ಕಲಬುರಗಿ: ಕಳೆದ ವರ್ಷ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್ಡಿಬಿ) ₹5 ಸಾವಿರ ಕೋಟಿ ಅನುದಾನ ಮತ್ತು ಜವಳಿ ಪಾರ್ಕ್ ಆರಂಭಿಸುವ ಬಗ್ಗೆ ನೀಡಿದ್ದ ಭರವಸೆಗಳನ್ನು ಶುಕ್ರವಾರ ಮಂಡಿಸಿದ ಬಜೆಟ್ನಲ್ಲಿ ಘೋಷಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಜನರನ್ನು ಓಲೈಸುವ ಕಸರತ್ತು ಮಾಡಿದ್ದಾರೆ.

‘ಪ್ರಮುಖ ಬೇಡಿಕೆಗಳಾಗಿದ್ದ 371 (ಜೆ) ಕಲಂನಡಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳ ನಿರ್ವಹಣೆಗೆ ಪ್ರತ್ಯೇಕ ಸಚಿವಾಲಯ, ಜಿಲ್ಲೆಯ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಹಣ ನಿಗದಿ, ತೊಗರಿ ಬೆಳೆಗಾರರ ಸಂಕಷ್ಟಗಳ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಕೈಗಾರಿಕೆ, ಕೃಷಿ ನೀತಿಯ ಕುರಿತಾದ ಬೇಡಿಕೆಗಳ ಬಗ್ಗೆ ಯಾವುದೇ ಪ್ರಸ್ತಾವವಿಲ್ಲ. ಮತ್ತೊಮ್ಮೆ ಕಲ್ಯಾಣ ಕರ್ನಾಟಕದ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮತ್ತೊಮ್ಮೆ ನಡೆದಿದೆ’ ಎಂದು ಜಿಲ್ಲೆಯ ಸಾಮಾಜಿಕ ಹೋರಾಟಗಾರರು ದೂರಿದ್ದಾರೆ.

ಕೆಕೆಆರ್ಡಿಬಿಗೆ ಕಳೆದ ಬಾರಿ ₹3 ಸಾವಿರ ಕೋಟಿ ಘೋಷಿಸಿದ್ದ ಮುಖ್ಯಮಂತ್ರಿ, ಮುಂದಿನ ಸಾಲಿನಲ್ಲಿ ₹5 ಸಾವಿರ ಕೋಟಿ ಒದಗಿಸುವ ಧಾರಾಳತನ ತೋರಿದ್ದಾರೆ. ಆದರೆ, ಇಷ್ಟೊಂದು ಬೃಹತ್ ಪ್ರಮಾಣದ ಹಣ ನಿರ್ವಹಣೆ ಮಾಡುವ ಮಂಡಳಿಗೆ ಅಗತ್ಯ ಸಿಬ್ಬಂದಿ, ಪ್ರತ್ಯೇಕ ಯೋಜನಾ ವಿಭಾಗ, ಎಂಜಿನಿಯರಿಂಗ್ ವಿಭಾಗ ಕೊಡುವ ಬಗ್ಗೆ ಯಾವುದೇ ಘೋಷಣೆ ಹೊರಡಿಸಿಲ್ಲ. ಪ್ರತಿ ಹೊಲಕ್ಕೆ ನೀರು ಎಂಬ ಪ್ರಧಾನಿಯವರ ಆಶಯದಂತೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ₹ 442 ಕೋಟಿ ವೆಚ್ಚದಲ್ಲಿ 138 ಮೇಲ್ಮೈ ಸಣ್ಣ ನೀರಾವರಿ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ, ಈಗಾಗಲೇ ಅನುಷ್ಠಾನಗೊಂಡಿರುವ ನೀರಾವರಿ ಯೋಜನೆಗಳ ಕಾಲುವೆ ಆಧುನೀಕರಣಕ್ಕೆ ಯಾವುದೇ ಹಣಕಾಸು ನಿಗದಿ ಮಾಡಿಲ್ಲ.

ಕಿದ್ವಾಯಿಯಡಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವನ್ನು ಆರಂಭ, ಕಲಬುರಗಿಯಲ್ಲಿ ಐವಿಎಫ್ ಕ್ಲಿನಿಕ್ ಸ್ಥಾಪನೆ, 411 ಕಿ.ಮೀ. ಉದ್ದದ ಬೀದರ್–ಕಲಬುರಗಿ–ಬೀದರ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಕೇಂದ್ರದೊಂದಿಗೆ ಜಂಟಿಯಾಗಿ ₹ 7,650 ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸುವುದು, ಗದಗ–ವಾಡಿ ರೈಲ್ವೆ ಮಾರ್ಗಕ್ಕೆ ₹ 200 ಕೋಟಿ ನೀಡುವುದಾಗಿ ಹಣಕಾಸು ಖಾತೆಯನ್ನೂ ಹೊಂದಿರುವ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದಾರೆ. ಗದಗ–ವಾಡಿ ಮಾರ್ಗವನ್ನು ಶೀಘ್ರಗತಿಯಲ್ಲಿ ನೆರವೇರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಸನ್ನತಿ ಬಳಿ ಕಾಗಿಣಾ ನದಿಯಲ್ಲಿ ಲಘು ಸರಕು ಸಾಗಣೆ ದೋಣಿ ವ್ಯವಸ್ಥೆ ಆರಂಭಿಸುವುದಾಗಿ ತಿಳಿಸಿದ್ದಾರೆ. ಚಿತ್ತಾಪುರ ಕ್ಷೇತ್ರದ ಬಿಜೆಪಿ ಕಣ್ಣು ನೆಟ್ಟಿದ್ದು, ಇದಕ್ಕೆ ಪೂರಕವಾಗಿ ಬೊಮ್ಮಾಯಿ ಅವರು ಚಿತ್ತಾಪುರದಲ್ಲಿ ಕೈಗಾರಿಕಾ ವಸಾಹತು ನಿರ್ಮಾಣದ ಪ್ರಸ್ತಾವ ಮಾಡಿದ್ದಾರೆ.

