ಬಷೀರಅಹ್ಮದ್ ನಗಾರಿ

ಕಲಬುರಗಿ: ‘ಪಾಲಿಕೆಯ ನಳದ ನೀರು ಕುಡಿಯಾಕ್ ಬಿಡ್ರಿ; ಬೆಳಿಗೆದ್ದು ಬ್ರೆಷ್ ಮಾಡಿ ಬಾಯಿ ಮುಕ್ಕಳಿಸಿಲಿಕ್ಕೂ ಲಾಯಕ್ಕಿಲ್ಲ. ಅಷ್ಟು ದುರ್ನಾತ, ಹೊಲಸು ಐತಿ...ಅದನ್ನು ಕುಡದ್ರ ನಾವ್ ಹೆಂಗ್ ಬದುಕಬೇಕ್ ಹೇಳ್ರಿ...?’

ಇದು ನಗರದ ಹೊಸ ಜೇವರ್ಗಿ ರಸ್ತೆಯ ಪ್ರತಿಷ್ಠಿತ ಗೋದುತಾಯಿ ಬಡಾವಣೆ ನಿವಾಸಿ ಶಿವರಾಯ ಬಗಳಾನೂರ ಅವರ ಸಾತ್ವಿಕ ಆಕ್ರೋಶ. ಬಹುತೇಕ ಹಿರಿಯ ನಾಗರಿಕರಿಂದಲೇ ತುಂಬಿರುವ ಈ ಬಡಾವಣೆಯಲ್ಲಿ 300ಕ್ಕೂ ಅಧಿಕ ಮನೆಗಳಿವೆ. ಮೇ ತಿಂಗಳ ಹೊತ್ತಿಗೆ ಇಲ್ಲಿನ ಕೊಳವೆಬಾವಿಗಳು ಬಹುತೇಕ ಒಣಗುತ್ತವೆ. ಪಾಲಿಕೆಯ ನಳದ ನೀರೇ ಬಹುತೇಕ ಜನರ ದಿನಬಳಕೆಗೆ ಆಧಾರ. ಆದರೆ, ಪಾಲಿಕೆ ಪೂರೈಸುತ್ತಿರುವ ನೀರಿನ ಗುಣಮಟ್ಟ ಬಡಾವಣೆ ನಾಗರಿಕರನ್ನು ಹೈರಾಣಾಗಿಸಿದೆ.

‘ಮೊದಲು ವಾರದಲ್ಲಿ ಎರಡು ಸಲ ನೀರು ಬರ್ತಿತ್ತು. ಇದೀಗ ಮನಸ್ಸಿಗೆ ಬಂದಾಗ ನೀರು ಬಿಡ್ತಾರೆ. ಆ ನೀರಿನಲ್ಲಿ ಹಸಿರು ಪಾಚಿಗಟ್ಟಿದಂಥ ಕಲ್ಮಶ ಇರುತ್ತೆ. ನೀರು ನೋಡಿದರೆ ಅದರಲ್ಲಿ ಕೈ ಹಾಕಲೂ ಮನಸ್ಸು ಬರಲ್ಲ. ಬೆಳಿಗ್ಗೆ ಬ್ರಷ್ನಿಂದ ಹಲ್ಲುಜ್ಜಿ ಬಾಯಿ ತೊಳ್ಯಾಕೂ ಫಿಲ್ಟರ್ ನೀರೇ ಬಳಸವಂಗ ಆಗೈತಿ. ಬರೀ ಶೌಚಾಲಯ, ಬಟ್ಟೆಗೆ ಒಲ್ಲದ ಮನಸ್ಸಿನಿಂದ ಅದನ್ನು ಬಳಸುವಂಗಾಗೈತಿ. ನಾನಂತೂ ಜಳಕಾ ಮಾಡೋ ಮುಂದ ಬಕೇಟ್ ನೀರಿಗೆ 5 ಎಂಎಲ್ ಡೆಟಾಲ್ ಹಾಕ್ಲಿ ಕತ್ತೇನಿ’ ಎಂದು 80 ವರ್ಷದ ಹಿರಿಜೀವ ಶಿವರಾಯ ಅಳಲು ತೋಡಿಕೊಂಡರು.

