ಕಲಬುರಗಿ: ‘ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಆಂದೋಲಾ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಜಿಲ್ಲಾಡಳಿತ 5 ದಿನಗಳಲ್ಲಿ ಪರಿಹಾರ ಒದಗಿಸದಿದ್ದರೆ ಬೀದರ್–ಬೆಂಗಳೂರು ಹೆದ್ದಾರಿಯಲ್ಲಿ ಹೋರಾಟ ನಡೆಸಲಾಗುವುದು’ ಎಂದು ಶಿವಸೇನಾ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಎಚ್ಚರಿಸಿದರು.

‘ಆಂದೋಲಾದಲ್ಲಿ ಸುಮಾರು 10 ಸಾವಿರ ಜನಸಂಖ್ಯೆ ಇದೆ. ಗ್ರಾಮದಲ್ಲಿ ಹಲವು ವರ್ಷಗಳಿಂದ ನೀರಿನ ಸಮಸ್ಯೆ ಇದೆ. 25 ದಿನಕ್ಕೊಮ್ಮೆ ನಲ್ಲಿಯಲ್ಲಿ ನೀರು ಬರುತ್ತದೆ. ಪಿಡಿಒ 15 ದಿನಕ್ಕೊಮ್ಮೆ ಪಂಚಾಯಿತಿಗೆ ಬರುತ್ತಾರೆ. ಹಿಂದಿನ ಪಿಡಿಒ ರಾಜಶೇಖರ ನೆಲೋಗಿ ₹12 ಲಕ್ಷ ಲೂಟಿ ಮಾಡಿದ್ದು, ವಸೂಲಿಗಾಗಿ ಆದೇಶ ಮಾಡಿ ವರ್ಷ ಕಳೆದರೂ ಹಣ ಪಾವತಿಸಿಲ್ಲ. ಪಂಚಾಯತ್ ರಾಜ್ ಸಚಿವರು ಇತ್ತ ಗಮನ ಹರಿಸಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಜೆಜೆಎಂ ಕಾಮಗಾರಿ ಮುಗಿದು 2 ವರ್ಷ ಕಳೆದರೂ ಭೀಮಾ ನದಿಯಿಂದ ನೀರು ಸರಬರಾಜು ಆಗುತ್ತಿಲ್ಲ. ಕಳೆದ ಡಿಸೆಂಬರ್ನಲ್ಲಿ ಗ್ರಾಮಸ್ಥರು ಮತ್ತು ನಾವು ಜೀವರ್ಗಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದಾಗ 15 ದಿನಗಳಲ್ಲಿ ನೀರು ಸರಬರಾಜು ಮಾಡುವುದಾಗಿ ಅಧಿಕಾರಿಗಳು ಹೇಳಿದ್ದರು. 5 ತಿಂಗಳಾದರೂ ನೀರಿಲ್ಲ. ಕೇಳಿದರೆ ಫಂಡ್ ಇಲ್ಲ ಎನ್ನುತ್ತಾರೆ’ ಎಂದು ದೂರಿದರು.

‘ಶಾಸಕ ಅಜಯ್ಸಿಂಗ್ ಅವರು ಗ್ರಾಮದ ಮೂಲಸೌಕರ್ಯಗಳ ಬಗ್ಗೆ ಲಕ್ಷ್ಯವಹಿಸುತ್ತಿಲ್ಲ. ಕೆಲ್ಲೂರ–ಆಂದೋಲಾ ರಸ್ತೆ ಹಾಳಾಗಿ 5 ವರ್ಷಗಳಾಗಿದೆ. ಶಾಸಕರು ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಕಳೆದ 30ರಂದು ಕಾಂಗ್ರೆಸ್ ಮುಖಂಡರೊಬ್ಬರು ಅಕ್ರಮವಾಗಿ ಮುರುಮ್ ಸಾಗಿಸುತ್ತಿದ್ದ ವಾಹನವನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರೆ, ಅವರು ಯಾವುದೇ ಕ್ರಮ ಜರುಗಿಸದೆ ಬಿಟ್ಟು ಕಳಿಸಿದ್ದಾರೆ’ ಎಂದು ಆರೋಪಿಸಿದರು.

‘ಪಶ್ಚಿಮ ಬಂಗಾಳದಲ್ಲಿರುವ ಬಾಂಗ್ಲಾ ದೇಶದ ನುಸುಳುಕೋರರು ಬಂಗಾಳ ತೊರೆದು ಕಾಂಗ್ರೆಸ್ ಸರ್ಕಾರ ಇರುವ ಕರ್ನಾಟಕ, ತೆಲಂಗಾಣ, ಕೇರಳಕ್ಕೆ ಬರುತ್ತಿದ್ದಾರೆನ್ನುವ ವಿಷಯ ಹರಿದಾಡುತ್ತಿದೆ. ಪೊಲೀಸ್ ಇಲಾಖೆ ರೈಲು ನಿಲ್ದಾಣಗಳಲ್ಲಿ ತಪಾಸಣೆ ಕೇಂದ್ರಗಳನ್ನು ತೆರೆದು ವಾಪಸ್ ಕಳಿಸಬೇಕು’ ಎಂದು ಆಗ್ರಹಿಸಿದರು.

ಶಿವಸೇನಾ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಗುರುಶಾಂತ ಟೆಂಗಳಿ, ಶಿವರಾಜ ಬಾಳಿ, ಮಲ್ಕಣ್ಣ ಹಿರೇಪೂಜಾರಿ, ರಾಕೇಶ್ ಜಮಾದರ, ರೋಹಿತ್ ಪಿಸ್ಕೆ, ಪ್ರಭಾಕರ ವಿಶ್ವಕರ್ಮ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-34-2076554745

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.