ವಾಡಿ: ವಿದ್ಯುತ್ ಪೂರೈಕೆಯಲ್ಲಿ ತಾಂತ್ರಿಕ ದೋಷದಿಂದಾಗಿ ಮಂಗಳವಾರ ರಾತ್ರಿ 30ಕ್ಕೂ ಅಧಿಕ ಹಳ್ಳಿಗಳ ಜನರು ವಿದ್ಯುತ್ ಇಲ್ಲದೇ ಸಂಕಷ್ಟ ಎದುರಿಸಿದ ಘಟನೆ ಜರುಗಿತು.

ಹಲವು ವರ್ಷಗಳಿಂದ ಅಲಹಳ್ಳಿ ಉಪಕೇಂದ್ರ ವ್ಯಾಪ್ತಿಯಲ್ಲಿ ಪದೇ ಪದೇ ವಿದ್ಯುತ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಸಣ್ಣ ಮಳೆ–ಗಾಳಿಗೂ ರಾತ್ರಿಯಿಡೀ ವಿದ್ಯುತ್ ಕೈಕೊಡುತ್ತಿದೆ. ವಿದ್ಯುತ್ ಸರಬರಾಜು ಜಾಲ ದೊಡ್ಡದಿದ್ದು ನಿರ್ವಹಣೆ ಕೊರತೆಯಿಂದ ಪದೇ ಪದೇ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ದಿನಕ್ಕೆ ಹಲವು ಬಾರಿ ವಿದ್ಯುತ್ ಕೈಕೊಡುತ್ತಿದ್ದು ಜೆಸ್ಕಾಂ ಕಾರ್ಯವೈಖರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪದೇ ಪದೇ ವಿದ್ಯುತ್ ಸಮಸ್ಯೆ ಕಂಡು ಬರುತ್ತಿದ್ದು, ರೈತರು, ಸಣ್ಣ ಉದ್ದಿಮೆದಾರರು ಸಂಕಷ್ಟ ಎಸುರಿಸುತ್ತಿದ್ದಾರೆ. ನಿರ್ವಹಣೆ ಮಾಡಿ ಸಮಸ್ಯೆ ಕಾಣಿಸಿಕೊಳ್ಳದಂತೆ ಕ್ರಮ ವಹಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಚಿತ್ತಾಪುರ ತಾಲ್ಲೂಕು ಅಧ್ಯಕ್ಷ ರಾಜಕುಮಾರ ಯರಗೋಳ ಅಗ್ರಹಿಸಿದ್ದಾರೆ.

ಲಾಡ್ಲಾಪುರ ಗ್ರಾಮದಲ್ಲಿ ಮಂಗಳವಾರ ಟ್ರಾನ್ಸ್ಫರ್ಮರ್ ಸುಟ್ಟಿದ್ದರಿಂದ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿತು. 2 ದಿನ ಕಳೆದರೂ ಟ್ರಾನ್ಸ್ಫರ್ಮರ್ ಬದಲಾವಣೆ ಮಾಡಿ ವಿದ್ಯುತ್ ಸಮಸ್ಯೆ ನೀಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-31-1058148622

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.