ಕಲಬುರಗಿ: ನಗರಕ್ಕೆ ನೀರು ಸರಬರಾಜು ಮಾಡುವ ಭೀಮಾ ನದಿಯ ಒಳಹರಿವು ಕಡಿಮೆಯಾಗಿದ್ದು, ಕೋಟನೂರ (ಡಿ) ಜಲಶುದ್ಧೀಕರಣ ಕೇಂದ್ರದಿಂದ ಈ ಕೆಳಕಂಡ ಜಲಸಂಗ್ರಹಗಾರಗಳಿಂದ ನೀರು ಸರಬರಾಜಾಗುತ್ತಿರುವ ಬಡಾವಣೆಗಳಿಗೆ ನಿಗದಿತ ವೇಳಾಪಟ್ಟಿಯಂತೆ ನೀರು ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಕೆಯುಡಬ್ಲ್ಯೂಎಸ್ಎಂಪಿ, ಕೆಯುಐಡಿಎಫ್ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇಲ್ಮಟ್ಟದ ಜಲಸಂಗ್ರಹಾಗಾರಗಳ ಹೆಸರು, ಬಡಾವಣೆಗಳ ವಿವರ ಹಾಗೂ ನೀರು ಬಿಡುವ ಅವಧಿ ವಿವರ ಇಂತಿದೆ. ಕೆ.ಎಚ್.ಬಿ. ಜಲಸಂಗ್ರಹಾಗಾರ: ಗಾಬರೆ ಲೇಔಟ್, ಧರಿಯಾಪುರ ಜಿಡಿಎ, ಮೋಹನ ನಗರ, ಲಕ್ಷ್ಮೀನಾರಾಯಣ ನಗರ ಬಡಾವಣೆಗಳಲ್ಲಿ 3 ದಿವಸಕ್ಕೊಮ್ಮೆ 2 ಗಂಟೆ ನೀರು ಬಿಡಲಾಗುತ್ತದೆ.

ಪಿ ಅಂಡ್ ಟಿ ಜಲಸಂಗ್ರಹಾಗಾರ: ಗಣೇಶ ನಗರ, ಸದಾಶಿವನಗರ, ಪಿಡಬ್ಲ್ಯೂಡಿ ಕ್ವಾರ್ಟರ್ಸ್, ಬುದ್ಧನಗರ, ರಹಮತ್ ನಗರ, ಬ್ಯಾಂಕ್ ಕಾಲೊನಿ, ಬಾಲಾಜಿ ನಗರ, ಉದಯನಗರ ಭಾಗಶಃ ಬಡಾವಣೆಗಳಲ್ಲಿ 4 ದಿನಕ್ಕೊಮ್ಮೆ 3 ಗಂಟೆ ನೀರು ಬಿಡಲಾಗುತ್ತದೆ.

ಎನ್ಜಿಒ ಕಾಲೊನಿ ಜಲಸಂಗ್ರಹಾಗಾರ: ದತ್ತನಗರ, ಮಾಕಾ ಲೇಔಟ್, ಸಂತೋಷ ಕಾಲೊನಿ, ಹರಿಕೃಷ್ಣ ನಗರ ಬಡಾವಣೆಗಳಲ್ಲಿ 4 ದಿವಸಕ್ಕೊಮ್ಮೆ ಒಂದೂವರೆ ಗಂಟೆ ನೀರು ಬಿಡಲಾಗುತ್ತದೆ.

ಬಿದ್ದಾಪುರ ಕಾಲೊನಿ ಜಲಸಂಗ್ರಹಾಗಾರ: ಗಣಪತಿ ಟೆಂಪಲ್ ಏರಿಯಾ, ಜಾಧವ ಲೇಔಟ್, ಚಂದ್ರಭಾಗ ನಗರ, ರಾಘವೇಂದ್ರ ಸ್ವಾಮಿ ಟೆಂಪಲ್ ಏರಿಯಾ ಬಡಾವಣೆಗಳಲ್ಲಿ 4 ದಿನಕ್ಕೊಮ್ಮೆ ಎರಡು ಗಂಟೆ ನೀರು ಬಿಡಲಾಗುತ್ತದೆ.

