ಕಲಬುರಗಿ: ಈ ಭಾಗದ ಪ್ರಸಿದ್ಧ ಹಜರತ್ ಖಾಜಾ ಬಂದಾನವಾಜ್ ಉರುಸ್ ಆರಂಭಕ್ಕೆ ಒಂದು ತಿಂಗಳು ಮೊದಲು ನಡೆಯುವ ಝೆಲಾ ಮುಬಾರಕ್ (ಪುಷ್ಪಗಳ ಗಾಲಿ) ಅನ್ನು ಸಂಪ್ರದಾಯ ಬದ್ಧವಾಗಿ ಏಪ್ರಿಲ್ 6ರಂದು ಕೆಬಿಎನ್ ದರ್ಗಾದ ಮೇಲೆ ಅಳವಡಿಸಲಾಯಿತು. ಈ ಮೂಲಕ ಉರುಸ್ ಆಚರಣೆ ದಿನ ಮುನ್ನಡಿ ಬರೆಯಲಾಯಿತು.

ಗಾರ್ಡನ್ನಲ್ಲಿ ಸಂಜೆ ಅಸರ್ ನಮಾಜ್ ಬಳಿಕ ಮಹಫಿಲ್–ಎ–ಸಮಾ ಕಾರ್ಯಕ್ರಮ ನಡೆಯಿತು. ಖ್ಯಾತ ಕಲಾವಿದರು ಬಂದಾನವಾಜರ ಗರಿಮೆ ಸಾರುವ ಕವ್ವಾಲಿಗಳನ್ನು ಪ್ರಸ್ತುತಪಡಿಸಿದರು. ಅಂತ್ಯದಲ್ಲಿ ಫಾತೇಹಾ ಖ್ವಾನಿ ನೆರವೇರಿಸಲಾಯಿತು.

ಬಳಿಕ ಝೆಲಾ ಮುಬಾರಕ್ ಮೆರವಣಿಗೆ ಆರಂಭವಾಯಿತು. ಈ ಮೆರವಣಿಗೆಯು ಜಗತ್ ವೃತ್ತ, ಸೂಪರ್ ಮಾರ್ಕೆಟ್ ಪ್ರದೇಶ ತಲುಪಿತು. ಅಲ್ಲಿನ ಮಾರ್ಕೆಟ್ ಮಸೀದಿಯಲ್ಲಿ ಮಗರಿಬ್ ನಮಾಜ್ ಸಲ್ಲಿಸಲಾಯಿತು. ಅಲ್ಲಿಂದ ಮೆರವಣಿಗೆಯು ಸರಾಫ್ ಬಜಾರ್, ಬಹಮನಿ ಚೌಕ್ ಹಾಗೂ ಹಫ್ತ್ ಗುಂಬಜ್ ಮಾರ್ಗವಾಗಿ ದರ್ಗಾ ತಲುಪಿತು.

ರಾತ್ರಿ ಸುಮಾರು 10.30ರ ವೇಳೆಗೆ ಝೆಲಾ ಮುಬಾರಕ್ ಅನ್ನು ‘ಗ್ಯಾರಾ ಸಿಡಿ’ ಬಳಿ ದರ್ಗಾದ ಮುಖ್ಯಸ್ಥ ಸೈಯದ್ ಮುಹಮ್ಮದ್ ಅಲಿ ಅಲ್ಹುಸೇನಿ ಅವರು ಸ್ವಾಗತಿಸಿದರು. ಝೇಲಾ ಮುಬಾರಕ್ನ ಪ್ರತಿಕಾತ್ಮಕ ಕಸ್ತಿಯನ್ನು ತಲೆ ಮೇಲೆ ಹೊತ್ತು ದರ್ಗಾ ಆವರಣ ಪ್ರವೇಶಿಸಿದರು.

ಅಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿ ಝೆಲಾ ಮುಬಾರಕ್ ಅನ್ನು ದರ್ಗಾದ ಗುಂಬಜಕ್ಕೆ ಏರಿಸಲಾಯಿತು.

ನಂತರ ದರ್ಗಾದಲ್ಲಿ ಫಾತೇಹಾ ಖ್ವಾನಿ ನೆರವೇರಿಸಿ, ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಬಳಿಕ ತಡರಾತ್ರಿ ತನಕ ಮೆಹಫಿಲ್–ಎ–ಸಮಾ ಕಾರ್ಯಕ್ರಮ ನಡೆಯಿತು.

10ಕ್ಕೂ ಹೆಚ್ಚು ಕಲಾವಿದರು ಕವ್ವಾಲಿಗಳ ಮೂಲಕ ಬಂದಾನವಾಜರಿಗೆ ಭಕ್ತಿ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಸೈಯದ್ ಶಾ ಯೂಸುಫ್ ಹುಸೇನಿ, ಸೈಯದ್ ಶಾ ಹಸನ್ ಶಬ್ಬೀರ್ ಹುಸೇನಿ, ಹೈದರಾಬಾದ್ನ ಅಕ್ಬರ್ ನಿಜಾ ಮುದ್ದೀನ್, ಸೈಯದ್ ಮುಸ್ತಫಾ ಅಲ್ ಹುಸೇನಿ, ಸೈಯದ್ ಮುಹಮ್ಮದ್ ಸೈಯದ್ ಹುಸೇನಿ, ಸೈಯದ್ ಅಲೀಮ್ ಹುಸೇನಿ, ಸೈಯದ್ ಶಾ ಶಫಿ ಉಲ್ಲಾ ಸೇರಿದಂತೆ ಹಲವರು ಉಪಸ್ಥಿತಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-34-766194300

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.