ಕಲಬುರಗಿ: ಅಪರಚಿತ ವ್ಯಕ್ತಿಯ ಮೊಬೈಲ್ ಕರೆಯು ರಾಂಚಿಯಲ್ಲಿರುವ ತಮ್ಮ ಸಂಬಂಧಿಕನದ್ದೆಂದು ನಂಬಿದ ಎಲೆಕ್ಟ್ರಾನಿಕ್ ವ್ಯಾಪಾರಿಯೊಬ್ಬರು ₹1.90 ಲಕ್ಷ ಕಳೆದುಕೊಂಡಿದ್ದಾರೆ.

ನಗರದ ಕರ್ನಾಟಕ ರೇಡಿಯೊ ಹೌಸ್ನ ಎಲೆಕ್ಟ್ರಾನಿಕ್ ವ್ಯಾಪಾರಿ ವಿಶ್ವನಾಥ ಖೂಬಾ ಹಣ ಕಳೆದುಕೊಂಡವರು.

‘ಮೇ 21ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿ ತಾನು ಶರ್ಮಾ ಎಂದು ಹಿಂದಿಯಲ್ಲಿ ಪರಿಚಯಿಸಿಕೊಂಡು, ನನ್ನ ಮತ್ತು ಕುಟುಂಬದ ಯೋಗಕ್ಷೇಮ ವಿಚಾರಿಸಿದ. ಹಾಗಾಗಿ, ಇವರು ರಾಂಚಿಯಲ್ಲಿರುವ ನಮ್ಮ ಸಂಬಂಧಿಕರಿರಬಹುದು ಎಂದು ನಂಬಿದೆ. ಬಳಿಕ ಆತ, ತನ್ನ ಅಣ್ಣ ಅಪೋಲೊ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದು, ಅವರಿಗೆ ಸ್ಟಂಟ್ ಹಾಕಲು ₹1.90 ಲಕ್ಷ ಖರ್ಚಾಗುತ್ತಿದೆ. ತನ್ನ ಬ್ಯಾಂಕ್ ಖಾತೆಯಿಂದ ವೈದ್ಯ ಡಾ.ಸೋನುವಾಲ ಕಪೀಲ್ ಅವರ ಮೊಬೈಲ್ಗೆ ವರ್ಗಾವಣೆ ಆಗುತ್ತಿಲ್ಲ. ಆ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದೇನೆ ಎಂದು ಹಂತಹಂತವಾಗಿ ₹3.01 ಲಕ್ಷ ಜಮಾ ಆದಂತೆ ಟೆಕ್ಸ್ಟ್ ಮೆಸೇಜ್ ಕಳಿಸಿದ’ ಎಂದು ವ್ಯಾಪಾರಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

‘ಹಣ ಜಮಾ ಆದಂತೆ ಕಳಿಸಿದ ಮೆಸೇಜ್ ನಂಬಿ ವೈದ್ಯರ ಮೊಬೈಲ್ಗೆ ₹90 ಸಾವಿರ ವರ್ಗಾವಣೆ ಮಾಡಿದೆ. ಜೊತೆಗೆ ಮಗನಿಗೆ ಕರೆ ಮಾಡಿ, ಸಂಬಂಧಿಕರೊಬ್ಬರು ಆಸ್ಪತ್ರೆಯಲ್ಲಿದ್ದು ತುರ್ತಾಗಿ ಹಣ ಕಳುಹಿಸಬೇಕು ಎಂದು ಆತನಿಂದ ₹1 ಲಕ್ಷವನ್ನು ಕಳುಹಿಸಿದ್ದೇನೆ. ಬಳಿಕ ಮಗನ ಸಲಹೆಯಂತೆ ಹಣ ಜಮಾ ಆಗಿರುವ ಬಗ್ಗೆ ಪರಿಶೀಲಿಸಿಕೊಂಡಾಗ ಮೋಸ ಹೋಗಿರುವುದು ಗೊತ್ತಾಗಿದೆ. ಅಲ್ಲದೇ ಸಂಬಂಧಿಕರಿಗೆ ಕರೆ ಮಾಡಿದಾಗ ಅವರು ಕೂಡ ನಮ್ಮಲ್ಲಿ ಯಾವುದೇ ಸಂಬಂಧಿಕರು ಆಸ್ಪತ್ರೆಯಲ್ಲಿ ದಾಖಲಾಗಿಲ್ಲ ಎಂದು ತಿಳಿಸಿದರು’ ಎಂದು ಹೇಳಿದ್ದಾರೆ.

ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-34-924703784

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.