ಕಲಬುರಗಿ: ಕಲ್ಯಾಣ ಕರ್ನಾಟಕದ ಜಿಲ್ಲೆಗಳು 2025–26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ–1ರಲ್ಲಿ ಭರ್ಜರಿ ಫಲಿತಾಂಶ ಪಡೆದಿವೆ. ಆದರೆ, ‘ಹಿಂದುಳಿರುವ ಪ್ರದೇಶ’ ಎಂಬ ಹಣೆಪಟ್ಟ ಹೊತ್ತಿರುವ ಕಲ್ಯಾಣ ಕರ್ನಾಟಕದ ಮಕ್ಕಳಿಗೆ ಪ್ರಥಮ ಭಾಷೆಯೇ ಕಬ್ಬಿಣ ಕಡಲೆಯಾಗುತ್ತಿದೆ. ಪ್ರಸಕ್ತ ಸಾಲಿನ ವಿಷಯವಾರು ಫಲಿತಾಂಶ ಇದಕ್ಕೆ ಕನ್ನಡಿಹಿಡಿದಿದೆ.

ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕಲ್ಯಾಣ ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್, ಉರ್ದು, ಮರಾಠಿ, ತಮಿಳು, ತೆಲುಗು ಹಾಗೂ ಹಿಂದಿಯನ್ನು ಪ್ರಥಮ ಭಾಷೆಯಾಗಿ ಅಭ್ಯಸಿಸಿದ್ದರು. ಅದರಂತೆ 1,61,533 ವಿದ್ಯಾರ್ಥಿಗಳು ಪ್ರಥಮ ಭಾಷೆ ಪರೀಕ್ಷೆ ಎದುರಿಸಿದ್ದರು. ಅದರಲ್ಲಿ 1,53,547 ಮಾತ್ರವೇ ಪಾಸಾಗಿದ್ದು, ಶೇ95.06ರಷ್ಟು ಫಲಿತಾಂಶ ಪಡೆದಿದ್ದಾರೆ. ಒಟ್ಟು 13,537 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ದ್ವಿತೀಯ ಭಾಷೆ ಪರೀಕ್ಷೆ ಎದುರಿಸಿದ್ದ 1,61,549 ವಿದ್ಯಾರ್ಥಿಗಳ ಪೈಕಿ 1,56,364 ಮಂದಿ ಉತ್ತೀರ್ಣರಾಗಿದ್ದು, ಶೇ96.79ರಷ್ಟು ಫಲಿತಾಂಶ ಪಡೆದಿದ್ದಾರೆ. ತೃತೀಯ ಭಾಷೆ ಪರೀಕ್ಷೆಯನ್ನು 1,61,514 ಮಕ್ಕಳು ಬರೆದಿದ್ದರು. ಅದರಲ್ಲಿ 1,58,401 ಮಂದಿ ಪಾಸಾಗಿದ್ದು, ಶೇ 98.07ರಷ್ಟು ಫಲಿತಾಂಶ ದಾಖಲಾಗಿದೆ.

ಗಣಿತ ಪರೀಕ್ಷೆಯನ್ನು ಎದುರಿಸಿದ್ದ 1,61,491 ಮಕ್ಕಳ ಪೈಕಿ 1,57,274 ಮಂದಿ ಉತ್ತೀರ್ಣರಾಗಿದ್ದು, ಶೇ97.39ರಷ್ಟು ಫಲಿತಾಂಶ ಬಂದಿದೆ. 1,61,515 ವಿದ್ಯಾರ್ಥಿಗಳು ವಿಜ್ಞಾನ ಪರೀಕ್ಷೆ ಎದುರಿಸಿದ್ದರು. ಅದರಲ್ಲಿ 1,56,283 ಮಂದಿ ಪಾಸಾಗಿದ್ದು, ಶೇ96.76ರಷ್ಟು ಫಲಿತಾಂಶ ದಾಖಲಾಗಿದೆ. ಇನ್ನು, ಸಮಾಜ ವಿಜ್ಞಾನ ಪರೀಕ್ಷೆಯನ್ನು 1,61,476 ಮಂದಿ ಎದುರಿಸಿದ್ದರು. ಅದರಲ್ಲಿ 1,57,401 ಮಂದಿ ಉತ್ತೀರ್ಣರಾಗಿ ಶೇ 97.48ರಷ್ಟು ಫಲಿ ತಾಂಶ ಪಡೆದಿದ್ದರು.

ಕಲಬುರಗಿಯೇ ಕೊನೆ: ವಿಷಯ ವಾರು ಫಲಿತಾಂಶ ನೋಡಿದರೆ ಎಲ್ಲ ವಿಷಯಗಳಲ್ಲಿ ಕಲಬುರಗಿ ಜಿಲ್ಲೆಯ ವಿದ್ಯಾರ್ಥಿಗಳೇ ಕೊನೆ ಯ ಸ್ಥಾನದಲ್ಲಿದ್ದಾರೆ. ಇದು ಕಂದಾಯ ವಿಭಾಗೀಯ ಕೇಂದ್ರ ಸ್ಥಾನದಲ್ಲಿರುವ ಶಿಕ್ಷಣದ ಗುಣಮಟ್ಟದ ಬಗೆಗೆ ಗಂಭೀರ ಪ್ರಶ್ನೆಗಳನ್ನು ಏಳುವಂತೆ ಮಾಡಿದೆ.

ಅನುತ್ತೀರ್ಣದಲ್ಲಿ ಕಲಬುರಗಿ ಜಿಲ್ಲೆ ‘ಅಗ್ರ’

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಒಟ್ಟು 1.61 ಲಕ್ಷ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ–1 ಎದುರಿಸಿದ್ದರು. ಅದರಲ್ಲಿ 1.48 ಲಕ್ಷ ವಿದ್ಯಾರ್ಥಿಗಳು ಪಾಸಾಗಿ ಶೇ91.63ರಷ್ಟು ಫಲಿತಾಂಶ ಪಡೆದಿದ್ದರು. 13,537 ಮಕ್ಕಳು ವಿವಿಧ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರು. ಈ ಪೈಕಿ ಶೇ41.22ರಷ್ಟು ಅಂದರೆ 5,581 ಮಕ್ಕಳು ಕಲಬುರಗಿ ಜಿಲ್ಲೆಯವರು ಎಂಬುದು ಕಳವಳಕಾರಿ ಸಂಗತಿ.

ಇನ್ನುಳಿದ ಆರು ಜಿಲ್ಲೆಗಳ ಶೇ58.77ರಷ್ಟು ಅಂದರೆ 7,956 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಪಾಸಾಗಿಲ್ಲ. ಎಲ್ಲ ಆರೂ ವಿಷಯಗಳಲ್ಲಿ ಕಲ್ಯಾಣ ಕರ್ನಾಟಕದ 597 ವಿದ್ಯಾರ್ಥಿಗಳು ಹಿನ್ನಡೆ ಅನುಭವಿಸಿದ್ದು, ಇದರಲ್ಲಿ ಶೇ60ರಷ್ಟು ವಿದ್ಯಾರ್ಥಿಗಳು ಕಲಬುರಗಿ ಜಿಲ್ಲೆಯವರು!

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-33-926902285

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.