ವಾಡಿ: ಅಲಹಳ್ಳಿ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಲ್ಲಿ ನಿರಂತರ ಸಮಸ್ಯೆ ಉಂಟಾಗುತ್ತಿದ್ದು, ಬಿಸಿಲಿನಿಂದ ಬಸವಳಿಯುತ್ತಿರುವ ಜನರಿಗೆ ವಿದ್ಯುತ್ ಪದೇ ಪದೇ ಕೈಕೊಡುತ್ತಿರುವುದು ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹಣ್ಣಿಕೇರಾ, ಬೊಮ್ಮನಳ್ಳಿ, ಅಲಹಳ್ಳಿ, ಹೊಸೂರು, ಸಾತನೂರು, ಬಂಕಲಗಾ, ಡೋಣಗಾಂವ, ಲಾಡ್ಲಾಪುರ, ಕರದಳ್ಳಿ, ಅಲ್ಲೂರು ಸಹಿತ 22 ಹಳ್ಳಿಗಳು ಮತ್ತು 23 ತಾಂಡಾಗಳ ಜನರು ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೋಸಿ ಹೋಗುತ್ತಿದ್ದಾರೆ.

ಅಳ್ಕೊಳ್ಳಿಯ 33 ಕೆವಿ ಉಪ ಕೇಂದ್ರದ ಮೂಲಕ ನಿರಂತರ ಜ್ಯೋತಿ ಯೋಜನೆ ಜಾರಿ ಮಾಡಲಾಗಿದೆ. ಆದರೂ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಜನರು ನಿರಂತರವಾಗಿ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ.

ಯಾವುದೇ ಒಂದು ಗ್ರಾಮದಲ್ಲಿ ಮತ್ತು ಟಿಸಿಯಲ್ಲಿ ದೋಷ ಕಂಡುಬಂದಾಗ ಜಿಓಸಿ ವ್ಯವಸ್ಥೆ ಇಲ್ಲದ ಕಾರಣ ಇಡೀ ಫೀಡರ್ ಆಫ್ ಮಾಡುತ್ತಿದ್ದು ಬೇರೆ ಹಳ್ಳಿಗಳಿಗೂ ತೊಂದರೆಯಾಗುತ್ತಿದೆ. ಇದರ ಬದಲು ಪ್ರತಿ ಟಿಸಿಗೂ ಜಿಓಸಿ ಅಳವಡಿಸಿದರೆ ಸಮಸ್ಯೆ ಇರುವ ಭಾಗವನ್ನು ಮಾತ್ರ ಬೇರ್ಪಡಿಸಿ ಉಳಿದ ಹಳ್ಳಿಗಳಿಗೆ ವಿದ್ಯುತ್ ನೀಡಬಹುದು. ಆದರೆ ಈ ಕೆಲಸ ಇಲ್ಲಿ ನಡೆಯುತ್ತಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.

ದಿನಕ್ಕೆ 20ಕ್ಕೂ ಅಧಿಕ ಬಾರಿ ವಿದ್ಯುತ್ ಕಟ್: ಅಲಹಳ್ಳಿ ಉಪಕೇಂದ್ರವು ಕಲಬುರಗಿ ವಿಭಾಗ-2ರಲ್ಲಿ ಅತೀ ದೊಡ್ಡ ವಿದ್ಯುತ್ ಜಾಲಮಾರ್ಗ ಹೊಂದಿದೆ. ಆದರೆ ಸೂಕ್ತ ನಿರ್ವಹಣೆ ಕೊರತೆಯಿಂದ ವಿದ್ಯುತ್ ಕೈ ಕೊಡುತ್ತಿದೆ. ಸ್ವಲ್ಪ ಮಳೆ, ಗಾಳಿಗೂ ವಿದ್ಯುತ್ ಕಡಿತವಾಗುತ್ತಿದೆ. ಕಂಬಗಳ ಮಧ್ಯೆ ದೊಡ್ಡ ಮಟ್ಟದ ಅಂತರ ಇದ್ದು ಸಮಸ್ಯೆ ಹೆಚ್ಚಿಸಿದೆ. ಸಣ್ಣ ಗಾಳಿಗೂ ಸಮಸ್ಯೆ ಉಂಟಾಗುತ್ತಿದ್ದು ವಿದ್ಯುತ್ ಮಾರ್ಗ ನಿರ್ವಹಣೆ ನಿರ್ಲಕ್ಷದಿಂದ ದಿನವೊಂದಕ್ಕೆ ಏನಿಲ್ಲವೆಂದರೂ 10-15 ಬಾರಿ ವಿದ್ಯುತ್ ಪೂರೈಕೆ ಕಡಿತವಾಗುತ್ತಿದೆ ಎಂದು ಆಕ್ರೋಶ ಶರಣಪ್ಪ ಅಳ್ಳೊಳ್ಳಿ, ಸಾಬಣ್ಣ ಯಾಗಾಪುರ, ದೇವಿಂದ್ರಪ್ಪ ಅಲ್ಲೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೇ ಜೆಸ್ಕಾಂ ಇಲಾಖೆ ಸಮರ್ಪಕ ವಿದ್ಯುತ್ ಪೂರೈಕೆಗೆ ಮುಂದಾಗಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.