ಸಿದ್ದರಾಜ ಎಸ್ ಮಲ್ಕಂಡಿ

ವಾಡಿ: ಪಟ್ಟಣದ ಪುರಸಭೆ ವ್ಯಾಪ್ತಿಯ ಹನುಮಾನ ನಗರ ಬಡಾವಣೆ ಕನಿಷ್ಠ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಸ್ಥಳೀಯ ಆಡಳಿತದ ನಿರ್ಲಕ್ಷದಿಂದ ಜನರು ಕೊಳಚೆ ಪ್ರದೇಶದ ನರಕ ಜೀವನ ಅನುಭವಿಸುತ್ತಿದ್ದಾರೆ.

ಬಡಾವಣೆಯಲ್ಲಿ 650 ಮನೆಗಳಿದ್ದು 1,800 ಜನ ವಾಸಿಸುತ್ತಿದ್ದಾರೆ. ಬಹುತೇಕರು ಬಡ ಕೂಲಿಕಾರ್ಮಿಕರೇ ವಾಸಿಸುತ್ತಿದ್ದಾರೆ. ಆದರೆ ಚರಂಡಿ, ರಸ್ತೆ, ಶುದ್ಧ ಕುಡಿಯುವ ನೀರಿನ ಕನಿಷ್ಠ ಸೌಲಭ್ಯಗಳಿಲ್ಲದೆ ಸ್ಥಳೀಯರು ವಂಚಿತರಾಗಿದ್ದಾರೆ.

ಬಡಾವಣೆಯ ಖಾಲಿ ಜಾಗದಲ್ಲಿ ಜಾಲಿಮರಗಳು ಬೆಳೆದು ನಿಂತಿದ್ದು ಹಾವು, ಚೇಳುಗಳು ಮತ್ತು ಹಂದಿಗಳ ನೆಚ್ಚಿನ ತಾಣಗಳಾಗಿವೆ. ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಬಚ್ಚಲ ಕೊಳಚೆ ನೀರು ಮನೆಗಳ ತಳಪಾಯ ಹಾಗೂ ಖಾಲಿ ಜಾಗದಲ್ಲಿ ನಿಂತು ದುರ್ಗಂಧ ಹರಡುತ್ತಿದೆ. ಇದರಿಂದ ಸ್ಥಳೀಯರು ಮೂಗು ಮುಚ್ಚಿಕೊಂಡು ತಿರುಗಾಡುವ ಸ್ಥಿತಿ ನಿರ್ಮಾಣವಾಗಿದೆ.

ಸಿಸಿ ರಸ್ತೆ ಇಲ್ಲದ ಕಾರಣ ಜನರು ನಡೆದಾಡಲು ಸಂಕಷ್ಟ ಪಡುವಂತಾಗಿದೆ. ನಿಂತ ಕೊಳಚೆ ನೀರಿನಿಂದ ಸೊಳ್ಳೆಗಳು ಹೆಚ್ಚುತ್ತಿದ್ದು, ಜನರಿಗೆ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿವೆ. ಮಳೆ ಬಂದರೆ ಕೊಳಚೆ ನೀರು ಜನರ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುತ್ತದೆ. ಮನೆಗೆ ನುಗ್ಗುವ ಹಾವುಚೇಳುಗಳು ಜನರ ಜೀವದ ಜತೆ ಚೆಲ್ಲಾಟವಾಡುತ್ತಿವೆ. ಇಡೀ ಬಡಾವಣೆ ನರಕದ ಸ್ವರೂಪ ಪಡೆದುಕೊಂಡಿದ್ದು ಸ್ವಚ್ಛತೆ ಸಂಪೂರ್ಣ ಮರೆಯಾಗಿದೆ.

ಖಾಸಗಿ ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ತಿಳಿಹೇಳುವ ತಪ್ಪಿದರೆ ನೋಟೀಸ್ ನೀಡುವ ಕಾರ್ಯ ಸ್ಥಳೀಯ ಪುರಸಭೆ ಮಾಡಬೇಕಿದೆ. ಎಸಿಸಿ ಕಾರ್ಖಾನೆ ನೀರು ಶುದ್ಧಿಕರಣ ಘಟಕ ಸ್ಥಾಪಿಸಿದೆ, ಆದರೆ ಬೋರವೆಲ್ ಇಲ್ಲದಿರುವುದರಿಂದ ಘಟಕ ನಿಷ್ಪ್ರಯೋಜಕವಾಗಿದೆ.

ಬಡಾವಣೆಯಲ್ಲಿ ಸಿಸಿ ರಸ್ತೆ, ಚರಂಡಿ, ಬೀದಿದೀಪಗಳ ಅಳವಡಿಕೆ, ಜಾಲಿಮರಗಳ ತೆರವು, ಹಂದಿಗಳ ಸಾಗಣೆ ಹಾಗೂ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಾಡುವುದು ಅವಶ್ಯಕವಾಗಿದೆ ಎನ್ನುವ ಸ್ಥಳೀಯರು ಪುರಸಭೆಗೆ ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-31-349866120

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.