ಕಮಲಾಪುರ: ಕಳೆದ 25 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಬಾಲಕಿಯ ಮೃತದೇಹವನ್ನು ಹೊರತೆಗೆದು ಶವಪರೀಕ್ಷೆ ನಡೆಸಿದ ಪ್ರಸಂಗ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ಕಳೆದ ಏ.23ರಂದು ತಮ್ಮ ಮನೆಯಲ್ಲೆ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ತಂದೆ-ತಾಯಿ ಹೊಲಕ್ಕೆ ಹೋದಾಗ ಈ ಘಟನೆ ನಡೆದಿತ್ತು. ಬಾಲಕಿ ತಂದೆ ಮಧ್ಯಾಹ್ನ ಮನೆಗೆ ವಾಪಾಸಾದಾಗ ಬಾಲಕಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಶಾಲೆ ಶುಲ್ಕ ಪಾವತಿ ನೆಪದಲ್ಲಿ ತುಸು ಕಿರಿಕಿರಿಯಾಗಿದ್ದು, ಅದೆ ವಿಷಯಕ್ಕೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪಾಲಕರು ಅಂದು ಸಂಜೆಯೇ ಶವ ಸಂಸ್ಕಾರ ಮಾಡಿದ್ದರು.

ಏ.24ರಂದು ಬಾಲಕಿಯ ನೋಟ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಪರಿಶೀಲಿಸಿದಾಗ ಅದರಲ್ಲಿ ಉಮೇಶ ಅಶೋಕ ತಡೋಳಗಿ ಎಂಬ ಯುವಕನ ಜೊತೆ ಪ್ರೀತಿ, ಪ್ರೇಮ, ಮೋಸ ವಿಷಯದ ಕುರಿತು ಉಲ್ಲೇಖವಿದೆ. ನನ್ನ ಮಗಳಿಗೆ ಉಮೇಶ ಎಂಬಾತ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿದ್ದಾನೆ. ನನ್ನ ಮಗಳ ಶವ ಹೊರತೆಗೆದು ಶವಪರೀಕ್ಷೆ ನಡೆಸಿ ಆರೋಪಿ ಉಮೇಶ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಾಲಕಿಯ ತಾಯಿ ಕಮಲಾಪುರ ಪೊಲೀಸ್ ಠಾಣೆಗೆ ಏ.27ರಂದು ದೂರು ನೀಡಿದ್ದು, ಅಂದೆ ಪ್ರಕರಣ ದಾಖಲಾಗಿತ್ತು.

ತಹಶೀಲ್ದಾರ್ ಮೊಹಮ್ಮದ್ ಮೋಸಿನ್ ಅಹಮ್ಮದ್, ತಾಲ್ಲೂಕು ಆರೋಗ್ಯ ಅಧಿಕಾರಿ ಮಾರುತಿ ಕಾಂಬಳೆ, ಪಿಎಸ್ಐ ಸುಖಾನಂದ ಸಿಂಗೆ ನೇತೃತ್ವದಲ್ಲಿ ಸೋಮವಾರ ಶವ ಹೊರತೆಗೆದು, ವೈದ್ಯಾಧಿಕಾರಿಗಳು ಶವ ಪರೀಕ್ಷೆ ನಡೆಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-31-1866301865

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.