ಬುಧವಾರ, ಅಕ್ಟೋಬರ್ 16, 2019
28 °C

ಯುವಕರಿಬ್ಬರು ನೀರು ಪಾಲು

Published:
Updated:

ಕಲಬುರ್ಗಿ: ತಾಲೂಕಿನ ಕೊಳ್ಳೂರ ಗ್ರಾಮದ ಕೆರೆಯಲ್ಲಿ  ಸಸಿ ಬಿಡಲು ಹೋಗಿ ಯುವಕರಿಬ್ಬರು ಬುಧವಾರ ನೀರು ಪಾಲಾಗಿದ್ದಾರೆ. 

ಗಣೇಶ ಗುತ್ತೇದಾರ (19) ಮತ್ತು ಗೋಪಾಲ ಪಾಟೀಲ (19) ನೀರು ಪಾಲಾದವರು. 

ನವರಾತ್ರಿ ನಿಮಿತ್ತ ಮನೆಯಲ್ಲಿ ಹಾಕಿದ ಸಸಿಗಳನ್ನು ಕೆರೆಯಲ್ಲಿ ಬಿಡಲು ಹೋಗಿದ್ದ ವೇಳೆಯಲ್ಲಿ ಅವಘಡ ಸಂಭವಿಸಿದೆ.

ಇಬ್ಬರಿಗಾಗಿ ಪೊಲೀಸರು ಹಾಗೂ ಈಜುಗಾರರು ಶೋಧ ನಡೆಸಿದ್ದಾರೆ. ಫರಹತಾಬಾದ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

Post Comments (+)