ಗುರುವಾರ , ನವೆಂಬರ್ 21, 2019
22 °C

ಗುಲಬರ್ಗಾ ವಿ.ವಿ.ಯಲ್ಲಿ ಕನ್ಹಯ್ಯಕುಮಾರ್ ಉಪನ್ಯಾಸ ದಿಢೀರ್‌ ರದ್ದು, ನಿಷೇಧಾಜ್ಞೆ

Published:
Updated:
Prajavani

ಕಲಬುರ್ಗಿ: ಇಲ್ಲಿಯ ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆಯಲ್ಲಿ ಇಂದು (ಅ 15) ಆಯೋಜಿಸಿದ್ದ ಕನ್ಹಯ್ಯಕುಮಾರ್ ಅವರ ಉಪನ್ಯಾಸವನ್ನು ವಿ.ವಿ.ಕುಲಪತಿ ಪ್ರೊ.ಪರಿಮಳಾ ಅಂಬೇಕರ್ ರದ್ದುಗೊಳಿಸಿದ್ದಾರೆ‌.

ಉನ್ನತ ಶಿಕ್ಷಣ ಇಲಾಖೆಯಿಂದ ಮೌಖಿಕ ಸೂಚನೆ ಅನುಸಾರ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಕಾರ್ಯಕ್ರಮ ನಡೆಯುವ ಡಾ.ಬಿ‌.ಆರ್.ಅಂಬೇಡ್ಕರ್ ಸಭಾಂಗಣದ ಸುತ್ತಮುತ್ತ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.


ಗುಲಬರ್ಗಾ ವಿ.ವಿ. ಮುಖ್ಯ ದ್ವಾರದ ಎದುರು ಪೊಲೀಸ್ ಕಾವಲು ಹಾಕಲಾಗಿದೆ

ಬೆಳಿಗ್ಗೆ 11ಕ್ಕೆ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ಮಾಜಿ ಅಧ್ಯಕ್ಷ ಕನ್ಹಯ್ಯಕುಮಾರ್ 'ನವಭಾರತ ಕಟ್ಟುವಲ್ಲಿ ಯುವಕರ ಪಾತ್ರ ವಿಷಯ' ಕುರಿತು ಉಪನ್ಯಾಸ ‌ನೀಡಬೇಕಿತ್ತು.

ಸೋಮವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಉಪನ್ಯಾಸಕ್ಕೆ ಷರತ್ತುಬದ್ಧ ಅನುಮತಿಯನ್ನು ನೀಡಲಾಗಿತ್ತು.

ಆದರೆ ಬೆಳಿಗ್ಗೆ ‌ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಕಾರ್ಯಕ್ರಮ ‌ನಡೆಸದಂತೆ ನಿರ್ಬಂಧ ಹೇರಲಾಗಿದೆ‌.

ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯೆ ‌ನೀಡಿದ ವಿ.ವಿ.ಹಂಗಾಮಿ ಕುಲಪತಿ ಪ್ರೊ. ಪರಿಮಳಾ ಅಂಬೇಕರ್, ಸರ್ಕಾರದ ಸೂಚನೆ ಅನುಸಾರ ಕಾರ್ಯಕ್ರಮ ‌ರದ್ದುಗೊಳಿಸಲು ಸೂಚಿಸಿದ್ದೇನೆ ಎಂದರು.

ವಿ.ವಿ.ಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಸ್.ಪಿ.ಮೇಲಕೇರಿ ‌ಪ್ರತಿಕ್ರಿಯೆ ನೀಡಿ, ಕಾರ್ಯಕ್ರಮ ನಡೆಸುವ ಸ್ಥಳದಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ತೊಂದರೆ ಕೊಡಲು ಇಚ್ಛಿಸುವುದಿಲ್ಲ‌. ಹೀಗಾಗಿ ಕಾರ್ಯಕ್ರಮ ನಡೆಸುವುದಿಲ್ಲ ಎಂದರು‌.

ಪ್ರತಿಕ್ರಿಯಿಸಿ (+)