ಕಮಲಾಪುರ(ಕಲಬುರಗಿ ಜಿಲ್ಲೆ): ತಾಲ್ಲೂಕಿನ ಕಲಮೂಡ ಗ್ರಾಮದ ಬಳಿ ರಸ್ತೆ ಪಕ್ಕದಲ್ಲಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಶನಿವಾರ ಬೆಳಿಗ್ಗೆ ಪತ್ತೆಯಾಗಿದ್ದು, ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ದೇಹವು ಅರೆಬರೆ ಸುಟ್ಟ ಸ್ಥಿತಿಯಲ್ಲಿದೆ. ಎರಡು ಕಾಲು ಸುಡದೇ ಉಳಿದಿವೆ. ಕಾಲಲ್ಲಿ ಕಾಲ್ಗೆಜ್ಜೆ ಇದ್ದು ಈ ಶವ ಮಹಿಳೆಯದ್ದಾಗಿದೆ ಎಂಬುದು ಪತ್ತೆ ಹಚ್ಚಬಹುದಾಗಿದೆ. ಒಂದು ಕಾಲಿನಲ್ಲಿ ಚಪ್ಪಲಿ ಇದ್ದು, ಇನ್ನೊಂದು ಕೆಳಗೆ ಬಿದ್ದಿದೆ. ಶವದ ಪಕ್ಕದಲ್ಲಿ ಕಾರದ ಪುಡಿ ಚೆಲ್ಲಾಡಿದೆ. ಮುಖದ ಮೇಲೆ ಭೀಕರ ಗಾಯಗಳಿವೆ. ಬೆರಳು ಕಡಿದು ಪಕ್ಕಕ್ಕೆ ಬಿದ್ದಿದ್ದೆ. ಹೀಗಾಗಿ ಮುಖಕ್ಕೆ ಕಾರದ ಪುಡಿ ಎರಚಿ ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಕಲಮೂಡ ಗ್ರಾಮದಿಂದ 1 ಕಿ.ಮೀ ಅಂತರದಲ್ಲಿ ಹೆದ್ದಾರಿ ಬದಿಗೆ ಈ ಶವ ಬಿದ್ದಿದ್ದು, ಗ್ರಾಮಸ್ಥರು ಹೌಹಾರಿದ್ದಾರೆ.

ಸಿಪಿಐ ಶಿವಶಂಕರ ಸಾಹು, ಸಿಬ್ಬಂದಿಯಾದ ಕುಪೇಂದ್ರ, ಹುಸೇನ್ ಪಟೇಲ್, ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.