ಕಲಬುರಗಿ: ಬೆಳಗಿನ ಜಾವ ವ್ಯಾಯಾಮ ಹಾಗೂ ಪರಿಸರದ ಆಹ್ಲಾದಕರ ವಾತಾವರಣ ಅನುಭವಿಸಲು ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣಕ್ಕೆ ತೆರಳುವವರಿಗೆ ಕಹಿ ಅನುಭವಾಗುವುದು ಸಾಮಾನ್ಯವಾಗಿದೆ.

ಮುರಿದ ಶೌಚಾಲಯದ ಬಾಗಿಲು, ಅಲ್ಲಲ್ಲಿ ಅಸ್ವಚ್ಛತೆ, ಕಾಮಗಾರಿಗಾಗಿ ಅಗೆದು ಬಿಟ್ಟ ಅಂಗಣ ಕಣ್ಣಿಗೆ ರಾಚುತ್ತವೆ. ವಾಲಿಬಾಲ್ ಅಂಕಣದ ಬಳಿಯಿರುವ ಪುರುಷರ ಶೌಚಾಲಯದ ಸ್ಥಿತಿಯಂತೂ ಶೋಚನೀಯವಾಗಿದೆ. ಒಂದು ರೂಮಿನ ಬಾಗಿಲು ಮುರಿದಿದ್ದರೆ ಮತ್ತೊಂದು ಕಡೆ ಬಾಗಿಲಿಗೆ ರಂಧ್ರ ಬಿದ್ದಿದೆ.

ಕ್ರೀಡಾ ಹಾಸ್ಟೆಲ್ ಬಳಿಯಿರುವ ಮತ್ತೊಂದು ಶೌಚಾಲಯ ಬಳಕೆಯಲ್ಲಿಲ್ಲದೇ ಕಟ್ಟಡ ಹಾಳು ಬಿದ್ದಿದೆ. ಹೀಗಾಗಿ ‘ಪ್ರಕೃತಿ ಕರೆ’ ತೀರಿಸಿಕೊಳ್ಳಲು ಕ್ರೀಡಾಪಟುಗಳು ಹಾಗೂ ವಾಯುವಿಹಾರಿಗಳು ಪರದಾಡುವುದು ಸಾಮಾನ್ಯ ಎನಿಸಿಬಿಟ್ಟಿದೆ.

‘ಶೌಚಾಲಯದಿಂದ ಗಬ್ಬು ವಾಸನೆ ಹೊರಡುತ್ತದೆ. ಒಂದು ತಿಂಗಳಿನಿಂದ ಈ ಶೌಚಾಲಯದ ಬಾಗಿಲು ಮುರಿದಿದ್ದು ಕೇಳುವವರು ಯಾರೂ ಇಲ್ಲ. ಎಲ್ಲ ಆಟಗಳಿಗೂ ಇಂತಿಷ್ಟು ಶುಲ್ಕ ತೆಗೆದುಕೊಳ್ಳುವ ಕ್ರೀಡಾ ಇಲಾಖೆಯವರು ಸ್ವಚ್ಛತೆ ಹಾಗೂ ದುರಸ್ತಿಗೆ ಮನಸ್ಸು ಮಾಡುತ್ತಿಲ್ಲ’ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

‘ಒಳಾಂಗಣ ಬ್ಯಾಡ್ಮಿಂಟನ್ ಅಂಕಣ ಹಾಗೂ ಹೊಸದಾಗಿ ನಿರ್ಮಾಣವಾಗಿರುವ ಓಪನ್ ಜಿಮ್ ಅಂಗಣದ ನಡುವಣ ಜಾಗದಲ್ಲಿ ಬೇಕಾಬಿಟ್ಟಿ ಕಸವನ್ನು ಎಸೆಯಲಾಗಿದೆ. ಇದರ ಸ್ವಚ್ಛತೆಗೆ ಗಮನ ನೀಡಬೇಕು’ ಎಂದು ಹವ್ಯಾಸಿ ಆಟಗಾರರು ಒತ್ತಾಯಿಸುತ್ತಾರೆ.

