ಕಾಳಗಿ: ‘ಪಟ್ಟಣದಲ್ಲಿ ಮೇ 29ರಂದು ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಸಮಿತಿಯ ಗೌರವಾಧ್ಯಕ್ಷ ಮಾರುತಿ ಮಳಗಿ, ಅಧ್ಯಕ್ಷ ಕಪಿಲ್ ದೊಡ್ಡಮನಿ ತಿಳಿಸಿದ್ದಾರೆ.

ಭಾನುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಯಂತ್ಯುತ್ಸವದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿ, ‘ಯುವ ಶಕ್ತಿಯ ನಡಿಗೆ ಭೀಮ ತತ್ವದ ಕಡೆಗೆ’ ಘೋಷಣೆಯಡಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ’ ಎಂದರು.

‘ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10.30ಕ್ಕೆ ರಕ್ತದಾನ ಶಿಬಿರ ಮತ್ತು 11 ಗಂಟೆಗೆ ಜಯಂತ್ಯುತ್ಸವ ಕಾರ್ಯಕ್ರಮ ಹಾಗೂ ಬಹಿರಂಗ ಸಭೆ ಇರುತ್ತದೆ. ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಏರ್ಪಡಿಸಲಾಗಿದೆ’ ಎಂದರು.

‘ಜ್ಞಾನ ಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸುವರು. ಸಂಸದ ಸಾಗರ ಖಂಡ್ರೆ ಮತ್ತು ಶಾಸಕ ಡಾ.ಅವಿನಾಶ ಜಾಧವ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಸಂಜೆ 5ಗಂಟೆಗೆ ಕಲ್ಯಾಣ ಮಂಟಪದಿಂದ ಅಂಬೇಡ್ಕರ್ ವೃತ್ತದವರೆಗೆ ನಡೆಯಲಿರುವ ಮೆರವಣಿಗೆಗೆಗ ಸಿಪಿಐ ಜಗದೇವಪ್ಪ ಪಾಳಾ ಚಾಲನೆ ನೀಡುವರು’ ಎಂದು ಹೇಳಿದರು.

‘ಎಂಎಲ್ಸಿಗಳಾದ ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ ಧ್ವಜಾರೋಹಣ ಮಾಡುವರು. ವಾಗ್ಮಿ ಕೇಶವಮೂರ್ತಿ ಮೈಸೂರು, ಜಗದೇವಿ ಗಾಯಕವಾಡ ವಿಶೇಷ ಭಾಷಣ ಮಾಡಲಿದ್ದಾರೆ’ ಎಂದರು.

ಈ ಸಂದರ್ಭದಲ್ಲಿ ಗುರುನಂದೇಶ ಕೋಣಿನ, ಕರಣಕುಮಾರ ಕೋರವಾರ, ಸೂರ್ಯಕಾಂತ ಮಂತಾ, ಮಾಣಿಕ ಕೋಡ್ಲಿ, ಮಾರುತಿ ತೇಗಲತಿಪ್ಪಿ, ಬಸವರಾಜ ಮೇಲಕೇರಿ, ಕಾಶಿನಾಥ ವಚ್ಚಾ, ರಮೇಶ ಕುಡಳ್ಳಿ, ಮಂಜುನಾಥ ದಂಡಿನ, ಖತಲಪ್ಪ ವಜ್ರಗಾಂವ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-31-1290257461

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.