ಕಾಳಗಿ: ಯುಗಾದಿ ಹಬ್ಬದ ಪ್ರಯುಕ್ತ ಕಮಲಾಪುರ ತಾಲ್ಲೂಕಿನ ಶ್ರೀಕ್ಷೇತ್ರ ರೇವಗ್ಗಿ ಗುಡ್ಡದ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಗುರುವಾರ ಬೆಳಿಗ್ಗೆ ರೈತರ ಕಲ್ಯಾಣಕ್ಕಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿತು.

ಸುತ್ತಲಿನ ಹಳ್ಳಿಗಳ ನೂರಾರು ರೈತರು ಮತ್ತು ಭಕ್ತಾದಿಗಳು ಭಾಗವಹಿಸಿ ‘ನಾಡಿನ ರೈತರಿಗೆ ಉತ್ತಮ ಮಳೆ-ಬೆಳೆ ಸಿಗಲಿ ಮತ್ತು ಬೆಳೆದ ಬೆಳೆಗೆ ಯೋಗ್ಯ ಬೆಲೆ ಲಭಿಸಿ ಅನ್ನದಾತರು ಸಮೃದ್ಧಿಸಲಿ ಎಂದು ಮಹಾಪೂಜೆ ಹಾಗೂ ರುದ್ರಾಭಿಷೇಕ ಮಾಡಿದರು.

ರಟಕಲ್ ನಡುವಿನ ಮಠದ ರೇವಣಸಿದ್ಧ ಶಿವಾಚಾರ್ಯರು, ಹೊಸಳ್ಳಿಯ ಸಿದ್ದಲಿಂಗ ಶಿವಾಚಾರ್ಯರು, ರಟಕಲ್ ವಿರಕ್ತಮಠದ ನೀಲಕಂಠ ದೇವರು, ಗೌರಿಗಣೇಶ ಗುಡ್ಡದ ರೇವಣಸಿದ್ದ ಶರಣರು ಆಶೀರ್ವಚನ ನೀಡಿದರು.

ರೈತ ಮುಖಂಡ ಶಿವರಾಜ ಪಾಟೀಲ ಗೊಣಗಿ, ವೀರಣ್ಣ ಗಂಗಾಣಿ ನೇತೃತ್ವ ವಹಿಸಿದ್ದರು. ದೇವಸ್ಥಾನದ ಕಾರ್ಯದರ್ಶಿ ಸದಾಶಿವ ವಗ್ಗೆ, ಅರ್ಚಕ ಶಾಂತಯ್ಯಸ್ವಾಮಿ, ಸೋಮಶೇಖರಯ್ಯ ಸ್ವಾಮಿ, ಓಂಕಾರ ಸ್ವಾಮಿ, ಸಿದ್ದಯ್ಯ ಸ್ವಾಮಿ, ರೈತರಾದ ರುದ್ರಶೆಟ್ಟಿ ಗುರುಮಿಟ್ಕಲ್, ಶಾಂತಪ್ಪ ಪಾಟೀಲ, ಸುಭಾಷ ಪಾಟೀಲ, ರಾಜುಗೌಡ ಪಾಟೀಲ, ದಯಾಸಾಗರ ಪಾಟೀಲ, ಚನ್ನಪ್ಪಗೌಡ ಪಾಟೀಲ, ಮಂಜುಗೌಡ ಪಾಟೀಲ, ನೀಲಕಂಠಗೌಡ ಪಾಟೀಲ, ಸಿದ್ದನಗೌಡ ಗೊಳೇದ, ಕಾಶಿನಾಥ ಗೋಗಿ, ರೇವಪ್ಪ ಪಾಟೀಲ, ಶಂಕರಾವ್ ಪಾಟೀಲ, ಕಾಶಿನಾಥ ಇದ್ದರು.

ಕಾಳೇಶ್ವರ ಪಲ್ಲಕ್ಕಿ ಮೆರವಣಿಗೆ ಅದ್ದೂರಿ

ಕಾಳಗಿ: ಅಪಾರ ಭಕ್ತರ ಆರಾಧ್ಯದೈವ ಇಲ್ಲಿನ ನೀಲಕಂಠ ಕಾಳೇಶ್ವರ ಪಲ್ಲಕ್ಕಿ ಮೆರವಣಿಗೆ (ಉತ್ಸವ) ಯುಗಾದಿ ಹಬ್ಬದ ಗುರುವಾರ ಸಂಜೆ ಅದ್ದೂರಿಯಾಗಿ ಜರುಗಿತು.

