ಕಾಳಗಿ: ಸತತ ಮೂರು ವರ್ಷ ತೀರಾ ಕುಗ್ಗಿದ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶದ ಸುಧಾರಣೆಗೆ ಈ ವರ್ಷ ಶಿಕ್ಷಕರು ನಾನಾ ಪ್ರಯತ್ನಗಳನ್ನು ಕೈಗೊಂಡಿದ್ದಾರೆ.

ಕಳೆದ ವರ್ಷದ ಫಲಿತಾಂಶಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿ ಪ್ರಸಕ್ತ ಸಾಲಿನ ಆರಂಭದಲ್ಲೇ (ಜೂನ್ 3) ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ, ಜಿ.ಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ ಮತ್ತು ಎಸ್ಡಿಎಂಸಿ ನೇತೃತ್ವದಲ್ಲಿ ಶಿಕ್ಷಕರೊಂದಿಗೆ ನಡೆದ ಸ್ಥಳೀಯರ ಸಭೆ ಅತ್ಯಂತ ಮಹತ್ವ ಪಡೆದಿತ್ತು.

ಸಭೆಯಲ್ಲಿ ಶಿಕ್ಷಕರು ನೀಡಿದ ಭರವಸೆಯಂತೆ ಪ್ರಸ್ತುತ ಎಸ್ಸೆಸ್ಸೆಲ್ಸಿ ಓದುತ್ತಿರುವ ಕನ್ನಡ ಮಾಧ್ಯಮ-61 ಮತ್ತು ಉರ್ದು ಮಾಧ್ಯಮ-16 ಸೇರಿ ಒಟ್ಟು 77ಮಕ್ಕಳ ಫಲಿತಾಂಶ ಸುಧಾರಣೆಯಲ್ಲಿ ಶಿಕ್ಷಕರು ಬೆಳಿಗ್ಗೆ 8 ರಿಂದ ರಾತ್ರಿ 8ರವರೆಗೂ ನಿರತರಾಗಿದ್ದು ಕಂಡುಬರುತ್ತಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಿಷನ್ 40+, ಅರಿವೇ ಗುರು ಎಂಬ ಮಾದರಿ ಪ್ರಶ್ನೆ ಸಹಿತ ಉತ್ತರ ಪತ್ರಿಕೆ, ರಜೆ ದಿನಗಳಲ್ಲೂ ವಿಶೇಷ ತರಗತಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಒನ್ ಟು ಒನ್ ಬೋಧನೆ ಕೈಗೊಂಡಿದ್ದಾರೆ.

ಪ್ರತಿವಾರ ಹಾಗೂ ತಿಂಗಳಿಗೊಮ್ಮೆ ಕಿರು ಪರೀಕ್ಷೆ, ರಸಪ್ರಶ್ನೆ, ಓದು-ಬರಹ ರೂಢಿ, ದಿಢೀರ್ ಪರೀಕ್ಷೆ, ಮನೆ ಭೇಟಿ ಹೀಗೆ ಹಲವು ಚಟುವಟಿಕೆಗಳು ನಿರಂತರವಾಗಿ ನಡೆಸಿ ಮಕ್ಕಳನ್ನು ಪರೀಕ್ಷೆಗೆ ಭಯಮುಕ್ತರಾಗಿ ಸಜ್ಜುಗೊಳಿಸುತ್ತಿದ್ದಾರೆ.

ಈ ವರ್ಷ ಫಲಿತಾಂಶ ಉತ್ತಮ ಮಾಡಲು ಪಣತೊಟ್ಟಿರುವ ಈ ಶಾಲೆಯ ಪ್ರತಿಯೊಬ್ಬ ಶಿಕ್ಷಕರು ತಮ್ಮದೇ ಆದ ಶೈಲಿಯಲ್ಲಿ ವಿದ್ಯಾರ್ಥಿಗಳ ಬೆನ್ನುಬಿದ್ದು ಹಗಲು, ರಾತ್ರಿ ಎನ್ನದೆ ಬೋಧನೆ ಮಾಡುತ್ತಿರುವ ಕಾರ್ಯ ವಿಶೇಷವಾಗಿದ್ದು ಪೋಷಕರು ಶ್ಲಾಘಿಸಿದ್ದಾರೆ.

116 ಶಾಲೆಗಳ ಉತ್ತಮ ಫಲಿತಾಂಶಕ್ಕೆ ಕ್ರಮ

‘ಚಿತ್ತಾಪುರ, ಕಾಳಗಿ ಮತ್ತು ಶಹಾಬಾದ್ ತಾಲ್ಲೂಕು ಒಳಗೊಂಡು 49 ಸರ್ಕಾರಿ, 14 ಅನುದಾನಿತ, 35 ಅನುದಾನ ರಹಿತ ಹಾಗೂ 18 ಇತರೆ ಸೇರಿ ಒಟ್ಟು 116 ಪ್ರೌಢ ಶಾಲೆಗಳು ತಮ್ಮ ವ್ಯಾಪ್ತಿಗೆ ಬರುತ್ತವೆ. ಈ ಪೈಕಿ 5,160 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ’ ಎಂದು ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಫಲಿತಾಂಶದ ಗುಣಮಟ್ಟ ಹೆಚ್ಚಿಸಲು ನಿರಂತರವಾಗಿ ಶಾಲಾ ಭೇಟಿ ಮಾಡಲಾಗುತ್ತಿದೆ. ಡಯಟ್ ನೋಡಲ್ ಅಧಿಕಾರಿಗಳು ಸಹ ನಿರಂತರವಾಗಿ ಭೇಟಿ ನೀಡುತ್ತಾ ಫಲಿತಾಂಶ ವಿಶ್ಲೇಷಣೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಕ್ಕಳಿಗೆ ಪರೀಕ್ಷಾ ಭಯ ನಿವಾರಿಸಲು ರೇಡಿಯೊ ಕಾರ್ಯಕ್ರಮ, ಹೆಚ್ಚುವರಿ ಆಯುಕ್ತರ ಮಾರ್ಗದರ್ಶನದಲ್ಲಿ ಯುಟ್ಯೂಬ್ ಲೈವ್ ಕಾರ್ಯಕ್ರಮ ಮಾಡಲಾಗಿದೆ.

ಒಟ್ಟು 21 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ಭಂಕೂರಿನ ಬಸವ ಸಮಿತಿ ಪ್ರೌಢಶಾಲೆ (184 ಪರೀಕ್ಷಾರ್ಥಿಗಳು) ಅತ್ಯಂತ ಚಿಕ್ಕ ಕೇಂದ್ರವಾಗಿದ್ದರೆ, ಕಾಳಗಿ ಸರ್ಕಾರಿ ಪ್ರೌಢ ಶಾಲೆ (557 ಪರೀಕ್ಷಾರ್ಥಿಗಳು) ಅತ್ಯಂತ ದೊಡ್ಡ ಕೇಂದ್ರವಾಗಿದೆ’ ಎಂದು ಬಿಇಒ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260316-31-34511748

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.