ಕಲಬುರಗಿ: ‘ಗುಲಬರ್ಗಾ ವಿಶ್ವವಿದ್ಯಾಲಯವು ಅಕ್ರಮಗಳ ತಾಣವಾಗಿದ್ದು, ಅಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ’ ಎಂದು ಶಿವಸೇನಾ ಪಕ್ಷದ ರಾಜ್ಯಾಧ್ಯಕ್ಷ ಆಂದೋಲಾ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದರು.

‘ಗುಲಬರ್ಗಾ ವಿವಿಯಲ್ಲಿ ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 281 ನೌಕರರನ್ನು ಕೆಲಸದಿಂದ ತೆಗೆಯುವುದು ಷಡ್ಯಂತ್ರ ಅಲ್ಲದೇ ಮತ್ತೇನಲ್ಲ. ಅವರ ಜಾಗಕ್ಕೆ ಹೊಸದಾಗಿ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡು ಅವರಿಂದ ₹1 ಲಕ್ಷ, ₹2 ಲಕ್ಷ ಲಂಚ ಪಡೆಯುವ ಹುನ್ನಾರ ಇದರ ಹಿಂದೆ ಅಡಗಿದೆ’ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ತಮಗಾದ ಅನ್ಯಾಯದ ವಿರುದ್ಧ ಗುತ್ತಿಗೆ ನೌಕರರು ಕಳೆದ 9 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ, ಇದಕ್ಕೆ ಕುಲಪತಿ, ಕುಲಸಚಿವರಾಗಲಿ, , ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಸ್ಪಂದಿಸಿಲ್ಲ. ನಾನೂ ಧರಣಿ ನಿರತರನ್ನು ಭೇಟಿ ಮಾಡಿದ್ದೆ. ಶೌಚಾಲಯವನ್ನೂ ಬಳಸದಂತೆ ಕೀಲಿ ಹಾಕಿದ್ದಾರೆ ಎಂದು ಮಹಿಳಾ ನೌಕರರು ಕಣ್ಣೀರು ಹಾಕಿದರು. ಇದು ಅಮಾನವೀಯ ಅಲ್ಲವೇ’ ಎಂದು ಪ್ರಶ್ನಿಸಿದರು.

‘ಧರಣಿ ನಿರತ ಹೋರಾಟಗಾರರ ಪೈಕಿ ಬಹುತೇಕರು ಪರಿಶಿಷ್ಟ ಸಮುದಾಯದವರು. ಅವರ ಬಗೆಗೆ ಕಾಳಜಿ ತೋರದ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾಗಿದ್ದ ನಿಂಗಪ್ಪ ಕಣ್ಣೂರ ಅವರನ್ನು ಗುಲಬರ್ಗಾ ವಿವಿ ಮೌಲ್ಯಮಾಪನ ಕುಲಸಚಿವರನ್ನಾಗಿ ನೇಮಿಸುವಂತೆ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆಯುತ್ತಾರೆ. ಕಣ್ಣೂರ ಅವರನ್ನು ಕುಲಸಚಿವರನ್ನಾಗಿ ನೇಮಿಸಲು ಅವಕಾಶವಿದೆಯೇ ಎಂಬ ಸ್ಪಷ್ಟೀಕರಣವನ್ನು ಉನ್ನತ ಶಿಕ್ಷಣ ಇಲಾಖೆ ಕೋರಿತ್ತು. ಅವಕಾಶವಿಲ್ಲ ಎಂದು ಗುಲಬರ್ಗಾ ವಿವಿಯೇ ಸ್ಪಷ್ಟಪಡಿಸಿದೆ. ಹಾಗಾದರೆ ಯಾವ ಆಧಾರದಲ್ಲಿ ಕಣ್ಣೂರ ಕುಲಸಚಿವರಾಗುತ್ತಾರೆ’ ಎಂದರು.

‘ಕುಲಪತಿ, ಕುಲಸಚಿವರು ಕಿತ್ತು ಹಾಕುವುದಿದ್ದರೆ ನಿಂಗಪ್ಪ ಕಣ್ಣೂರ ಅವರನ್ನು ಮೌಲ್ಯಮಾಪನ ಕುಲಸಚಿವ ಸ್ಥಾನದಿಂದ ಕಿತ್ತು ಹಾಕಬೇಕು; ನಿಮ್ಮ ದರ್ಪ, ದಬ್ಬಾಳಿಕೆ ಬಡಪಾಯಿಗಳ ಮೇಲೆ ತೋರಿಸಬಾರದು. ದುಡಿದು ತಿನ್ನುವ ಕೈಗಳನ್ನೇ ಕಟ್ಟುವುದಾದರೆ ಬಸವತತ್ವಕ್ಕೆ ಬೆಲೆ ಎಲ್ಲಿದೆ? 9 ದಿನಗಳಿಂದ ಹೋರಾಟ ನಡೆಸುತ್ತಿರುವವರು ಹಿಂಸೆ ಅನುಭವಿಸುತ್ತಿದ್ದಾರೆ. ನಿಮಗೆ ಅಹಿಂಸೆ ಬೋಧಿಸಿದ ಬುದ್ಧನ ತತ್ವಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದ್ದೀರಿ. ನಿಯಮ ಬಾಹಿರವಾಗಿ ನೇಮಕಾತಿ ಮಾಡಿ ಅಂಬೇಡ್ಕರ್ ತತ್ವಕ್ಕೆ ಚ್ಯುತಿ ತರುತ್ತೀದ್ದೀರಿ. ಮಾತಿನಲ್ಲಿ ಸಂವಿಧಾನದ ತತ್ವಗಳನ್ನು ಪುಂಖಾನುಪುಂಖವಾಗಿ ಬೋಧಿಸುತ್ತಾರೆ. ಆದರೆ, ಆಚರಣೆ ಮಾತ್ರ ವ್ಯತಿರಿಕ್ತ’ಎಂದು ವಾಗ್ದಾಳಿ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುಶಾಂತ ಟೆಂಗಳಿ, ರಾಕೇಶ ಜಮಾದಾರ, ಪ್ರದೀಪ ಹೇರೂರ, ಪ್ರಶಾಂತ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-34-56959650

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.