ಕಲಬುರಗಿ: ‘ದೇಶ ಹಾಗೂ ಕರ್ನಾಟಕದಲ್ಲಿ ಉಪ್ಪಾರ ಸಮಾಜದ ಇತಿಹಾಸವನ್ನು ಗಮನಿಸಿದರೆ ಚಾರಿತ್ರ್ಯಿಕ ಹಾಗೂ ಭವ್ಯ ಪರಂಪರೆ ಹೊಂದಿದೆ. ಆದರೆ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕವಾಗಿ ಬಹಳ ಹಿಂದೆ ಉಳಿದಿದೆ’ ಎಂದು ಸಹಕಾರ ಸಂಘಗಳ ಹಿರಿಯ ಲೆಕ್ಕಪರಿಶೋಧಕ ರಂಗನಾಥ ಎಸ್.ಜಡಿ ಹೇಳಿದರು.

ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಒಂದು ಅಂದಾಜಿನ ಪ್ರಕಾರ ಸಮಾಜದ ಜನರ ಸಾಕ್ಷರತೆ ಶೇ 45ಕ್ಕಿಂತ ಕಡಿಮೆ ಇದೆ. ಸಮಾಜ ಎಲ್ಲ ರಂಗದಲ್ಲಿಯೂ ಮುಂದೆ ಬರಬೇಕಾದರೆ ಸಾಕ್ಷರತೆ ಬಹಳ ಮುಖ್ಯವಾಗಿದೆ. ಆದ್ದರಿಂದ ಭಗೀರಥ ಮಹಾರಾಜರ ಪ್ರಯತ್ನದಂತೆ ಸಮಾಜದ ಎಲ್ಲರೂ ಜಾಗೃತರಾಗಿ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು. ಆಗ ಎಲ್ಲ ಅವಕಾಶಗಳು ಸಿಗಲು ಸಾಧ್ಯವಿದೆ’ ಎಂದರು.

‘ಉಪ್ಪಾರ ಸಮಾಜದ ಕುಲಕಸುಬು ಬಗ್ಗೆ ಕೆಲವು ಉಲ್ಲೇಖಗಳನ್ನು ಗಮನಿಸಿದಾಗ ರಾಜ ಮಹಾರಾಜರ ಕೋಟೆಕೊತ್ತಲುಗಳು, ಅಣೆಕಟ್ಟುಗಳ ನಿರ್ಮಾಣ ಮಾಡುತ್ತಿದ್ದರು. ಬೇರೆ ಉಲ್ಲೇಖಗಳನ್ನು ಗಮನಿಸಿದಾಗ ಉಪ್ಪು ತಯಾರಿಕೆ ಕೆಲಸ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ’ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಗೋವಿಂದ ಸಗರ ಮಾತನಾಡಿದರು. ಭಗೀರಥ ಕೋ– ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ವೆಂಕಟೇಶ ನಿರಡಗಿ, ಸತೀಶ ಸಗರ, ಗೋಪಾಲ ದೊಡ್ಡಮನಿ, ಬಸವರಾಜ ನಾಲವಾರ, ಭೀಮರಾಯ ಇಟಿ, ಮೌನೇಶ ಪೂಜಾರಿ ಸೇರಿದಂತೆ ಇತರರು ಹಾಜರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ನಾಶಿ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-34-12117641

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.