‘ಇದು ಪಾಲಿಕೆ ಪೂರೈಸುವ ನೀರು ನೋಡ್ರಿ. ಕೆಟ್ಟ ವಾಸನಿ ಐತಿ. ನೀರನ್ಯಾಗ ಪಾಚಿ ತುಂಬೈತಿ. ಕಲಬುರಗಿ ಸಿಟಿಯಿಂದ ಸರಡಗಿ ಬ್ಯಾರೇಜ್ ಕಡೀಗೆ ಹೋಗೋ ಚರಂಡಿ ನೀರೇ ಶುದ್ಧೀಕರಿಸಿ ನಮಗ ಕೊಟ್ಟಂಗೈತಿ’ ಎಂದು ಬಡಾವಣೆಯ 4ನೇ ಕ್ರಾಸ್ನ ನಿವಾಸಿ ಚನ್ನಾರೆಡ್ಡಿ ಅವರು ನಳದ ನೀರು ತುಂಬಿದ್ದ ಮೂರು ಬಾಟಲಿ, ಬೊಗಣಿ ತೋರಿಸಿ ಅನುಮಾನ ವ್ಯಕ್ತಪಡಿಸಿದರು. ಬೊಗಣಿ, ಬಾಟಲಿಯೊಳಗೆ ತುಂಬಿದ್ದ ನೀರು ತಿಳಿಹಸಿರು ಬಣ್ಣಕ್ಕೆ ತಿರುಗಿತ್ತು. ಪಾಚಿಯಂಥ ಪದಾರ್ಥವೂ ಅದರ ತಳದಲ್ಲಿತ್ತು. ಆ ನೀರು ದುರ್ನಾತವೂ ಬೀರುತ್ತಿತ್ತು.

‘ಮೊದಲೆಲ್ಲ ನಾಲ್ಕು ದಿನ ಕಳೆದು ಐದು ದಿನಕ್ಕೊಮ್ಮೆ ನೀರು ಬರ್ತಿತ್ತು. ಇದೀಗ ಮನಸ್ಸಿಗೆ ಬಂದಾಗ ನೀರು ಬಿಡ್ತಾರ. ಆ ನೀರು ಇಷ್ಟು ಕೆಟ್ಟದಾಗಿ ಇರ್ತೈತಿ’ ಎಂದು ಅಸ ಮಾಧಾನ ಹೊರ ಹಾಕಿದರು.

ಟ್ಯಾಂಕರ್ ನೀರೇ ಗತಿ: ‘ನಮ್ಮ ಬಡಾವಣೆಯಲ್ಲಿ ಹಿರಿಯ ನಾಗರಿಕರೇ ಹೆಚ್ಚು. ಮೇ ಹೊತ್ತಿಗೆ ಶೇ80ರಷ್ಟು ಕೊಳವೆಬಾವಿ ಬತ್ತಿವೆ. ಬಡಾವಣೆ ಜನರಿಗೆ ಪಾಲಿಕೆ ನೀರೇ ಬಹುತೇಕ ಆಧಾರ. ಆದರೆ, ಕಾರ್ಪೊರೇಷನ್ ಪೂರೈಸುತ್ತಿರುವ ನೀರಿನಲ್ಲಿ ಚರಂಡಿ ನೀರಿನಂತೆ ಬುರುಗು, ದುರ್ನಾತ ಇರುತ್ತದೆ. ಹೀಗಾಗಿ ಶೌಚಾಲಯ, ದಿನಬಳಕೆಗೂ ಯೋಚಿಸಿ–ಯೋಚಿಸಿ ಬಳಸುವಂತಾಗಿದೆ’ ಎಂದು ಗೋದುತಾಯಿ ಬಡಾವಣೆ ನಿವಾಸಿಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಬೇಸರಿಸಿದರು.

‘ಕುಡಿಯಲು ಬಹುತೇಕ ಫಿಲ್ಟರ್ ನೀರಿನ ಕ್ಯಾನ್ ಖರೀದಿಸುತ್ತಾರೆ. ದಿನಬಳಕೆಗೂ ಟ್ಯಾಂಕರ್ ನೀರು ಖರೀದಿಸುವ ಸ್ಥಿತಿಯಿದೆ. ನಮಗೆ ವಾರಕ್ಕೆ ಒಂದು ಟ್ಯಾಂಕರ್ ನೀರು ಬೇಕು. ನಾಲ್ಕು ಸಾವಿರ ಲೀಟರ್ ನೀರಿನ ಟ್ಯಾಂಕರ್ಗೆ ₹700ರಿಂದ ₹800 ತೆರಬೇಕು. ತಿಂಗಳಿಗೆ ನಾಲ್ಕೈದು ಟ್ಯಾಂಕರ್ ನೀರಿಗೆ ಸಾವಿರಾರು ರೂಪಾಯಿ ವೆಚ್ಚ ಮಾಡಬೇಕು. ಟ್ಯಾಂಕರ್ ನೀರು ಪೂರೈಸುವಂತೆ ಪಾಲಿಕೆಗೆ ಇಂದು ಹೇಳಿದರೆ ಎರಡು ದಿನ ಬಿಟ್ಟು ಬರುತ್ತೆ. ಅಲ್ಲಿ ತನಕ ಶೌಚಾಲಯ, ಸ್ನಾನಕ್ಕೆ ಏನು ಮಾಡಬೇಕು?’ ಎಂಬುದು ಅವರ ಪ್ರಶ್ನೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-34-1839067983

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.