ಗುರುವಾರ , ನವೆಂಬರ್ 21, 2019
23 °C

ಪಟ್ಟು ಬಿಡದ ಸಂಶೋಧನಾ ವಿದ್ಯಾರ್ಥಿಗಳ ಸಂಘ: ಕನ್ಹಯ್ಯ ಕಾರ್ಯಕ್ರಮ ಸ್ಥಳಾಂತರ

Published:
Updated:
Prajavani

ಕಲಬುರ್ಗಿ: ಗುಲಬರ್ಗಾ ವಿ.ವಿ.ಯಲ್ಲಿ ಕನ್ಹಯ್ಯಕುಮಾರ್ ಉಪನ್ಯಾಸಕ್ಕೆ ಅನುಮತಿ ‌ನಿರಾಕರಿಸಿದರೂ ಪಟ್ಟು ಬಿಡದ ವಿ.ವಿ. ಸಂಶೋಧನಾ ವಿದ್ಯಾರ್ಥಿಗಳ ಸಂಘ ನಗರದ ಎಸ್ ವಿಪಿ ವೃತ್ತದ ಬಳಿ ಇರುವ ವಿಶ್ವೇಶ್ವರಯ್ಯ ಎಂಜಿನಿಯರ್ಸ್ ಇನ್ ಸ್ಟಿಟ್ಯೂಟ್ ಗೆ ಸ್ಥಳಾಂತರಿಸಿದೆ.

ಮಧ್ಯಾಹ್ನ 12ಕ್ಕೆ ಕನ್ಹಯ್ಯಕುಮಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

* ಇದನ್ನೂ ಓದಿ: ಗುಲಬರ್ಗಾ ವಿ.ವಿ.ಯಲ್ಲಿ ಕನ್ಹಯ್ಯಕುಮಾರ್ ಉಪನ್ಯಾಸ ದಿಢೀರ್‌ ರದ್ದು, ನಿಷೇಧಾಜ್ಞೆ

ಉಪನ್ಯಾಸ ಅಲಿಸಲು ವಿ.ವಿ. ಆವರಣಕ್ಕೆ ಬಂದಿದ್ದ ವಿದ್ಯಾರ್ಥಿಗಳನ್ನು ವಿಶ್ವೇಶ್ವರಯ್ಯ ಸಭಾಂಗಣಕ್ಕೆ ಕಳಿಸಲಾಗುತ್ತಿದೆ. ವಿ.ವಿ.ಯಲ್ಲಿ ಪೊಲೀಸ್ ಭದ್ರತೆ ಮುಂದುವರಿದಿದೆ.


ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.

ಕನ್ಹಯ್ಯಕುಮಾರ ಉಪನ್ಯಾಸ ಆಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಗುಲಬರ್ಗಾ ವಿವಿ ಅಂಬೇಡ್ಕರ್ ಸಭಾಂಗಣಕ್ಕಿಂತ ಕಿರಿದಾಗಿರುವ ಇನ್‌ಸ್ಟಿಟ್ಯೂಟ್‌ನ ಸಭಾಂಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಹೈದರಾಬಾದ್-ಕರ್ನಾಟಕ ಪ್ರದೇಶದಿಂದ ಅಲ್ಲದೇ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು, ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದಾರೆ.


ವಿ.ವಿ.ಯಲ್ಲಿ ಪೊಲೀಸ್ ಭದ್ರತೆ ಮುಂದುವರಿದಿದೆ

 

ಪ್ರತಿಕ್ರಿಯಿಸಿ (+)