ವಾಡಿ: ‘ಕೋಲಿ ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿರುವ, ಯಾವುದೇ ಕಪ್ಪುಚುಕ್ಕೆ ಅಂಟಿಸಿಕೊಳ್ಳದ ತಿಪ್ಪಣ್ಣಪ್ಪ ಕಮಕನೂರು ಅವರನ್ನು ಮತ್ತೊಂದು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಪುನರಾಯ್ಕೆ ಮಾಡಬೇಕು’ ಎಂದು ಹಲಕರ್ಟಿ ಕೋಲಿ ಸಮಾಜದ ಹಿರಿಯ ಮುಖಂಡ ಅಶೋಕ ಛತ್ರಿಕಿ ಹಾಗೂ ಇನ್ನಿತರರು ಒತ್ತಾಯಿಸಿದರು.

ಹಲಕರ್ಟಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ‘ನಾಲ್ಕು ವರ್ಷ ಯಾವುದೇ ಕಳಂಕವಿಲ್ಲದೆ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ ಕೀರ್ತಿ ಕಮಕನೂರು ಅವರಿಗಿದ್ದು, ಇಡೀ ಸಮಾಜದ ಬೆನ್ನೆಲುಬಾಗಿ ನಿಂತಿರುವ ಅವರಿಗೆ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಪರಿಷತ್ತಿಗೆ ಆಯ್ಕೆ ಮಾಡಬೇಕು’ ಎಂದು ಹೇಳಿದರು.

ಸ್ಥಳೀಯ ಕೋಲಿ ಸಮಾಜದ ಗೌರವಾಧ್ಯಕ್ಷ ಕರಣಪ್ಪ ಇಸಬಾ ಹಾಗೂ ಚಂದ್ರರೆಡ್ಡಿ ಧನಕಾಯಿ ಮಾತನಾಡಿ, ‘ತಮ್ಮ ಅವಧಿಯುದ್ದಕ್ಕೂ ಪರಿಷತ್ನಲ್ಲಿ ಸಮಾಜದ ಪರವಾಗಿ ಧ್ವನಿ ಎತ್ತಿರುವ ಹಾಗೂ ರಾಜ್ಯದ ಹಲವೆಡೆ ಅಂಬಿಗರ ಚೌಡಯ್ಯನವರ ಮೂರ್ತಿ ಸ್ಥಾಪನೆಗಾಗಿ ಶ್ರಮಿಸುತ್ತಿರುವ ತಿಪ್ಪಣ್ಣಪ್ಪ ಅವರನ್ನೇ ಕಾಂಗ್ರೆಸ್ ಸರ್ಕಾರ ಮರು ಆಯ್ಕೆ ಮಾಡಬೇಕು. ಪ್ರಿಯಾಂಕ್ ಖರ್ಗೆ ಸಹ ತಿಪ್ಪಣ್ಣಪ್ಪ ಅವರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕು’ ಎಂದು ಕೋರಿದರು.

ಸಮಾಜದ ಸ್ಥಳೀಯ ಅಧ್ಯಕ್ಷ ದೊಡ್ಡಪ್ಪ ಕಟ್ಟಿಮನಿ, ಕಾರ್ಯದರ್ಶಿ ಭೀಮು ಕೊಲ್ಕುಂದಿ, ಪ್ರಮುಖರಾದ ಅಯ್ಯಪ್ಪ ಅಳ್ಳೊಳ್ಳಿ, ಶರಣಪ್ಪ ಹಿಟ್ಟಿನ, ಈರಣ್ಣ ಚನ್ನೂರು, ನಿಂಗಣ್ಣ ನೆಲೋಗಿ, ಈರಣ್ಣ ಚಾಮನೂರು, ಮಲ್ಲಿಕಾರ್ಜುನ ಕಟ್ಟಿಮನಿ, ದೊಡ್ಡಪ್ಪ ಹಿಟ್ಟಿನ, ಭೀಮಾಶಂಕರ ಕೊಲ್ಕುಂದಿ ಸೇರಿದಂತೆ ಇನ್ನಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-31-112697846

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.