ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶ್ರೇಷ್ಠ ದಂಡನಾಯಕರೂ ಆಗಿದ್ದ ಕನಕರು’

Last Updated 5 ಡಿಸೆಂಬರ್ 2020, 2:56 IST
ಅಕ್ಷರ ಗಾತ್ರ

ಕಲಬುರ್ಗಿ: ‘ವೀರ ಸೇನಾನಿಯೂ ಆಗಿದ್ದ ಕನಕದಾಸರು ಅಧ್ಯಾತ್ಮದ ಮೂಲಕ ಸಮಾಜದ ಮೌಢ್ಯಗಳನ್ನು ತಿದ್ದುಲು ಪರಿವರ್ತನೆ ಆಗಿದ್ದು, ವಿಶ್ವಕ್ಕೆ ಮಾದರಿ’ ಎಂದು ಕುರುಬ ಸಮಾಜದ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಬಾಬುರಾವ್ ಇ. ಪ್ರಜಾರಿ ಹೇಳಿದರು.

ನಗರದ ಅನನ್ಯ ಪದವಿ ಮತ್ತು ಸ್ನಾತಕೋತ್ತರ ವಿದ್ಯಾಲಯದಲ್ಲಿ ಭಕ್ತ ಕನಕದಾಸ ಮತ್ತು ಪ್ರಥಮ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್‌ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೀರಪ್ಪನಾಯಕ ಮತ್ತು ಬಚ್ಚಮ್ಮ ದಂಪತಿ ಮಗನಾಗಿ 1509ರಲ್ಲಿ ಜನಿಸಿದ ಕನಕರು, ಹೆತ್ತವರಿಂದಲೇ ಸಂಸ್ಕಾರ ಪಡೆದರು. ಅವರ ತಂದೆ ಒಬ್ಬ ಸೇನಾಧಿಕಾರಿ, ತಿಮ್ಮಪ್ಪನ ಭಕ್ತರಾಗಿದ್ದರು. ಹಾಗೇಯೇ ಕನಕದಾಸರು ಕೂಡ ಒಬ್ಬ ದಂಡನಾಯಕ ಮತ್ತು ಶ್ರೀಕೃಷ್ಣನ ಭಕ್ತರಾಗಿದ್ದರು. ಇವರು 15-16ನೇ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಮಹಾನ್‌ ಭಕ್ತ’ ಎಂದರು.

‘ವ್ಯಾಸರಾಯರ ಪಟ್ಟ ಶಿಷ್ಯರಾಗಿ, ಮಧ್ವ ತತ್ವಶಾಸ್ತ್ರವನ್ನು ಕಲಿತು 316 ಕೀರ್ತನೆಗಳನ್ನು ಅನುಭವದ ಮೂಲಕ ಬರೆದವರು ಕನಕರು. ಜೈನ, ವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯಕ್ಕೆ ಸೊರಗಿ ಹೋಗಿದ್ದ ವೈದಿಕ ಧರ್ಮಕ್ಕೆ ಪುನಶ್ಚೇತನ ನೀಡಲು ಗುರುವಂತೆ ಇವರು ಶ್ರಮಿಸಿದರು’ ಎಂದು ಹೇಳಿದರು.

ವಕೀಲ ನಾಗೇಂದ್ರಪ್ಪ ಪ್ರಜಾರಿ ಮಾತನಾಡಿ, ‘ದೇಶದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ ಅವರು ಗಾಂಧೀಜಿ ಅವರ ಆಪ್ತರಾಗಿದ್ದರು. ಬಡವ– ಬಲ್ಲಿದ, ಮೇಲು– ಕೀಳು ಎಂಬ ಭೇದವಿಲ್ಲದೆ ಬದುಕಿ ಮಾರ್ಗದರ್ಶಿಯಾದವರು. ಪರ್ಷಿಯನ್‌ ಭಾಷೆಯಲ್ಲಿ ಶಿಕ್ಷಣ ಪ್ರಾರಂಬಿಸಿ, ಒಬ್ಬ ಮೌಲ್ವಿಯಿಂದ ಪ್ರಭಾವಶಾಲಿಯಾಗಿ ಕಾನೂನು ಶಿಕ್ಷಣವನ್ನು ಪಡೆದರು. ಇವರು 1906ರಲ್ಲಿ ಬಿಹಾರಿ ವಿದ್ಯಾರ್ಥಿಗಳನ್ನು ಒಂದುಗೂಡಿಸಿ ಬಿಹಾರಿ ಸ್ಟೂಡೆಂಟ್ ಕಾನ್ಫರೆನ್ಷ್ ಎಂಬ ಸಂಘವನ್ನು ಕಟ್ಟಿ ನಂತರ ದಿನಗಳಲ್ಲಿ ಕೋಲ್ಕತ್ತ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಸ್ವತಂತ್ರ ಭಾರತಕ್ಕೆ ಸತತ ಎರಡು ಕಾಲಾವಧಿಗೆ ರಾಷ್ಟ್ರಪತಿ ಆದ ಕೀರ್ತಿ ಅವರಿಗೇ ಸಲ್ಲುತ್ತದೆ’ ಎಂದು ವಿವರಿಸಿದರು.

ಕುರುಬ ಸಮಾಜದ ಜಿಲ್ಲಾ ಘಟಕದ ಆಧ್ಯಕ್ಷ ತಿಪ್ಪಣ್ಣ ಒಳವಟ್ಟಿ, ಮುಖಂಡರಾದ ಶಿವಲಿಂಗಪ್ಪ ಒಗ್ಗಿ, ಧರ್ಮರಾಜ ಹೇರೂರ, ಮಹಾವಿದ್ಯಾಲಯದ ಅಧ್ಯಕ್ಷೆ ಸುಷ್ಮಾವತಿ ಹೊನ್ನಗೆಜ್ಜೆ, ಪ್ರಾಂಶುಪಾಲ ಶರಣಪ್ಪ ಬಿ. ಹೊನ್ನಗೆಜ್ಜೆ ಪೂಜಾರಿ, ರಮೇಶ ಕಂಟೀಕರ, ಸಂದೀಪ ಸಲಗರ, ಪ್ರದೀಪ, ಸುಜಾತಾ, ಸಿಬ್ಬಂದಿ ವರ್ಗದವರಾದ ಶಾಂತಲಾ ಎಂ. ನಂದರಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT