ಕಲಬುರಗಿ: ಸೂರು ಎಲ್ಲರಿಗೂ ಅಗತ್ಯ. ಅದಕ್ಕಾಗಿ ಸರ್ಕಾರಗಳು ಹಲವಾರು ವಸತಿ ಯೋಜನೆಗಳನ್ನು ಜಾರಿಗೆ ತಂದಿವೆ. ಆದರೂ ಕಲ್ಯಾಣ ಕರ್ನಾಟಕದಲ್ಲಿ ಹಲವು ಕುಟುಂಬಗಳು ಸ್ವಂತ ನಿವೇಶನ ಹಾಗೂ ಸೂರು ಹೊಂದಿಲ್ಲ!.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಯೋಜನೆಗಳಡಿ ನಿವೇಶನ ಹಾಗೂ ಮನೆಗಳನ್ನು ಮಂಜೂರು ಮಾಡಿದರೂ ಈ ಭಾಗದಲ್ಲಿ ಇನ್ನೂ ಹಲವಾರು ಕುಟುಂಬಗಳು ನಿವೇಶನ ಮತ್ತು ಸೂರು ರಹಿತವಾಗಿ ಬದುಕುತ್ತಿದ್ದು, ಮಂಜೂರಾದ ನಿವೇಶನ ಹಾಗೂ ಮನೆಗಳು ಎಲ್ಲಿ ಹೋದವು ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ.

ಕೇಂದ್ರ, ರಾಜ್ಯ ಸರ್ಕಾರಗಳ ವಸತಿ ಯೋಜನೆಗಳ ಅನುಷ್ಠಾನದ ನೋಡಲ್ ಸಂಸ್ಥೆಯಾಗಿರುವ ರಾಜೀವ್ ಗಾಂಧಿ ವಸತಿ ನಿಗಮದ ಅಂಕಿ–ಅಂಶಗಳ ಪ್ರಕಾರ ಏಳು ಜಿಲ್ಲೆಗಳಲ್ಲಿ 6,25,869 ನಿವೇಶನ ರಹಿತ, 6,00,821 ಸ್ವಂತ ಸೂರಿಲ್ಲದ ಕುಟುಂಬಗಳಿವೆ.

ಹೆಚ್ಚು ನಿವೇಶನ ರಹಿತ ಕುಟುಂಬಗಳನ್ನು ಹೊಂದಿದ ಜಿಲ್ಲೆಗಳಲ್ಲಿ ಬಳ್ಳಾರಿ ಮೊದಲ ಸ್ಥಾನದಲ್ಲಿದೆ. ಇಲ್ಲಿ 4,32,780 ಕುಟುಂಬಗಳಿಗೆ ನಿವೇಶನ ಇಲ್ಲ. ಎರಡನೇ ಸ್ಥಾನದಲ್ಲಿ ರಾಯಚೂರು ಜಿಲ್ಲೆ ಇದ್ದು, ಇಲ್ಲಿ 76,762 ನಿವೇಶನ ರಹಿತ ಕುಟುಂಬಗಳಿವೆ.

ಹೆಚ್ಚು ಸೂರಿಲ್ಲದ ಕುಟುಂಬ ಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಕಲಬುರಗಿ ಮೊದಲ ಸ್ಥಾನದಲ್ಲಿದೆ. 1,52,336 ಕುಟುಂಬಗಳಿಗೆ ಸ್ವಂತ ಸೂರಿಲ್ಲ. ಎರಡನೇ ಸ್ಥಾನದಲ್ಲಿ ರಾಯಚೂರು ಜಿಲ್ಲೆ ಇದ್ದು, ಇಲ್ಲಿ 1,34,637 ಸ್ವಂತ ಸೂರಿಲ್ಲದ ಕುಟುಂಬಗಳಿವೆ.

ಏಳು ಜಿಲ್ಲೆಗಳ ನಗರ ಹಾಗೂ ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ಹಲವರಿಗೆ ನಿವೇಶನ ಇಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ವಾಸ ಮಾಡುವ ಬರೋಬ್ಬರಿ 4,14,753 ಕುಟುಂಬಗಳಿಗೆ ನಿವೇಶನ ಇಲ್ಲ. ರಾಯಚೂರು ಜಿಲ್ಲೆಯ ಪಟ್ಟಣ, ನಗರ ಪ್ರದೇಶದಲ್ಲಿ 59,884 ನಿವೇಶನ ರಹಿತ ಕುಟುಂಬಗಳು ವಾಸವಾಗಿವೆ. ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 1,48,698 ಕುಟುಂಬಗಳಿಗೆ ಸ್ವಂತ ಮನೆಯೇ ಇಲ್ಲ.

ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಮನೆಗಳು ಹಾಗೂ ನಿವೇಶನಗಳ ಕುರಿತು ತನಿಖೆ ನಡೆಸಬೇಕು ಎಂದು ಕಲಬುರಗಿ ನಿವಾಸಿ ಚೇತನ್ ಒತ್ತಾಯಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.