ಕಲಬುರಗಿ: ‘ಬಿಯಾಂಡ್ ಬೆಂಗಳೂರು ನೀತಿಯಡಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನವೋದ್ಯಮಗಳ ಸಂಖ್ಯೆ ಹೆಚ್ಚಿಸಲು ಕೃಷಿಕಲ್ಪದ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದಲ್ಲಿ ಐಟಿ–ಬಿಟಿ ಇಲಾಖೆ, ಕೆಕೆಆರ್ಡಿಬಿ ಹಾಗೂ ಕೃಷಿಕಲ್ಪದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಹಾಗೂ ‘ವಿಕಾಸ ಮತ್ತು ಪ್ರೇರಣಾ’ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಈ ನೀತಿಯಡಿ ಈಗಾಗಲೇ ಮೈಸೂರಿನಲ್ಲಿ 402, ಮಂಗಳೂರು 332, ಹುಬ್ಬಳ್ಳಿ–ಧಾರವಾಡ, ಬೆಳಗಾವಿ 463 ಹಾಗೂ ಕಲಬುರಗಿಯಲ್ಲಿ 280 ನವೋದ್ಯಮಗಳನ್ನು ಆರಂಭಿಸಲಾಗಿದೆ. ಈ ಸಂಖ್ಯೆಯ ಹೆಚ್ಚಳಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಇದರ ಭಾಗವಾಗಿಯೇ ನಗರದ ಕಿಯೊನಿಕ್ಸ್ ಸಂಸ್ಥೆ ಕಚೇರಿ ಪಕ್ಕದಲ್ಲಿ ಟೆಕ್ ಪಾರ್ಕ್ಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದರು.

‘ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸಚಿವರಿದ್ದಾಗ ಮ್ಯಾನುಫ್ಯಾಕ್ಚರಿಂಗ್ ಝೋನ್ ಆಗಬೇಕಿತ್ತು. ಕಲಬುರಗಿ ಹಾಗೂ ತುಮಕೂರು ಎರಡಕ್ಕೂ ಒಟ್ಟಿಗೆ ಅನುಮೋದನೆ ಸಿಕ್ಕಿತ್ತು. ತುಮಕೂರಿನಲ್ಲಿ ಆಗಿದೆ. ಇಲ್ಲಿ ಖರ್ಗೆ ಅವರು ಸೋತ ಬಳಿಕ ಅದರ ಕುರಿತು ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಕಾರಣ ಅದು ಕೈ ತಪ್ಪಿತು’ ಎಂದರು.

‘ಮುಂದೆ ಹೀಗಾಗಬಾರದು ಎನ್ನುವ ಕಾರಣಕ್ಕೆ ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಣ್ಣ ಹೆಜ್ಜೆ ಇಟ್ಟಿದ್ದೇವೆ. ಕೃಷಿಕಲ್ಪದ ಮೂಲಕ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಮಾಡಿದ್ದೇವೆ. ಈ ಭಾಗದಲ್ಲಿ ನವೋದ್ಯಮಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡುತ್ತಿದ್ದೇವೆ. ಕೃಷಿ ಸಂಬಂಧಿ ನವೋದ್ಯಮಗಳ ಮೂಲಕ ಆ ಕೆಲಸ ಆರಂಭ ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ನವೋದ್ಯಮಕ್ಕೆ ಮಾರ್ಗದರ್ಶನ, ಅದನ್ನು ನಡೆಸುವವರು ಮತ್ತು ಅನುದಾನ ಬೇಕು. ಕರ್ನಾಟಕದಲ್ಲಿ 18,000 ನವೋದ್ಯಮಗಳು ನೋಂದಣಿಯಾಗಿವೆ. ಎಲಿವೇಟ್ ಯೋಜನೆಯಡಿ ನವೋದ್ಯಮಗಳಿಗೆ ₹50 ಲಕ್ಷ ಸಹಾಯಧನ ನೀಡಲಾಗುತ್ತದೆ. ಇಲ್ಲಿಯವರೆಗೂ 1,500 ನವೋದ್ಯಮಗಳಿಗೆ ಸಹಾಯಧನ ನೀಡಿದ್ದೇವೆ. ಕಲ್ಯಾಣ ಕರ್ನಾಟಕಕ್ಕೂ ವಿಸ್ತರಿಸಲಾಗಿದೆ. ಶೇ 32ರಷ್ಟು ನವೋದ್ಯಮಗಳ ಮೂಲ ಬೆಂಗಳೂರು ಆಚೆಗಿನ ನಗರಗಳಾಗಿವೆ. ಅದರಲ್ಲಿ ಶೇ 28ರಷ್ಟು ನವೋದ್ಯಮಗಳನ್ನು ಮಹಿಳೆಯರು ನಡೆಸುತ್ತಿದ್ದಾರೆ’ ಎಂದು ಹೇಳಿದರು.

‘ಎಲಿವೇಟ್ ನೆಕ್ಸ್ಟ್ ಯೋಜನೆಯಡಿ ಡೀಪ್ ಟೆಕ್ ನವೋದ್ಯಮಗಳಿಗೆ ₹1 ಕೋಟಿ ಸಹಾಯಧನ ನೀಡಲಾಗುತ್ತಿದೆ. 15–20 ದಿನ ಮಾತ್ರ ನೋಂದಣಿಗೆ ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ 935 ನವೋದ್ಯಮಗಳು ನೋಂದಣಿ ಮಾಡಿಕೊಂಡಿವೆ’ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಕೆಕೆಆರ್ಟಿಸಿ ಅಧ್ಯಕ್ಷ ಅರುಣ ಕುಮಾರ ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಜಿ.ಪಂ ಸಿಇಒ ಭಂವರ್ ಸಿಂಗ್ ಮೀನಾ, ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ., ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಕೃಷಿಕಲ್ಪದ ಸಿಇಒ ಸಿ.ಎಂ.ಪಾಟೀಲ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-34-299840904

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.