ಕಲಬುರಗಿ: ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ವಿಜ್ಞಾನ ಕೇಂದ್ರ ಹಾಗೂ ಅಲ್ ಬದರ್ ಮಲ್ಟಿಸ್ಪೆಷಾಲಿಟಿ ಮತ್ತು ಡೆಂಟಲ್ ಆಸ್ಪತ್ರೆ ವತಿಯಿಂದ ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ವಿವಿಧ ಕಾರ್ಯಕ್ರಮ ನಡೆದವು.

ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ಎಸ್ಆರ್ಎನ್ ಮೆಹತಾ ಸಿಬಿಎಸ್ಇ ಶಾಲೆಯ ಗೌರಿ ಎಂ. ಹಾಗೂ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ರೇವಶ್ರೀ ಆರ್.ಪಿ ಮತ್ತು ಪ್ರೌಢಶಾಲಾ ಮಕ್ಕಳ ಸ್ಪರ್ಧೆಯಲ್ಲಿ ಎಸ್ಆರ್ಎನ್ ಮೆಹತಾ ಶಾಲೆಯ ಸಿಮ್ರಾ ಕೌಸರ್ ಹಾಗೂ ಚಂದ್ರಕಾಂತ ಪಾಟೀಲ ಇಂಗ್ಲಿಷ್ ಮಾಧ್ಯಮ ಶಾಲೆಯ ಪೃಥ್ವಿರಾಜ್ ಪ್ರಶಸ್ತಿ ಪಡೆದರು.

‘ಪ್ರಯೋಗಾಲಯದಿಂದ ಜೀವನಕ್ಕೆ: ದೈನಂದಿನ ಆರೋಗ್ಯದಲ್ಲಿ ವಿಜ್ಞಾನ’ ವಿಷಯ ಕುರಿತು ಅಲ್ ಬದರ್ ಆಸ್ಪತ್ರೆಯ ಡಾ.ಶೇಖ್ ಮಸಿರಾ ನುಸ್ರತ್ ಅವರು ಆರೋಗ್ಯ ಜಾಗೃತಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಮತ್ತು ಶಿಕ್ಷಕರ ರಕ್ತ ತಪಾಸಣೆ ಮತ್ತು ದಂತ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಯಿತು. ರಕ್ತ ಗುಂಪು ಸಹ ತಿಳಿಸಲಾಯಿತು.

ಅಲ್ ಬದರ್ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಆಸ್ಪತ್ರೆಯ ಅಧ್ಯಕ್ಷ ಡಾ.ಮಹಮ್ಮದ್ ಅಬ್ದುಲ್ ಮುಜೀಬ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂ ಡಿದ್ದರು. ಜಿಲ್ಲಾ ವಿಜ್ಞಾನ ಅಧಿಕಾರಿ ಎನ್.ಪೊನ್ನರಸನ್ ಅವರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-34-788137699

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.