ಕಾಳಗಿ: ಪಟ್ಟಣದಲ್ಲಿ ಬಾದಾಮಿ ಅಮಾವಾಸ್ಯೆ ಅಂಗವಾಗಿ ಶನಿವಾರ ರಾತ್ರಿ ಬನಶಂಕರಿದೇವಿ ಪಲ್ಲಕ್ಕಿ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ವಾದ್ಯಮೇಳದೊಂದಿಗೆ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯು ಪಲ್ಲೆಕಟ್ಟೆ, ಬಜಾರ್, ಮುತ್ಯಾನಕಟ್ಟೆ ರಸ್ತೆ ಮಾರ್ಗವಾಗಿ ತೆರಳಿ ಮತ್ತೆ ದೇವಸ್ಥಾನಕ್ಕೆ ಆಗಮಿಸಿತು.

ಕೆಲ ಮಹಿಳೆಯರು ಕಳಸ ಹಿಡಿದರೆ, ಅನೇಕರು ಭಜನೆ ಮಾಡುತ್ತ, ಭಕ್ತಿ ಗೀತೆ ಹಾಡುತ್ತ ಸಾಗಿದರು. ಜಯಘೋಷ ಮೊಳಗಿತು. ರಸ್ತೆ ಅಕ್ಕಪಕ್ಕದ ಮನೆಯವರು ಹೂವು, ಕಾಯಿ-ಕರ್ಪೂರ ಸಲ್ಲಿಸಿ ನಮಿಸಿ ಭಕ್ತಿ ಮೆರೆದರು.

ದೇವಾಂಗ ಸಮಾಜದ ಹಿರಿಯರಾದ ಬಾಲಚಂದ್ರ ಕಾಂತಿ, ಗಣಪತರಾವ ಸಿಂಗಶೆಟ್ಟಿ, ಶಿವಾನಂದ ದೇವಾಂಗಮಠ, ಗುಂಡಪ್ಪ ಗುಂಡದ, ಭಾಸ್ಕರ ಜಿಲ್ಲಿ, ನಿಜಲಿಂಗಪ್ಪ ಅಷ್ಟಗಿ, ಹನುಮಂತಪ್ಪ ಕಾಂತಿ, ರವೀಂದ್ರ ಅಲ್ಲಾಪುರ, ರಾಜು ಜಿಲ್ಲಿ, ನಾಗಣ್ಣ ಕಮರಡಗಿ, ಪಾಂಡುರಂಗ ಗುರುಮಠಕಲ್, ಶರಣಪ್ಪ ಕಿಟ್ಟದ, ಬಸವರಾಜ ಹಾವಗುಂಡಿ, ಮಲ್ಲಿಕಾರ್ಜುನ ತೆಂಗಳಿ, ಅಶೋಕ ತೆಂಗಳಿ ಮೊದಲಾದವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-31-873962045

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.