ಕಲಬುರಗಿ: ‘ಮಹಿಳಾ ಬಂದಿಗಳಿಗೆ ಕರಕುಶಲ, ಕೌಶಲಾಧಾರಿತ ತರಬೇತಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರ ಮನ ಪರಿವರ್ತನೆ ಮಾಡಲು ಪ್ರಯತ್ನಿಸಲಾಗುತ್ತಿದೆ’ ಎಂದು ಜಿಲ್ಲಾ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೆ.ಸುರೇಶ ತಿಳಿಸಿದರು.

ಕೇಂದ್ರ ಕಾರಾಗೃಹ ಹಾಗೂ ಕಡಗಂಚಿಯ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ನ ಸಹಯೋಗದಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಬಂದಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು’ ಎಂದರು.

ಫಾದರ್ ಮ್ಯಾಕ್ಸಿಮ್ ಮಾತನಾಡಿ, ‘ಕಾರಾಗೃಹದ ಬಂದಿಗಳಿಗೆ ಮನ ಪರಿವರ್ತನೆಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ತಾವೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾನಸಿಕ, ದೈಹಿಕವಾಗಿ ಸದೃಢರಾಗಿ ಇಲ್ಲಿಂದ ಬಿಡುಗಡೆಯಾಗಿ ತಮ್ಮ ಕುಟುಂಬದೊಂದಿಗೆ ಒಳ್ಳೆಯ ಜೀವನ ನಡೆಸಬೇಕು’ ಎಂದರು.

ವಿವಿಧ ಆಟೋಟಗಳಲ್ಲಿ ವಿಜೇತರಾದ ಬಂದಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಹಿಳಾ ಬಂದಿ ವಿಭಾಗಕ್ಕೆ ವಾಟರ್ ಕೂಲರ್ ದೇಣಿಗೆಯಾಗಿ ನೀಡಲಾಯಿತು.

ಕಾರಾಗೃಹದ ಅಧೀಕ್ಷಕ ರಾಕೇಶ ಕಾಂಬಳೆ, ಸಹಾಯಕ ಅಧೀಕ್ಷಕ ಸುರೇಶ ಬಿ., ಚನ್ನಪ್ಪ, ಟ್ರಸ್ಟ್ ಕಾರ್ಯದರ್ಶಿ ಫಾದರ್ ವಿಲಿಯಂ ಮಿರಂಡಾ, ಬ್ರದರ್ ಫ್ಲೇಮಿಂಗ್, ಜೀಜಾ, ಅನಿತಾ, ಜೈಲರ್ಗಳಾದ ಸಾಗರ್ ಪಾಟೀಲ, ಶ್ರೀಮಂತಗೌಡ ಪಾಟೀಲ ಉಪಸ್ಥಿತರಿದ್ದರು.

ಕಾರಾಗೃಹದ ಶಿಕ್ಷಕ ನಾಗರಾಜ ಮೂಲಗೆ ಸ್ವಾಗತಿಸಿದರು. ಸಿಸ್ಟರ್ ಡೈನಾ ನಿರೂಪಿಸಿದರು. ಸಿಸ್ಟರ್ ವಸಂತಾ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260319-34-140906649

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.