ಕಲಬುರಗಿ: ‘ದೇಶದಲ್ಲಿ ಇಂದಿಗೂ ಜೀವಂತವಾಗಿರುವ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ನಿರ್ಮೂಲನೆ ಆಗದಿದ್ದರೆ ವಿಶ್ವಗುರು ಬಸವಣ್ಣನಿಗೂ ಕೀರ್ತಿ ತಂದಂತಲ್ಲ, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೂ ಗೌರವ ಕೊಟ್ಟಂತಲ್ಲ’ ಎಂದು ಆಳಂದ ಶಾಸಕ ಬಿ.ಆರ್.ಪಾಟೀಲ ಅಭಿಪ್ರಾಯಪಟ್ಟರು.

ನಗರದ ಜಗತ್ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಸಮಿತಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂಬೇಡ್ಕರ್ ಜಯಂತಿಗೆ ಜನಸಾಗರವೇ ಹರಿದು ಬಂದಿದೆ. ಇದು ವ್ಯಕ್ತಿಯ ಮೆರವಣಿಗೆಯಲ್ಲ; ಬದಲಿಗೆ ಅಂಬೇಡ್ಕರ್ ವಿಚಾರದ ಮೆರವಣಿಗೆ, ಸಂವಿಧಾನದ ಶಕ್ತಿಯ ಮೆರವಣಿಗೆಯಾಗಿದೆ’ ಎಂದರು.

‘ಮೂಢನಂಬಿಕೆ, ಕಂದಾಚಾರಗಳನ್ನು ಕಡಿದು ಹಾಕಿ ವೈಜ್ಞಾನಿಕ ದೃಷ್ಟಿಯಿಂದ ನಾವೆಲ್ಲ ಸಮಾಜವನ್ನು ಕಟ್ಟೋಣ. ಆ ಮೂಲಕ ಸಮತಾ ಸಮಾಜ ನಿರ್ಮಿಸೋಣ. ಸಂವಿಧಾನದ ಆಶಯಗಳನ್ನು ನಾವೆಲ್ಲ ಸೇರಿ ಈಡೇರಿಸೋಣ’ ಎಂದರು.

ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ಮಾತನಾಡಿ, ‘ದೇಶದ ಸಂವಿಧಾನ ಯಾರೂ ಬದಲಾಯಿಸಲಾಗದು. ಸೂರ್ಯ– ಚಂದ್ರ ಇರುವವರೆಗೂ ಅದು ಅಸಾಧ್ಯದ ಮಾತು. ನಾನು ಶಾಸಕನಾಗಿ ಅಂಬೇಡ್ಕರ್ ಜಯಂತಿಗೆ ಬಂದಿಲ್ಲ. ಅಂಬೇಡ್ಕರ್ ಅವರ ಭಕ್ತನಾಗಿ, ಸಂವಿಧಾನದ ಭಕ್ತನಾಗಿ ಬಂದಿರುವೆ. ನಾನು ಶಾಸಕನಾಗಲು ಸಂವಿಧಾನವೇ ಕಾರಣ’ ಎಂದರು.

ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ, ‘ಅಂಬೇಡ್ಕರ್ ಜಯಂತಿಗೆ ಸಾಗರದಂತೆ ಜನ ಸೇರಿದ್ದಾರೆ. ಅವರು ಬಡವರು, ದೀನರು ದುರ್ಬಲರ ಪಾಲಿನ ದೇವರು ಎಂದರೂ ತಪ್ಪಲ್ಲ’ ಎಂದರು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ‘ಸಮಾಜದ ಕಟ್ಟಕಡೆಯ ಗುಡಿಸಲಿನಲ್ಲಿರುವ ವ್ಯಕ್ತಿಗೂ ದೇಶದ ರಾಷ್ಟ್ರಪತಿಗೂ ಒಂದೇ ಮತ ಕೊಟ್ಟ ಮಹಾನ್ ನಾಯಕ ಅಂಬೇಡ್ಕರ್. ಅವರೊಬ್ಬ ಎರಡನೇ ಬಸವಣ್ಣ’ ಎಂದು ಬಣ್ಣಿಸಿದರು.

ಕೆಕೆಆರ್ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಮಾತನಾಡಿದರು. ಭಂತೆ ವರಜ್ಯೋತಿ ಸಾನ್ನಿಧ್ಯ ವಹಿಸಿದ್ದರು. ಬಿಷಪ್ ರಾಬರ್ಟ್ ಮೈಕಲ್ ಮಿರಾಂಡಾ, ನೀಲಕಂಠರಾವ ಮೂಲಗೆ ಸೇರಿ ಹಲವರು ಇದ್ದರು. ಜಿಲ್ಲಾ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಅಶೋಕ ವೀರನಾಯಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಕಾರ್ಯಕ್ರಮದ ಬಳಿಕ ‘ಮಾತೆ ತ್ಯಾಗಮಯಿ ರಮಾತಾಯಿ’ ನಾಟಕ ಪ್ರದರ್ಶನಗೊಂಡಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-34-682795757

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.