ಕಮಲಾಪುರ: ತಾಲ್ಲೂಕಿನ ಕಲಮೂಡ ಬಳಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದ್ದ ಮಹಿಳೆ ಶವದ ಗುರುತು ಪತ್ತೆಯಾಗಿದೆ.

ಕಲಬುರಗಿ ಎಸ್.ಬಿ ಕಾಲೇಜು ಎದುರಿನ ಆನಂದನಗರ ನಿವಾಸಿ, ಭಾಲ್ಕಿ ತಾಲ್ಲೂಕಿನ ವಾಂಜರಖೇಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಜ್ಯೋತಿ ಚಂದ್ರಶೇಖರ ಕಾಪಾಳೆ (57) ಮೃತ ಮಹಿಳೆ.

ಬಸವಕಲ್ಯಾಣದಲ್ಲಿ ಬಾಡಿಗೆ ಮನೆ ಮಾಡಿ ನೆಲೆಸಿದ್ದರು. ನಿತ್ಯ ಕೆಲಸಕ್ಕಾಗಿ ವಾಂಜರಖೇಡಕ್ಕೆ ಹೋಗಿ ಬರುತ್ತಿದ್ದರು. ಶನಿವಾರ, ಭಾನುವಾರ ಸೇರಿ ದಂತೆ ಇತರೆ ರಜಾ ದಿನಗಳಲ್ಲಿ ಕಲಬುರಗಿಗೆ ಬರುತ್ತಿದ್ದರು. ಜ್ಯೋತಿ ಅವರು ಅವಿವಾಹಿತರಾಗಿದ್ದು, ತಾಯಿ ಜೊತೆಗೆ ವಾಸಿಸುತ್ತಿದ್ದರು.

ಕಳೆದ ಏಪ್ರಿಲ್ 2ರಂದು ಗುರುವಾರ ಶಾಲೆಗೆ ಹಾಜರಾಗಿದ್ದರು. ಏಪ್ರಿಲ್ 3ರಂದು ಶುಕ್ರವಾರ ಗುಡ್ ಫ್ರೈಡೆ ರಜೆ ಇದ್ದ ಕಾರಣ ಕಲಬುರಗಿ ನಿವಾಸಕ್ಕೆ ಬಂದಿದ್ದರು. ಶುಕ್ರವಾರ ಕಲಬುರಗಿ ಮನೆಯಿಂದ ತೆರಳಿದ್ದು ರಾತ್ರಿ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಎಲ್ಲಾದರೂ ಹೋಗಿರಬಹುದು ಎಂದು ಮನೆಯವರು ಸುಮ್ಮನಾಗಿದ್ದರು. ಕಲಮೂಡ ಬಳಿ ಶನಿವಾರ ಬೆಳಿಗ್ಗೆ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಕೊಲೆಯ ಕಾರಣ ಇನ್ನೂ ನಿಗೂಢವಾಗಿದೆ ಎಂದು ಮೂಲಗಳು ತಿಳಿಸಿವೆ.

ಕೊಲೆ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-34-1998294070

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.