ಕರುಣೇಶ್ವರ ನಗರ ಜಲಸಂಗ್ರಹಗಾರ: ಕರುಣೇಶ್ವರ ನಗರ ಏರಿಯಾ, ವರದಾ ನಗರ, ಯಶ್ವಂತನಗರ ಬಡಾವಣೆಗಳಲ್ಲಿ 4 ದಿವಸಕ್ಕೊಮ್ಮೆ 3 ಗಂಟೆ ನೀರು ಬಿಡಲಾಗುತ್ತದೆ.

ಕೋರಂಟಿ ಹನುಮಾನ ಜಲಸಂಗ್ರಹಾಗಾರ: ಹನುಮಾನ್ ನಗರ ತಾಂಡಾ, ತಾರಫೈಲ್ ಬಡಾವಣೆಗಳಲ್ಲಿ 4 ದಿವಸಕ್ಕೊಮ್ಮೆ ಎರಡೂವರೆ ಗಂಟೆ ನೀರು ಬಿಡಲಾಗುತ್ತದೆ.

ಸಾಯಿನಗರ ಜಲಸಂಗ್ರಹಾಗಾರ: ಸಾಯಿಮಂದಿರ ಏರಿಯಾ, ರಾಜಮಹಲ್ ಲೇಔಟ್, ಸರ್ವಜ್ಞ ಕಾಲೊನಿ ಹಿಂದುಗಡೆ ಬಡಾವಣೆಗಳಲ್ಲಿ 4 ದಿನಕ್ಕೊಮ್ಮೆ 3 ಗಂಟೆ ನೀರು ಬಿಡಲಾಗುತ್ತದೆ.

ಹೈಕೋರ್ಟ್ ಜಲಸಂಗ್ರಹಾಗಾರ: ಅಕ್ಕಮಹಾದೇವಿ ಕಾಲೊನಿ, ಹೌಸಿಂಗ್ ಬೋರ್ಡ್ ಬಡಾವಣೆಗಳಲ್ಲಿ 3 ದಿವಸಕ್ಕೊಮ್ಮೆ 3 ಗಂಟೆ ನೀರು ಬಿಡಲಾಗುತ್ತದೆ.

ಧರಿಯಾಪುರ ಜಲಸಂಗ್ರಹಾಗಾರ: ಅಂಬಿಕಾನಗರ, ತಾರಫೈಲ್ 8ನೇ ಕ್ರಾಸ್, ಧರಿಯಾಪುರ ಏರಿಯಾ ಬಡಾವಣೆಗಳಲ್ಲಿ 24/7 ನಿರಂತರ ನೀರು ಸರಬರಾಜು ಅಡಿ ನಿರಂತರವಾಗಿ ನೀರು ಸರಬರಾಜು ಮಾಡಲಾಗುತ್ತದೆ.

ಕೋಟನೂರ (ಡಿ) ಜಲಸಂಗ್ರಹಾಗಾರ: ಓಜಾ ಲೇಔಟ್, ವಿವೇಕಾನಂದ ನಗರ ಬಡಾವಣೆಗಳಲ್ಲಿ 24/7 ನಿರಂತರ ನೀರು ಸರಬರಾಜು ಅಡಿ ನಿರಂತರವಾಗಿ ನೀರು ಸರಬರಾಜು ಮಾಡಲಾಗುತ್ತದೆ.

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಹಾಗೂ ಕೊಳವೆ ಮಾರ್ಗ, ಮೋಟಾರು ಪಂಪುಗಳಲ್ಲಿ ದುರಸ್ತಿ ಕಂಡುಬಂದಲ್ಲಿ ಮೇಲ್ಕಂಡ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಬಹುದಾಗಿದೆ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-34-1402968318

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.