ಕಾಳಗಿ: ತಾಲ್ಲೂಕಿನ ಹೆಬ್ಬಾಳ ಗ್ರಾಮದ ಅಣಿವೀರಭದ್ರೇಶ್ವರ ಜಾತ್ರಾ ಮಹೋತ್ಸವ ಗುರುವಾರ ಸಂಭ್ರಮದಿಂದ ತೆರೆ ಕಂಡಿತು.

ಭಕ್ತರು ವಿವಿಧ ವಾದ್ಯಮೇಳಗಳ ಝೇಂಕಾರದ ನಡುವೆ ಈಚೆಗೆ ರಾತ್ರಿ ಶ್ರದ್ಧಾ ಭಕ್ತಿಯಿಂದ ತೇರು ಎಳೆದು ಸಂಭ್ರಮಿಸಿದರು. ಜಯಘೋಷ ಹಾಕಿ ಉತ್ತತ್ತಿ, ಬಾಳೆಹಣ್ಣು ತೇರಿನ ಮೇಲೆ ತೂರಿ ಕೈಮುಗಿದು ನಮಿಸಿ ಹರಕೆ ಸಲ್ಲಿಸಿದರು. ಪಟಾಕಿ ಸದ್ದು, ವಿದ್ಯುತ್ ದೀಪಗಳ ಅಲಂಕಾರ ಭಕ್ತರನ್ನು ಆಕರ್ಷಿಸಿತು.

ಇದಕ್ಕೂ ಮುಂಚೆ ನಸುಕಿನ ಜಾವ ಮೆರವಣಿಗೆಯೊಂದಿಗೆ ಹೊರವಲಯದ ಅಣಿವೀರಭದ್ರೇಶ್ವರ ಗುಡಿಯಿಂದ ಹೂವು ತಂದು ಪೂಜೆ ಸಲ್ಲಿಸಿ ಪುರವಂತರೊಂದಿಗೆ ಭಕ್ತಿಭಾವದಿಂದ ಅಗ್ಗಿ ತುಳಿದರು. ವಿವಿಧೆಡೆಯ ಭಕ್ತರು ಅಣಿವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿ ಕಾಯಿಕರ್ಪೂರ, ನೈವೇದ್ಯ, ಹೂಹಾರ ಸಮರ್ಪಿಸಿದರು.

ಗುರುವಾರ ಜಂಗಿ ಕುಸ್ತಿಗಳು ಏರ್ಪಟ್ಟು ವಿಜೇತರಿಗೆ ಬಹುಮಾನ ನೀಡಲಾಯಿತು. ಜಾತ್ರೆ ನಿಮಿತ್ತ ದೇವರ ಗಂಗಾಭಿಷೇಕ, ದೇವರ ಪಲ್ಲಕ್ಕಿ ಮತ್ತು ನಂದಿ ಧ್ವಜದ ಮೆರವಣಿಗೆ ನೆರವೇರಿತು.

ಹೆಬ್ಬಾಳ, ಚಿಂಚೋಳಿ (ಎಚ್), ಕಮಕನೂರ, ತೊಂಚಿ, ಸಾವತಖೇಡ, ನಿಪ್ಪಾಣಿ, ಹುಳಗೇರಿ, ಕಂದಗೂಳ, ಬಣಬಿ ಸುತ್ತಲಿನ ವಿವಿಧೆಡೆಯ ಭಕ್ತರು ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು.

ದೇವಸ್ಥಾನದ ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳು ಸೇರಿದಂತೆ ಅಪಾರ ಭಕ್ತಸಮೂಹ ಭಾಗವಹಿಸಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-31-203893441

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.