ಹ್ಯಾಂಡ್ಬಾಲ್ ಅಂಗಣಗಳನ್ನು ‘ಸಿಂಥೆಟಿಕ್ ಬೇಸ್ ಒಳಾಂಗಣ’ಗಳಾಗಿ ಅಭಿವೃದ್ಧಿಪಡಿಸುವುದಕ್ಕಾಗಿ ಅಗೆದು ಹಾಕಲಾಗಿದೆ. ಅಗೆದು ಹಲವು ತಿಂಗಳು ಗತಿಸಿದ್ದು, ಕಾಮಗಾರಿ ಸ್ಥಗಿತಗೊಂಡಿದೆ. ಆದರೆ, ಈವರೆಗೂ ಅಂಗಣದ ಅಭಿವೃದ್ಧಿ ಕಾಮಗಾರಿ ಮರು ಆರಂಭವಾಗಿಲ್ಲ. ಇದರಿಂದಾಗಿ ಆಟಗಾರರು ತೊಂದರೆ ಅನುಭವಿಸುವಂತಾಗಿದೆ.

ಓಪನ್ ಜಿಮ್ ಉದ್ಘಾಟನೆ ಯಾವಾಗ?: ಕ್ರೀಡಾಂಗಣದ ಸಮುಚ್ಛಯದಲ್ಲಿ ನಿರ್ಮಾಣಗೊಂಡಿರುವ ಓಪನ್ ಜಿಮ್ ಎರಡ್ಮೂರು ತಿಂಗಳಾದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಲ್ಯಾಂಡ್ ಆರ್ಮಿಯಿಂದ ನಿರ್ಮಾಣಗೊಂಡಿರುವ ಜಿಮ್ನ ಉಪಕರಣಗಳು ದೂಳು ತಿನ್ನುತ್ತಿವೆ. ಶೀಘ್ರ ಉದ್ಘಾಟನೆಯಾಗಿ ಇದರ ಪ್ರಯೋಜನ ಸಿಗಲಿ ಎಂದು ಸಾರ್ವಜನಿಕರು ಬಯಸಿದ್ದಾರೆ.

‘ಶೌಚಾಲಯ ಶೀಘ್ರ ದುರಸ್ತಿ’

‘ಶೌಚಾಲಯಗಳ ದುರಸ್ತಿಗೆ ಕಾರ್ಯಯೋಜನೆ ಸಿದ್ಧಪಡಿಸಲಾಗಿದೆ. 2–3 ದಿನಗಳಲ್ಲಿ ದುರಸ್ತಿ ಕಾಣಲಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಶಾಸಕರ ಸಮಯ ಕೇಳಿಕೊಂಡು ಓಪನ್ ಜಿಮ್ ಉದ್ಘಾಟನೆ ದಿನಾಂಕ ನಿಗದಿ ಮಾಡುತ್ತೇವೆ. ಲ್ಯಾಂಡ್ ಆರ್ಮಿಯವರು ನಮ್ಮ ಇಲಾಖೆಗೆ ಇನ್ನೂ ಅದನ್ನು ಹಸ್ತಾಂತರ ಮಾಡಿಲ್ಲ. ಆದಷ್ಟು ಬೇಗ ಚಾಲನೆ ಸಿಗಲಿದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಂಗಮೇಶ್ವರ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

20 ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇನೆ. ಅವ್ಯವಸ್ಥೆಯ ಪರಿಸ್ಥಿತಿ ಬದಲಾಗಿಲ್ಲ. ಶೌಚಾಲಯಗಳು ಗಬ್ಬು ನಾರುತ್ತಿರುತ್ತವೆ. ಪತ್ರಿಕೆಯಲ್ಲಿ ಎಷ್ಟು ಬಾರಿ ಪ್ರಕಟವಾದರೂ ಪ್ರಯೋಜನವಿಲ್ಲ. ಸರಿಯಾದ ನೀರಿನ ವ್ಯವಸ್ಥೆಯೂ ಇಲ್ಲ.
ಸುಜಿತ್, ಹವ್ಯಾಸಿ ವಾಲಿಬಾಲ್ ಆಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.