಗೆ ಸಾತಲಿಂಗಪ್ಪ ಅವರ ಪುತ್ರಿ ಭಾಗ್ಯಶ್ರೀ ಹೂಗಾರ ಹಾರ್ಮೋನಿಯಂ ಸಾಥ್ ನೀಡಿದರು.

ನಂತರ ಕಲಾವಿದ ರಮೇಶ ಕುಲಕರ್ಣಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು. ತಮ್ಮ ಗಾಯನದ ಮೂಲಕ ಮೋಡಿ ಮಾಡಿದರು. ಅವರಿಗೆ ಜಡೇಶ ಹೂಗಾರ ತಬಲಾ ಸಾಥ್ ನೀಡಿದರು. ಬಳಿಕ ವೀರೇಶ ಹೂಗಾರ ತಮ್ಮ ಗಾಯನ ಪ್ರಸ್ತುತ ಪಡಿಸಿ ‘ಸಂಗೀತ ಕಛೇರಿ’ ಮುಗಿಸಿದರು.

ಇದಕ್ಕೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮುಖಂಡ ನಿತಿನ್ ಗುತ್ತೇದಾರ ಮಾತನಾಡಿ, ‘ಕಲೆಗಳಿಗೆ ಎಂದಿಗೂ ಕೊನೆಯಿಲ್ಲ. ಅದರಲ್ಲೂ ಸಂಗೀತ ಸದಾ ಜೀವಂತ. ಹಳೆಯ ಕಾಲದ ಸಂಗೀತವನ್ನೇ ಆಧುನಿಕ ಕಾಲಘಟ್ಟದಲ್ಲೂ ಪರಿಷ್ಕರಿಸಿ ಪ್ರಸ್ತುತ ಪಡಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಅದುವೇ ಹಳೇ ಕಾಲ ಸಂಗೀತಕ್ಕಿರುವ ಶಕ್ತಿ. ಯುವಜನರು ನಮ್ಮ ಜಾನಪದ ಹಾಡು, ಭಾವಗೀತೆ, ತತ್ವಪದಗಳನ್ನು ಎಂದಿಗೂ ಮರೆಯಬಾರದು’ ಎಂದು ಸಲಹೆ ನೀಡಿದರು.

ಕಲ್ಮೇಶ್ವರ ಸಂಗೀತ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಅಂಬರೀಶ ಹೂಗಾರ ದೇಸಾಯಿಕಲ್ಲೂರ, ಅಂಬಯ್ಯ ಗುತ್ತೇದಾರ, ವಿಜಯಕುಮಾರ ಹಳಗೋಧಿ, ಶಾಂತಪ್ಪ ಪಾಟೀಲ ಖಣದಾಳ, ಮಹಾಂತೇಶ ಪಾಟೀಲ, ತುಕಾರಾಂ ಸೇರಿದಂತೆ ಹಲವರು ವೇದಿಕೆಯಲ್ಲಲಿ ಇದ್ದರು. ಸುಂಟನೂರಿನ ನಾಗಲಿಂಗಯ್ಯ ಶಾಸ್ತ್ರಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-34-816930331

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.