ಕಲಬುರಗಿ: ‘ಅಗ್ನಿನಂದಕಗಳನ್ನು ಕ್ರಮಬದ್ಧವಾಗಿ ಬಳಸುವ ವಿಧಾನಗಳ ಕುರಿತು ಆಸ್ಪತ್ರೆಯ ಸಿಬ್ಬಂದಿಗೆ ಕಲಿಸಿಕೊಡುವುದು ಮತ್ತು ಅಗ್ನಿ ಅವಘಡದ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಮತ್ತು ಸುರಕ್ಷತೆಯ ಕ್ರಮಗಳ ಕುರಿತು ಜಾಗೃತಿ ಮೂಡಿಸಲು ಅಗ್ನಿಶಾಮಕ ಇಲಾಖೆ ಕಾಲಕಾಲಕ್ಕೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ’ ಎಂದು ಜಿಲ್ಲಾ ಅಗ್ನಿ ಶಾಮಕ ಠಾಣೆಯ ಅಧಿಕಾರಿ ಪ್ರವೀಣ ಎಂ.ಕೆ. ಹೇಳಿದರು.

ಶಾಂತಿ ನಗರದ ಉಸ್ತಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಆಶ್ರಯದಲ್ಲಿ ಈಚೆಗೆ ಆಯೋಜಿಸಿದ್ದ ‘ಸುರಕ್ಷಿತ ಶಾಲೆ, ಆಸ್ಪತ್ರೆ ಮತ್ತು ಅಗ್ನಿ ಸುರಕ್ಷತೆಯ ಅರಿವುಳ್ಳ ಸಮಾಜ– ಅಗ್ನಿ ಮುಂಜಾಗ್ರತೆಗಾಗಿ ಒಂದಾಗಿ’ ಎಂಬ ಘೋಷವಾಕ್ಯದ ಜಾಗೃತಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಅಗ್ನಿದುರಂತದ ಸಂದರ್ಭದಲ್ಲಿ ಮೆಟ್ಟಿಲುಗಳ ಸಹಾಯದಿಂದ ಕೆಳಮುಖವಾಗಿ ಹೊರಬರಬೇಕು. ಅಲ್ಲದೇ ಬೆಂಕಿ ಬೆಂಕಿ... ಬೆಂಕಿ.. ಎಂದು ಕೂಗುತ್ತ ಸಾಗುವುದು ಅತಿಮುಖ್ಯವಾಗಿರುತ್ತದೆ. ಇದರಿಂದ ಉಳಿದವರು ಜಾಗೃತಗೊಂಡು ತಮ್ಮನ್ನು ಹಿಂಬಾಲಿಸುವ ಮೂಲಕ ಸುರಕ್ಷಿತ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸ್ಪತ್ರೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ತನ್ವೀರ ಹುಸೇನ ಉಸ್ತಾದ ವಹಿಸಿದ್ದರು. ಆಸ್ಪತ್ರೆಯ ನಿದೇರ್ಶಕಿ ಡಾ.ಸೈಯಿದಾ ಸುಬಿಯಾ ತನ್ವೀರ, ಡಾ.ಮಹ್ಮದ್ ಅಬ್ದುಲ ರಜಾಕ ಮಡಕಿ, ಡಾ.ಇರ್ಫಾನ್ ವಾರಿಸ್, ಡಾ.ಅನ್ನು ಚವ್ಹಾಣ, ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ಮಹಾದೇವ, ಹೊನ್ನಪ್ಪ, ಮಿರಾಜ ಮತ್ತು ಆಸ್ಪತ್ರೆಯ ಸನಾ ಬೇಗಂ, ಫಯಾಜ್, ಸಾಬೇರ ಅಹ್ಮದ್ ಪಟೇಲ ಸೇರಿದಂತೆ ವೈದ್ಯಕೀಯ ಸಿಬ್ಬಂದಿ, ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-34-365354319

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.