ಜಾಧವಗೆ ಟಿಕೆಟ್‌: ಗೊಂದಲಗಳಿಗೆ ತೆರೆ ಎಳೆದ ಬಿಜೆಪಿ

ಗುರುವಾರ , ಏಪ್ರಿಲ್ 25, 2019
29 °C

ಜಾಧವಗೆ ಟಿಕೆಟ್‌: ಗೊಂದಲಗಳಿಗೆ ತೆರೆ ಎಳೆದ ಬಿಜೆಪಿ

Published:
Updated:
Prajavani

ಕಲಬುರ್ಗಿ: ಗುಲಬರ್ಗಾ ಲೋಕಸಭಾ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನಾಗಿ ಡಾ.ಉಮೇಶ ಜಾಧವ ಅವರ ಹೆಸರನ್ನು ಘೋಷಿಸುವ ಮೂಲಕ ಬಿಜೆಪಿ, ಗೊಂದಲಗಳಿಗೆ ತೆರೆ ಎಳೆದಿದೆ.

ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿಕ್ಕಾಗಿಯೇ ಉಮೇಶ ಚಿಂಚೋಳಿಯ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಮೋದಿ ರ‍್ಯಾಲಿಯಲ್ಲಿ ಬಿಜೆಪಿ ಸೇರಿದ್ದರು. ಆದರೆ, ಅವರ ರಾಜೀನಾಮೆ ಇನ್ನೂ ಅಂಗೀಕಾರವಾಗದ ಕಾರಣ ಹಲವು ವ್ಯಾಖ್ಯಾನ ಕೇಳಿಬರುತ್ತಿದ್ದವು.

‘ಉಮೇಶ ಅವರ ರಾಜೀನಾಮೆ ಅಂಗೀಕಾರವಾಗದ ಕಾರಣ ಆತಂಕಗೊಂಡಿರುವ ಬಿಜೆಪಿ ಈ ಕ್ಷೇತ್ರಕ್ಕೆ ಪರ್ಯಾಯ ಅಭ್ಯರ್ಥಿಯ ಹುಡುಕಾಟದಲ್ಲಿದೆ’ ಎಂದು ಆ ಪಕ್ಷದ ಮೂಲಗಳೇ ಹೇಳುತ್ತಿದ್ದವು.

ಆದರೆ, ‘ಜಾಧವ ಅವರು ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕಾರ ಆಗಿಯೇ ಆಗುತ್ತದೆ. ರಾಜೀನಾಮೆ ಅಂಗೀಕಾರವಾಗದಿದ್ದರೂ ಜಾಧವ ಅವರು ಲೋಕಸಭೆಗೆ ಸ್ಪರ್ಧಿಸಲು ಯಾವುದೇ ತೊಂದರೆ ಇಲ್ಲ ಎಂಬ ಅಭಿಪ್ರಾಯವನ್ನು ಕಾನೂನು ತಜ್ಞರು ನೀಡಿದ್ದಾರೆ. ರಾಜೀನಾಮೆ ಅಂಗೀಕಾರವಾಗಲಿ ಅಥವಾ ಬಿಡಲಿ ಜಾಧವ ಅವರೇ ಕಲಬುರ್ಗಿಯಿಂದ ಸ್ಪರ್ಧಿಸಲಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಪ್ರಜಾವಾಣಿಯ ಬೆಂಗಳೂರು ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಂವಾದದಲ್ಲಿ ಸ್ಪಷ್ಟವಾಗಿ ಹೇಳಿದ್ದರು.

ಈಗ ಜಾಧವ ಅವರು ಹೆಸರು ಘೋಷಣೆಯಾಗಿದ್ದು, ಮಲ್ಲಿಕಾರ್ಜುನ ಖರ್ಗೆ ಮತ್ತು ಉಮೇಶ ಜಾಧವ ಅವರ ಸೆಣಸಾಟಕ್ಕೆ ಆಖಾಡಾ ಸಿದ್ಧವಾದಂತಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !