ಕಲಬುರಗಿ: ‘ಮಹಿಳೆಯರು ಆಟೊ ಓಡಿಸುವುದರಿಂದ ಹಿಡಿದು ಅಂತರಿಕ್ಷವರೆಗೆ ಆತ್ಮನಿರ್ಭರ ಸಾಧನೆ ಮಾಡುತ್ತಿದ್ದಾಳೆ. ಪ್ರತಿ ಮನೆ–ಮನೆಯಲ್ಲಿ ಮಹಿಳೆಯರು ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಬಲೀರಣವಾಗಬೇಕು’ ಎಂದು ಮಾಜಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು.

ನಗರದ ಕೆಕೆಸಿಸಿಐ ರಘೋಜಿ ಸಭಾಂಗಣದಲ್ಲಿ ಟೆಕ್ಶಿ ಯೋಜನೆಯ ಭಾಗವಾಗಿ ಉಬುಂಟು ಕನ್ಸೋರ್ಟಿಯಂ ಬೆಂಗಳೂರು, ಕೆ.ಲ್ಯಾಂಪ್, ಆಕೃತಿ ಫೌಂಡೇಷನ್, ಪರಿಣಿತಾ ಲೇಡಿಸ್ ಅಸೋಸಿಯೇಷನ್ ಸಹಯೋಗದಲ್ಲಿ ಸೋಮವಾರ ನಡೆದ ‘ಮಹಿಳಾ ಉದ್ಯಮಿಗಳಿಗೆ ಇ-ಕಾಮರ್ಸ್ ಮತ್ತು ಡಿಜಿಟಲ್ ಪರಿವರ್ತನೆ’ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಂದು ಉದ್ಯಮ ಪ್ರಾರಂಭಿಸಬೇಕಾದರೆ ಅನೇಕ ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಮೆಟ್ಟಿನಿಂತು, ದೃಢ ಸಂಕಲ್ಪದಿಂದ ಮುನ್ನಡೆಯಬೇಕು. ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯನ್ನು ಆದರ್ಶವಾಗಿಟ್ಟುಕೊಂಡು ಕಾರ್ಯೋನ್ಮುಖರಾಗಬೇಕು’ ಎಂದು ಸಲಹೆ ನೀಡಿದರು.

‘ಉದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿರುವಷ್ಟು ಅನುಕೂಲ, ಅವಕಾಶಗಳು ದೇಶದ ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ಇಲ್ಲಿನ ವಾತಾವರಣ, ಕಾನೂನು ವ್ಯವಸ್ಥೆ ಎಲ್ಲವೂ ಉತ್ತಮವಾಗಿದೆ. ಅದನ್ನು ಉಪಯೋಗಿಸಿಕೊಳ್ಳುವ ಶಕ್ತಿ ರಾಜ್ಯದ ಜನತೆಗೆ ಬರಬೇಕಿದೆ’ ಎಂದು ಹೇಳಿದರು.

ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ ಮಾತನಾಡಿ, ‘ಕೈಗಾರಿಕೆ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಮುಂದುವರೆಯುತ್ತಿದೆ. ಇಲ್ಲಿನ ಯುವ ಸಮೂಹ, ಮಹಿಳೆಯರು ತಮ್ಮ ಕೌಶಲ, ಪ್ರತಿಭೆಯನ್ನು ಬಳಸಿಕೊಂಡು ಧೈರ್ಯದಿಂದ ಮುನ್ನಡೆಯಬೇಕು. ಮುಂದಿನ ದಿನಗಳಲ್ಲಿ ಕೆಕೆಸಿಸಿಐ ವತಿಯಿಂದ ಮಹಿಳಾ ಉದ್ಯಮಿಗಳಿಗೆ ಇನ್ನೂ ಹೆಚ್ಚಿನ ಸಹಕಾರ ನೀಡಲಾಗುವುದು’ ಎಂದರು.

ಉಬುಂಟು ಕನ್ಸೋರ್ಟಿಯಂ ಸಹ ಸಂಸ್ಥಾಪಕಿ ಸರ್ವಮಂಗಳಾ ಪಾಟೀಲ ಮಾತನಾಡಿ, ‘ಟೆಕ್ಶಿ ಯೋಜನೆಯಡಿ ಮಹಿಳಾ ಉದ್ಯಮಿಗಳಿಗೆ ಡಿಜಿಟಲ್ ತರಬೇತಿ ನೀಡುವ ಮೂಲಕ ಅವರ ಉದ್ಯಮ ಜಾಗತಿಕ ಮಟ್ಟದಲ್ಲಿ ವಿಸ್ತರಿಸಲು ಪ್ರಯತ್ನಿಸಲಾಗುತ್ತಿದೆ. ಮಹಿಳೆಯರು ತಯಾರಿಸುತ್ತಿರುವ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ತೆರದಿಡಲು ಟೆಕ್ಶಿ ಸಹಕಾರಿಯಾಗಲಿದೆ’ ಎಂದರು.

ಕಾರ್ಯಕ್ರಮದಲ್ಲಿ ಕೆಕೆಸಿಸಿಐ ಗೌರವ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ, ಸದಾನಂದ ಪಟ್ಟಣಶೆಟ್ಟಿ, ನಳಿನಿ ಮಹಾಗಾಂವಕರ, ಮಂಜುಳಾ ಡೊಳ್ಳಿ, ಸುಜಾತಾ ಪಾಟೀಲ, ನಮೃತಾ ಫಟಾಟೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-34-1585096130

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.