ಕಲಬುರಗಿ: ಸೇಡಂ ತಾಲ್ಲೂಕಿನ ಯಾನಾಗುಂದಿಯ ಮಾಣಿಕೇಶ್ವರಿ ಆಶ್ರಮದಲ್ಲಿ ಯಾವುದೇ ಜಾತಿ, ಭೇದ ಆಚರಣೆ ಮಾಡುತ್ತಿಲ್ಲ. ಕೆಲವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಮಹಾಯೋಗಿನಿ ರೂಪರಹಿತ ಅಹಿಂಸಾ ಯೋಗೇಶ್ವರಿ ವೀರಧರ್ಮಜ ಮಾತಾ ಟ್ರಸ್ಟ್ ಖಜಾಂಚಿ ಸಿದ್ರಾಮಪ್ಪ ಸಣ್ಣೂರ ಸ್ಪಷ್ಟಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಐದು ವರ್ಷಗಳ ಹಿಂದೆ ತೆಲಂಗಾಣದ ಬಾಲಕೃಷ್ಣ ಎನ್ನುವ ವ್ಯಕ್ತಿ ರಾತ್ರಿ ಸಮಯದಲ್ಲಿ ಮಾತಾಜಿಯವರ ಮಹಾಮಂದಿರದ ಮುಖ್ಯ ದ್ವಾರದ ಕೀಲಿಯನ್ನು ಒಡೆಯುವ ಶಬ್ದ ಕೇಳಿ ರಾತ್ರಿ ಸೇವಾ ಸಿಬ್ಬಂದಿ ಮತ್ತು ಆಶ್ರಮ ವಾಸಿಗಳು ವಿಚಾರಿಸಿದ್ದಾರೆ. ಆಗ ಅಲ್ಲಿಂದ ಹೋಗುವುದಿಲ್ಲ ಎಂದು ಹಟ ಹಿಡಿದಿದ್ದಾರೆ. ನಂತರ ಹೀಗೆ ಕೀಲಿ ಮುರಿಯುವುದು ತಪ್ಪು ಎಂದು ತಿಳಿವಳಿಕೆ ನೀಡಿ ಮುಧೋಳ ಪೊಲೀಸ್ ಠಾಣೆಗೆ ಒಪ್ಪಿಸಲಾಗಿತ್ತು. 2021ರಲ್ಲಿ ನಡೆದ ಘಟನೆಯನ್ನು ಇಟ್ಟುಕೊಂಡು ಕೆಲ ವ್ಯಕ್ತಿಗಳು 3–4 ತಿಂಗಳ ಹಿಂದೆ ದಲಿತ ಸಾಧುವಿನ ಮೇಲೆ ಅಮಾನವೀಯ ಹಲ್ಲೆ ನಡೆಸಲಾಗಿದೆ ಎಂದು ಸತ್ಯಕ್ಕೆ ದೂರವಾದ ಮಾಹಿತಿಯನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ’ ಎಂದು ಆರೋಪಿಸಿದರು.

ಆಶ್ರಮದ ಸಿಬ್ಬಂದಿ ಹಾಗೂ ಶಿವಯ್ಯ ಸ್ವಾಮಿ ಅವರ ಹೆಸರನ್ನು ಕೆಡಿಸಲು ಇಂತಹ ತಪ್ಪು ಮಾಹಿತಿ ಹರಡಲಾಗುತ್ತಿದೆ. ಆಶ್ರಮದಲ್ಲಿ ಯಾರಿಗೂ ಜಾತಿ, ಮತ, ಧರ್ಮದ ಮೇಲೆ ಭೇದ ಭಾವ ಮಾಡುವುದಿಲ್ಲ. ಆಶ್ರಮದಲ್ಲಿರುವ ಸಿಬ್ಬಂದಿಯೂ ಬೇರೆ ಬೇರೆ ಸಮುದಾಯಕ್ಕೆ ಸೇರಿದ್ದಾರೆ. ಹಿಂದೂ, ಮುಸ್ಲಿಂ ಎಂಬ ತಾರತಮ್ಯ ಮಾಡದೇ ಎಲ್ಲರೂ ಮಾತಾಜಿ ಅವರ ದರ್ಶನ ಮಾಡುತ್ತಾರೆ. ಆದ್ದರಿಂದ ಭಕ್ತರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಮಾಡಬಾರದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಸೂರ್ಯಕಾಂತ ಅವರಾದಿ, ಬ್ರಹ್ಮಾನಂದರೆಡ್ಡಿ ಕೇಶ್ವಾರ, ಮಹಿಪಾಲ್ ದೊಡ್ಮನಿ ಯಾನಾಗುಂದಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-34-2100174882

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.