ಕಾಳಗಿ: ತಾಲ್ಲೂಕಿನೆಲ್ಲೆಡೆ ಬೆಳೆಗಳ ರಾಶಿ ಬಹುತೇಕ ಮುಗಿದಿದ್ದು, ಕೆಲವೆಡೆ ಜೋಳ, ಕುಸುಬೆ ರಾಶಿ ಕೊನೆಗೊಳ್ಳುತ್ತಿದೆ. ಬೆಳೆಗಳು ಖಾಲಿಯಾಗುತ್ತಿದ್ದಂತೆ ಹೊಲಗಳು ಭಣಗುಟ್ಟುತ್ತಿವೆ. ಈ ನಡುವೆ ಜಮೀನುಗಳ ಬದುವಿಗೆ ಬೆಂಕಿ ಬೀಳುತ್ತಿರುವುದು ಎಲ್ಲೆಡೆ ಕಾಣಿಸುತ್ತಿದೆ. ಅಲ್ಲದೇ, ರಸ್ತೆಗಳ ಬದುಗಳಲ್ಲೂ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ರಸ್ತೆಬದಿ ಬೆಳೆದು ನಿಂತಿರುವ ಗಿಡಮರಗಳ ಜೀವ ತೆಗೆಯುತ್ತಿದೆ.

ಬದುವಿಗೆ ಬೆಂಕಿ ಹಚ್ಚುವ ಕೆಟ್ಟಚಾಳಿ ಹಲವು ವರ್ಷಗಳಿಂದ ನಡೆದು ಬರುತ್ತಿದೆ. ಆದರೆ ಈ ಬೆಂಕಿಯಿಂದ ಮಣ್ಣಿನ ಪೋಷಕಾಂಶಗಳು ಸಾಯುತ್ತಿವೆ. ಮಣ್ಣಿನ ಸತ್ವ ನಶಿಸುತ್ತಿದೆ ಎಂಬುದನ್ನು ಯಾರೂ ಯೋಚಿಸುತ್ತಿಲ್ಲ. ರಸ್ತೆ ಬದಿಯಲ್ಲಿ ಹಚ್ಚುವ ಬೆಂಕಿಯಿಂದ ಬೇರುಸಹಿತ ಗಿಡಮರಗಳು ಸುಟ್ಟು ಭಸ್ಮವಾಗುತ್ತಿವೆ. ಆದರೆ, ಅರಣ್ಯ ಇಲಾಖೆಯವರು ಈ ಬಗ್ಗೆ ಕಿಂಚಿತ್ತೂ ಗಮನಹರಿಸುತ್ತಿಲ್ಲ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.

ರಸ್ತೆಬದಿಯ ಬೆಂಕಿಯಿಂದಾಗಿ ದಟ್ಟವಾದ ಹೊಗೆ ಆವರಿಸುತ್ತಿದೆ. ಹೊಗೆಗೆ ರಸ್ತೆಯಲ್ಲಿ ಎದುರು ಬದರು ಸಂಚರಿಸುವ ವಾಹನಗಳು ಒಂದಕ್ಕೊಂದು ಕಾಣದಾಗಿವೆ. ವಾಹನ ಸವಾರರು ಬೆಂಕಿಯ ಸೆಕೆಗೆ ಹೆದರುತ್ತಿದ್ದಾರೆ. ಪರಸ್ಪರ ಮುಖ ಕಾಣದೆ ಸ್ವಲ್ಪವೇ ಯಾಮಾರಿದರೆ ಅನಾಹುತ ಸಂಭವಿಸಬಹುದು ಎನ್ನುತ್ತಾರೆ ಮಂಗಲಗಿ ಗ್ರಾಮದ ಬೈಕ್ ಸವಾರ ವೀರಣ್ಣ ಸಗರ.

ಬದುವಿಗೆ ಬೆಂಕಿ ಹಚ್ಚುವ ಮುನ್ನ ಪ್ರತಿಯೊಬ್ಬರೂ ಸಾಧಕ ಬಾಧಕ ಕುರಿತು ಯೋಚನೆ ಮಾಡುವುದು ಅಗತ್ಯವಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎನ್ನುತ್ತಾರೆ ಪ್ರತ್ಯಕ್ಷದರ್ಶಿ ಪರಿಸರ ಸಂರಕ್ಷಕರು.

ಒಂದು ಗಿಡ ಬೆಳೆಯಲು ಬಹಳಷ್ಟು ವರ್ಷಗಳೇ ಬೇಕು. ಬೆಂಕಿ ಹಚ್ಚುವುದರಿಂದ ಅದೆಷ್ಟೋ ಗಿಡಮರಗಳು ಸುಟ್ಟುಹೋಗಿ ಶುದ್ಧಗಾಳಿ ನೆರಳು ಸಿಗದಂತಾಗುತ್ತದೆ
ಹನುಮಂತಪ್ಪ ಕಾಂತಿ ಸಾಮಾಜಿಕ ಕಾರ್ಯಕರ್ತ

ಬೆಂಕಿಯ ಹೊಗೆಗೆ ದಾರಿ ಕಾಣದೆ ವಾಹನಗಳು ಅಪಘಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
ತಿಮ್ಮಯ್ಯ ಬಿ.ಕೆ. ಪಿಎಸ್ಐ ಕಾಳಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.