ಮಂಗಳವಾರ, ಅಕ್ಟೋಬರ್ 20, 2020
22 °C

ಕಲಬುರ್ಗಿ ಜಿಲ್ಲೆಯಲ್ಲಿ ಧಾರಾಕಾರ ಮಳೆ; ಸ್ಥಳೀಯರಲ್ಲಿ ಮತ್ತೆ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕಳೆದ ಬಾರಿ ಕಲಬುರ್ಗಿ ನಗರದಲ್ಲಿ ರಾತ್ರಿಯಿಡೀ ಮಳೆಯಾದಾಗ ಮನೆಯೊಳಗೆ ನೀರು ನುಗ್ಗಿತ್ತು. ರಸ್ತೆಗಳಲ್ಲಿ ನೀರು ಸಂಗ್ರಹಗೊಂಡು ವಾಹನಗಳಲ್ಲಿ ಸಂಚರಿಸುವುದೇ ಕಷ್ಟವಾಗಿತ್ತು. ಪುನಃ ಅಂಥದ್ದೇ ಸ್ಥಿತಿ ಬರುವುದೆ ಎಂಬ ಆತಂಕ ನಗರದ ಜನರಲ್ಲಿ ಕಾಡುತ್ತಿದೆ. ಭಾನುವಾರ ಮಧ್ಯಾಹ್ನ ದಿಢೀರ್ ಮಳೆಯಾಗಿದ್ದು ಕಂಡು ಜನರು ಹೀಗೆ ಕಳವಳ ವ್ಯಕ್ತಪಡಿಸಿದರು.

ಮಳೆಯಿಂದ ಕೆಲ ಕೊಳಚೆ ಪ್ರದೇಶಗಳು ಜಲಾವೃತಗೊಂಡಿದ್ದವು. ಹಳೆಯ ಜೇವರ್ಗಿ ರಸ್ತೆಯ ಕೆಲ ಬಡಾವಣೆಗಳು, ಭಾಗ್ಯವಂತಿ ನಗರ, ಹೀರಾಪುರದ ಸುತ್ತಮುತ್ತಲೂ  ಜನರ ಜೀವನ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಇದರ ಮಧ್ಯೆ ಮತ್ತೆ ಮಳೆಯಾಗುತ್ತಿದೆ.

ಸುರಿಯುತ್ತಿರುವ ಮಳೆಯಲ್ಲೇ ಕೆಲವರು ಓಡಾಡಿದರೆ,  ಕೆಲವರು ಅಂಗಡಿಗಳ ಬಳಿ ಆಶ್ರಯ ಪಡೆದರು.


ಕಲಬುರ್ಗಿ ನಗರದಲ್ಲಿ ಮಳೆ ಸುರಿಯುತ್ತಿರುವ ದೃಶ್ಯ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು