ಗುರುವಾರ , ನವೆಂಬರ್ 14, 2019
19 °C
ಪೊಲೀಸರ ಪೂರ್ವಾನುಮತಿ ಪಡೆಯದ ಕಾರಣ ಉಪನ್ಯಾಸ ಮತ್ತೆ ರದ್ದು

ಕನ್ಹಯ್ಯಕುಮಾರ್ ಉಪನ್ಯಾಸ | ರದ್ದು, ಅನುಮತಿ, ರದ್ದು, ಸ್ಥಳಾಂತರ, ಮತ್ತೆ ರದ್ದು!

Published:
Updated:
Prajavani

ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯವು ಕನ್ಹಯ್ಯಕುಮಾರ್ ಅವರಿಗೆ ನೀಡಿದ ಅನುಮತಿ ಹಿಂದಕ್ಕೆ ಪಡೆದಿದ್ದರಿಂದ ನಗರದ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೂ ರದ್ದಾಯಿತು.

ಈ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆಗೆ ಪೊಲೀಸರ ಪೂರ್ವಾನುಮತಿ ಪಡೆದಿರಲಿಲ್ಲ. ಹೀಗಾಗಿ ಕಾರ್ಯಕ್ರಮ ರದ್ದುಗೊಳಿಸಿ ಎಂದು ಸ್ಟೇಶನ್ ಬಜಾರ್ ಠಾಣೆ ‌ಪೊಲೀಸರು ಸಂಘಟಕರಿಗೆ ಸೂಚನೆ ನೀಡಿದರು. ಹೀಗಾಗಿ ಅನಿವಾರ್ಯವಾಗಿ ಉಪನ್ಯಾಸ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.

ಸಂಜೆ 4ಕ್ಕೆ ನಿಗದಿಯಂತೆ ನಗರದ ಅಂಬೇಡ್ಕರ್ ಕಾಲೇಜಿನಲ್ಲಿ ಕನ್ಹಯ್ಯಕುಮಾರ್ ಉಪನ್ಯಾಸ ನಡೆಯಲಿದೆ ಎಂದು ಸಂಘಟಕಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಂಚಾಲಕಿ ಕೆ.ನೀಲಾ ತಿಳಿಸಿದರು.

* ಇವನ್ನೂ ಓದಿ...

ಕನ್ಹಯ್ಯಕುಮಾರ್‌ ಉಪನ್ಯಾಸಕ್ಕೆ ಷರತ್ತುಬದ್ಧ ಅನುಮತಿ

ಇಂದು ಬಿಗಿ ಭದ್ರತೆಯಲ್ಲಿ ಕನ್ಹಯ್ಯಕುಮಾರ್‌ ಉಪನ್ಯಾಸ

ಗುಲಬರ್ಗಾ ವಿ.ವಿ.ಯಲ್ಲಿ ಕನ್ಹಯ್ಯಕುಮಾರ್ ಉಪನ್ಯಾಸ ದಿಢೀರ್‌ ರದ್ದು, ನಿಷೇಧಾಜ್ಞೆ

ಪಟ್ಟು ಬಿಡದ ಸಂಶೋಧನಾ ವಿದ್ಯಾರ್ಥಿಗಳ ಸಂಘ: ಕನ್ಹಯ್ಯ ಕಾರ್ಯಕ್ರಮ ಸ್ಥಳಾಂತರ

 

ಪ್ರತಿಕ್ರಿಯಿಸಿ (+)