ಅರ್ಚಕ ಕಲ್ಯಾಣಭಟ್ ಪುರೋಹಿತ ಮನೆಯಲ್ಲಿ ಉತ್ಸವದ ಬೆಳ್ಳಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಲಾಯಿತು. ಬಳಿಕ ಹೂವುಹಾರಗಳ ಅಲಂಕಾರದ ಪಲ್ಲಕ್ಕಿಯಲ್ಲಿರಿಸಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.

ಹಲಗೆ, ಡೊಳ್ಳು, ಭಾಜಾ-ಭಜಂತ್ರಿ, ಭಜನೆ ವಾದ್ಯಮೇಳಗಳೊಂದಿಗೆ ಪಲ್ಲಕ್ಕಿಯು ರಾತ್ರಿ ದೇವಸ್ಥಾನಕ್ಕೆ ತಲುಪಿತು.

ನಿಸರ್ಗ ಗುರುಕುಲ ಆಯೋಜಿಸಿದ ಸ್ಪರ್ಧೆಯಲ್ಲಿ ಪಲ್ಲಕ್ಕಿ ಆಗಮನದ ರಸ್ತೆಯ ಅಕ್ಕಪಕ್ಕದ ಮನೆಗಳ ಮುಂದೆ ಮಹಿಳೆಯರು ರಂಗೋಲಿ ಚಿತ್ತಾರ ಮೂಡಿಸಿ ಮೆರಗು ತಂದರು. ಈ ಮಹಿಳೆಯರಿಗೆ ಶಾಂತವೀರಯ್ಯ ಮಠಪತಿ ಬಹುಮಾನ ನೀಡಿದರು.

ಶಿವಲೀಲಾ ಅಷ್ಟಗಿ, ಸಿದ್ದಲಿಂಗಮ್ಮ ಮಾನಶೆಟ್ಟಿ, ಭಾಗೀರಥಿ ಪಡಶೆಟ್ಟಿ, ಶಶಿಕಲಾ ಕರೆಮನೋರ ರಂಗೋಲಿ ವೀಕ್ಷಿಸಿದರು. ವರ್ತಕರ ಸಂಘದಿಂದ ಅನ್ನದಾಸೋಹ ಮತ್ತು ವಾಸವಿ ಮಹಿಳಾ ಕ್ಲಬ್ ದಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು.

ದೇವಸ್ಥಾನ ಸಮಿತಿ ಪ್ರಮುಖರಾದ ಶಿವಶರಣಪ್ಪ ಕಮಲಾಪುರ, ಶರಣಗೌಡ ಪಾಟೀಲ, ಶಿವಶರಣಪ್ಪ ಗುತ್ತೇದಾರ, ಸೋಮಶೇಖರ ಮಾಕಪನೋರ, ಭಕ್ತರಾದ ನೀಲಕಂಠ ಗುತ್ತೇದಾರ, ಸಂತೋಷ ಪತಂಗೆ, ದೇವಿಂದ್ರಪ್ಪ ಚಿಮ್ಮನಚೋಡ, ಮಲ್ಲಿಕಾರ್ಜುನರೆಡ್ಡಿ ಕೋಡ್ಲಾ, ಶೇಖರ ಪಾಟೀಲ, ಜಗದೀಶ ಪಾಟೀಲ, ಶಿವಶರಣಪ್ಪ ದಿವಟಗಿ, ನಾಗಯ್ಯ ಮಠಪತಿ, ಶರಣಪ್ಪ ಮಳಗಿ, ಹಣಮಂತ ಹೂಗಾರ, ಕಾಳಪ್ಪ ಕರೆಮನೋರ, ಶಿವಕಿರಣ ಪ್ಯಾಟಿಮಠ, ಉದಯಕುಮಾರ ಸುಂಠಾಣ ಅನೇಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದರು.

ದೇವಸ್ಥಾನದಲ್ಲಿ ಚಂದ್ರಶೇಖರ ಜೋಶಿ ಪಂಚಾಂಗ ಹೇಳಿ ವರ್ಷದ ಭವಿಷ್ಯ ನುಡಿದರು. ಪಲ್ಲಕ್ಕಿಯು ಏ 15ರ ವರೆಗೆ ಪ್ರತಿದಿನ ಸಂಜೆ 6ಗಂಟೆಗೆ ನೀಲಕಂಠ ಕಾಳೇಶ್ವರ ಗುಡಿ ಪ್ರದಕ್ಷಿಣೆ ಹಾಕಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.