ತಾಲ್ಲೂಕು ಆಸ್ಪತ್ರೆ ಪ್ರಸ್ತಾವವಿಲ್ಲ

ರಾಜ್ಯದ ಕೆಲ ಹಳೆಯ ತಾಲ್ಲೂಕುಗಳಲ್ಲಿ ತಾಲ್ಲೂಕು ಆಸ್ಪತ್ರೆಗಳನ್ನು ಆರಂಭಿಸುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿದೆ. ಆದರೆ, ಜಿಲ್ಲೆಯ ನೂತನ ತಾಲ್ಲೂಕುಗಳಾದ ಶಹಾಬಾದ್, ಕಮಲಾಪುರ, ಕಾಳಗಿ ಮತ್ತು ಯಡ್ರಾಮಿಯಲ್ಲಿ ತಾಲ್ಲೂಕು ಆಸ್ಪತ್ರೆ ಆರಂಭಿಸುವ ಬಗ್ಗೆ ಪ್ರಸ್ತಾಪವಿಲ್ಲ. ಕಮಲಾಪುರದಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಆರಂಭಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಭರವಸೆ ನೀಡಿದ್ದರು. ಆದರೆ, ಅದು ಹುಸಿಯಾಗಿದೆ.

ದತ್ತಪೀಠ, ಚಂದ್ರಲಾಂಬಾ ದೇವಸ್ಥಾನಕ್ಕೆ ಅನುದಾನ

ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನ ಹಾಗೂ ಸನ್ನತಿಯ ಚಂದ್ರಲಾಂಬಾ ದೇವಸ್ಥಾನಕ್ಕೆ ಅನುದಾನ ನೀಡುವ ಅವರು ಬಜೆಟ್ನಲ್ಲಿ ಘೋಷಿಸಲಾಗಿದೆ. ಆದರೆ, ಎಷ್ಟು ಅನುದಾನವೆಂದು ನಿಖರವಾಗಿ ಹೇಳಿಲ್ಲ. ಈಗಾಗಲೇ ಜಿಲ್ಲಾಡಳಿತ ಗಾಣಗಾಪುರ ಅಭಿವೃದ್ಧಿಗೆ ಕಾಶಿ ಕಾರಿಡಾರ್ ಮಾದರಿಯಲ್ಲಿ ₹ 40 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳುವುದಾಗಿ ತಿಳಿಸಿದೆ.

ಮಳಖೇಡ ಕೋಟೆ ಅಭಿವೃದ್ಧಿಗೆ ₹ 20 ಕೋಟಿ

ರಾಷ್ಟ್ರಕೂಟರ ರಾಜಧಾನಿ ಸೇಡಂ ತಾಲ್ಲೂಕಿನ ಮಳಖೇಡ ಕೋಟೆಯ ಅಭಿವೃದ್ಧಿಗೆ ₹ 20 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿಯವರು ಘೋಷಿಸಿದ್ದು, ಇತಿಹಾಸ ತಜ್ಞರು, ಸಂಶೋಧಕರಲ್ಲಿ ಸಂತಸ
ಮೂಡಿಸಿದೆ.

ಚಿತ್ತಾಪುರ ತಾಲ್ಲೂಕಿನ 2000 ವರ್ಷಗಳಷ್ಟು ಹಳೆಯದಾದ ದಕ್ಷಿಣ ಭಾರತದ ಐತಿಹಾಸಿಕ ಬೌದ್ಧ ಸ್ತೂಪದ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಪ್ರಸ್ತುತ ₹ 3 ಕೋಟಿ ವೆಚ್ಚದಲ್ಲಿ ಸಂರಕ್ಷಣಾ ಕಾರ್ಯ ಕೈಗೆತ್ತಿಕೊಂಡಿದೆ. ಆದರೆ, ಅಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಅನುದಾನ ನೀಡಬೇಕಿತ್ತು ಎಂಬುದು ಜಿಲ್ಲೆಯ ಪ್ರವಾಸಪ್ರಿಯರ ನಿರೀಕ್ಷೆಯಾಗಿತ್ತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು 2023–24ರಲ್ಲಿ ಭರ್ತಿ ಮಾಡುವುದಾಗಿ ಬಜೆಟ್ನಲ್ಲಿ ಭರವಸೆ ಸಿಕ್ಕಿದೆ. ಹೀಗಾಗಿ ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ನಿರೀಕ್ಷೆ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.