ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ತೇಗಲತಿಪ್ಪಿಗೆ ಶಾಸಕ ಬಸವರಾಜ ಮತ್ತಿಮೂಡ ಸಲಹೆ
Last Updated 21 ಏಪ್ರಿಲ್ 2022, 7:36 IST
ಅಕ್ಷರ ಗಾತ್ರ

ಶಹಾಬಾದ್: ‘ಮುಂಬರುವ ದಿನಗಳಲ್ಲಿ ಶಹಾಬಾದ್‌ ನಗರದಲ್ಲಿ ಕಸಾಪ ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾಡಲು ಕ್ರಮಕೈಗೊಂಡರೆ, ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲು ನಾನು ಸದಾ ಸಿದ್ಧ’ ಎಂದು ಬಸವರಾಜ ಮತ್ತಿಮೂಡ ತಿಳಿಸಿದರು.

ಮಂಗಳವಾರ ನಗರದ ಸಹರಾ ಸಭಾಂಗಣದಲ್ಲಿ ಕಸಾಪ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಹಾಗೂ ಸರ್ವ ಸದಸ್ಯರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಮಲಾಪೂರದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸ್ವಲ್ಪ ಅಸ್ತವ್ಯಸ್ಥವಾಗಿದೆ. ಕೆಲವರನ್ನು ಕರೆದಿಲ್ಲ ಎನ್ನುವ ಮಾತುಗಳು ಕೇಳಿಬಂದವು. ಆದರೆ ಶಹಾಬಾದ್‌ನಲ್ಲಿ ಕೈಗೊಳ್ಳುವ ಸಮ್ಮೇಳನದಲ್ಲಿ ಎಲ್ಲರನ್ನೂ ಆಹ್ವಾನಿಸೋಣ ಎಂದ ಅವರು ಕಸಾಪ ಸದಸ್ಯರು 5 ವರ್ಷ ಅಧಿಕಾರ ನೀಡಿದ್ದಾರೆ. ತಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅವರಿಗೆ ಹೇಳಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕನ್ನಡ ಸಾಂಸ್ಕೃತಿಕ ಪರಿಸರ ನಿರ್ಮಾಣ ಮಾಡಲಾಗುವುದು. ತಾಲ್ಲೂಕಿನ ಹೊನಗುಂಟಾ ಗ್ರಾಮದ ಐತಿಹಾಸಿಕ ಕುರಿತ 1 ದಿನದ ಸಮ್ಮೇಳನ ಆಯೋಜಿಸಲಾಗುವುದು ಎಂದ ಅವರು ನಗರದ ಕನ್ನಡ ಭವನದ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ತಹಸೀಲ್ದಾರ್ ಸುರೇಶ ವರ್ಮಾ ಮಾತನಾಡಿದರು.

ಕಸಾಪ ನಿಕಟಪೂರ್ವ ಅಧ್ಯಕ್ಷ ಮೃತ್ಯುಂಜಯ ಹಿರೇಮಠ, ತಾಲ್ಲೂಕು ಅಧ್ಯಕ್ಷ ಶರಣಬಸಪ್ಪ ಕೋಬಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತಿ ಡಾ.ನೀಲಮ್ಮ ಕತ್ನಳ್ಳಿ, ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ತಾ.ಪಂ ಇಒ ಬಸಲಿಂಗಪ್ಪ ಡಿಗ್ಗಿ, ಡಿವೈಎಸ್ಪಿ ಉಮೇಶ ಚಿಕ್ಕಮಠ, ನಗರಸಭೆ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪೂರಕರ್, ಅಣವೀರ ಇಂಗಿನಶೆಟ್ಟಿ, ರಾಜಮಹ್ಮದ್ ರಾಜಾ, ಯಶ್ವಂತ ಅಷ್ಟಗಿ, ಕೋಶಾಧ್ಯಕ್ಷ ಡಾ.ಶರಣರಾಜ ಚಪ್ಪರಬಂಡಿ, ಸಿದ್ದಲಿಂಗ ಬಾಳಿ, ರಾಜು ಕೋಬಾಳ, ಯಶೋಧಾ ಮುಸ್ಕಿ, ದಶರಥ ಕೋಟನೂರ್, ಬಸವರಾಜ ಮದ್ರಿಕಿ, ಶರಣು ವಸ್ತ್ರದ, ಮಲ್ಲಿಕಾರ್ಜುನ ಇಟಗಿ ಇದ್ದರು.

ಕಸಾಪದ ಅಜೀವ ಸದಸ್ಯರಾದ ನಾಗಪ್ಪ ಬೆಳಮಗಿ, ಶಿವರಾಜ ಪಾರಾ,ಅನೀಲಕುಮಾರ ಇಂಗಿನಶೆಟ್ಟಿ, ಡಾ.ನೀಲಮ್ಮ ಕತ್ನಳ್ಳಿ, ಹೆಚ್.ಬಿ.ತೀರ್ಥೆ,ಸುಭಾಷ ಪಂಚಾಳ, ಸುರೇಶ ಮೆಂಗನ, ಡಾ.ಶಂಕರ ಸೋಮ್ಯಾಜಿ, ಬಸವರಾಜ ನಂಧಿಧ್ವಜ, ಶಿವರಾಜ ಇಂಗಿನಶೆಟ್ಟಿ, ಸಂಗಯ್ಯಸ್ವಾಮಿಯವರಿಗೆ ಗೌರವ ಸನ್ಮಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT