ಶುಕ್ರವಾರ, ನವೆಂಬರ್ 22, 2019
22 °C

ಚಿಂಚೋಳಿ, ಕಲಬುರ್ಗಿ ಎಪಿಎಂಸಿಯಲ್ಲಿ ಆನ್‌ಲೈನ್‌ ವಹಿವಾಟು

Published:
Updated:

ಚಿಂಚೋಳಿ: ರಾಷ್ಟ್ರೀಯ ಕೃಷಿ ಮಾರುಕಟ್ಟೆ ಜಾಲದೊಂದಿಗೆ ಬೆಸೆಯುವ ‘ಇನಾಂ’ (ಇಎನ್‌ಎಎಂ– ಎಲೆಕ್ಟ್ರಾನಿಕ್‌ ನ್ಯಾಷನಲ್ ಅಗ್ರಿಕಲ್ಚರ್‌ ಮಾರ್ಕೆಟ್) ಯೋಜನೆಗೆ ಕಲಬುರ್ಗಿ ಮತ್ತು ಚಿಂಚೋಳಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿ) ಆಯ್ಕೆ ಆಗಿವೆ.

ರಾಜ್ಯದಲ್ಲಿ ಚಿಂಚೋಳಿ ಮತ್ತು ಕಲಬುರ್ಗಿ ಎಪಿಎಂಸಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದ್ದು, ಇನ್ನು ಮುಂದೆ ಆನ್‌ಲೈನ್‌ ವ್ಯವಹಾರ ಆರಂಭ ವಾಗಲಿದೆ. ರಾಷ್ಟ್ರೀಯ ಮಾರುಕಟ್ಟೆಯ ಸಂಪರ್ಕದಿಂದ ಖರೀದಿದಾರರು ತಾವಿರುವ ಸ್ಥಳದಿಂದಲೇ ಇಲ್ಲಿನ ರೈತರಿಂದ ಕೃಷಿ ಉತ್ಪನ್ನಗಳಾದ ಧಾನ್ಯ, ಹಣ್ಣು, ತರಕಾರಿಗಳನ್ನು ಖರೀದಿಸಬಹುದು.

ಎರಡೂ ಎಪಿಎಂಸಿಗಳಿಗೆ ತಲಾ ₹30 ಲಕ್ಷ ಬಿಡುಗಡೆಯಾಗಿದೆ. ಕಂಪ್ಯೂಟರ್‌ ಪ್ರಯೋಗಾಲಯ ಸ್ಥಾಪಿಸಿ, ಅಂತರ್ಜಾಲದ ಸಂಪರ್ಕ ಪಡೆದು ಆನ್‌ಲೈನ್‌ ಮಾರಾಟ ಮತ್ತು ಖರೀದಿ ಸೇವೆ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಪ್ರತಿಕ್ರಿಯಿಸಿ (+)