ಕಲಬುರಗಿ: ಉರುಸ್ ಶರೀಫ್ ಸಂದರ್ಭದಲ್ಲಿ ಆಯೋಜಿಸಲಾದ ಅಖಿಲ ಭಾರತ ಕೈಗಾರಿಕಾ ವಸ್ತುಪ್ರದರ್ಶನ ಐತಿಹಾಸಿಕ ಹಾಗೂ ಪವಿತ್ರ ಪ್ರದರ್ಶನವಾಗಿದೆ. ಈ ಪ್ರದರ್ಶನದಲ್ಲಿ ವ್ಯಾಪಾರ ಮಾಡುವ ಅಂಗಡಿ ಮಾಲೀಕರು ಹಾಗೂ ಖರೀದಿದಾರರಿಗೂ ಖಾಜಾ ಬಂದಾನವಾಜ್ರ ಆಶೀರ್ವಾದ ಲಭಿಸುತ್ತದೆ ಎಂದು ದರ್ಗಾ ಮುಖ್ಯಸ್ಥರೂ ಆದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಹೇಳಿದರು.

ನಗರದ ಗೇಸುದರಾಜ ಹಜರತ್ ಖಾಜಾ ಬಂದಾನವಾಜ್ ಅವರ 622ನೇ ಉರುಸ್ ಶರೀಫ್ ಅಂಗವಾಗಿ ದರ್ಗಾ ಬಳಿಯ ಖಾಜಾ ಬಜಾರ್ನಲ್ಲಿ ಆಯೋಜಿಸಿದ್ದ ಅಖಿಲ ಭಾರತ ಕೈಗಾರಿಕಾ ವಸ್ತುಪ್ರದರ್ಶನದ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಕೈಗಾರಿಕಾ ಪ್ರದರ್ಶನದಲ್ಲಿ ವಿವಿಧ ವಿಭಾಗಗಳ ಅಂಗಡಿಗಳನ್ನು ಅವುಗಳ ಅಲಂಕಾರ, ಉತ್ಪನ್ನಗಳ ಗುಣಮಟ್ಟ ಹಾಗೂ ಗ್ರಾಹಕರೊಂದಿಗೆ ನಡೆಸಿದ ವರ್ತನೆ ಆಧರಿಸಿ ಬಹುಮಾನಗಳಿಗೆ ಆಯ್ಕೆ ಮಾಡಲಾಯಿತು. ಪ್ರತಿ ವಿಭಾಗದ ಅಂಗಡಿಗಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ವಿತರಿಸಲಾಯಿತು.

ಉರುಸ್ ವ್ಯವಸ್ಥಾಪನೆಗೆ ಸಹಕರಿಸಿದ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

ಯಾದಗಿರಿ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ತುಕಾರಾಂ, ಕೆಬಿಎನ್ ವಿಶ್ವವಿದ್ಯಾಲಯದ ನಿರ್ದೇಶಕ ಮುಸ್ತಫಾ ಅಲ್ ಹುಸೇನಿ, ಉಪಕುಲಪತಿ ಪ್ರೊ. ಅಲಿ ರಝಾ ಮೂಸ್ವಿ, ಪ್ರೊ. ಅಶ್ಫಾಕ್ ಅಹ್ಮದ, ಮೀರ ವಿಲಾಯತ್ ಅಲಿ, ಅಖಿಲ ಭಾರತ ಸಯ್ಯದ್ ಮೊಹಮ್ಮದ್ ಗೇಸುದರಾಜ್ ರಿಸರ್ಚ್ ಅಕಾಡೆಮಿಯ ನಿರ್ದೇಶಕ ಪ್ರೊ. ಮುಸ್ತಫಾ ಶರೀಫ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-34-1376127845

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.