ಕಾಳಗಿ: ಬೆಂಗಳೂರಿನ ಸತ್ಯ ಎಜ್ಯುಕೇರ್ ಕಾಂಪಿಟೆನ್ಸಿ ಟ್ರಸ್ಟ್ ಶನಿವಾರ ಜಿಲ್ಲಾ ಪಂಚಾಯಿತಿ, ಬಸವೇಶ್ವರ ಟೀಚಿಂಗ್ ಮತ್ತು ಜನರಲ್ ಆಸ್ಪತ್ರೆ ಮತ್ತು ಎನ್ಜಿಎನ್ ಫೌಂಡೇಶನ್ ಸಹಭಾಗಿತ್ವದಲ್ಲಿ ‘ಸಂತಸಮಯ ವೃದ್ಧಾಪ್ಯ ಮಾರ್ಗ’ ಯೋಜನೆಯಡಿ ಪಟ್ಟಣದಲ್ಲಿ ವೃದ್ಧರಿಗಾಗಿ ಆಯೋಜಿಸಿದ್ದ ಆರೋಗ್ಯ ಶಿಬಿರವು ಯಶಸ್ವಿಯಾಗಿ ನೆರವೇರಿತು.

ಇಲ್ಲಿನ ಬನಶಂಕರಿದೇವಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಶಿಬಿರದಲ್ಲಿ ಒಟ್ಟು 182 ಮಂದಿ ಪ್ರಯೋಜನ ಪಡೆದುಕೊಂಡರು.

ಸಾಮಾನ್ಯ ವೈದ್ಯಕೀಯ, ನೇತ್ರ, ಇಎನ್ಟಿ (ಕಣ್ಣು–ಮೂಗು–ಗಂಟಲು), ಚರ್ಮ, ಆರ್ಥೋ ಮತ್ತು ಮನೋವೈದ್ಯಕೀಯ ತಪಾಸಣೆಗಳನ್ನು ತಜ್ಞ ವೈದ್ಯರು ನಡೆಸಿದರು. ಭಾಗವಹಿಸಿದ ಹಿರಿಯ ನಾಗರಿಕರಿಗೆ ಅಗತ್ಯವಾದ ಔಷಧಗಳನ್ನು ಉಚಿತವಾಗಿ ವಿತರಿಸಲಾಯಿತು.

ಶಿಬಿರದ ವೇಳೆ ವೈದ್ಯರು ಹಿರಿಯ ನಾಗರಿಕರ ಆರೋಗ್ಯ ಸಮಸ್ಯೆಗಳನ್ನು ಗಮನದಿಂದ ಪರಿಶೀಲಿಸಿ, ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿದರು. ಜನರು ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ನೀಡಿದರು.

ಈ ಸಂದರ್ಭದಲ್ಲಿ ಗಣ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿ ಶಿಬಿರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವೈದ್ಯಾಧಿಕಾರಿ ಡಾ.ಸಂತೋಷ, ಸಮುದಾಯ ಸಂಘಟನಾಧಿಕಾರಿ ಡಾ.ರೇಣುಕಾದೇವಿ ಕಾಬಾ ಸೇರಿದಂತೆ ಟ್ರಸ್ಟ್ನ ಕಲಬುರಗಿ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-31-139524798

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.