ಶನಿವಾರ, ಅಕ್ಟೋಬರ್ 23, 2021
23 °C

ಕಲಬುರ್ಗಿ: ಜಿಲ್ಲೆಯಲ್ಲಿ ರಾತ್ರಿಯಿಡೀ ಧಾರಾಕಾರ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ರಾತ್ರಿ ಆರಂಭವಾದ ಮಳೆ, ಭಾನುವಾರ ಬೆಳಗಿನವರೆಗೂ ಧಾರಾಕಾರವಾಗಿ ಸುರಿದಿದೆ.

ಕಾಡಂಚಿನಲ್ಲಿರುವ ಕುಂಚಾವರಂ ಸುತ್ತ ಅತಿ ಹೆಚ್ಚು; ಅಂದರೆ 50 ಮಿ.ಮೀ ಮಳೆ ಸುರಿದಿದೆ. ಯಡ್ರಾಮಿಯಲ್ಲಿ ಅತಿ ಕಡಿಮೆ; ಅಂದರೆ 4.4 ಮಿ.ಮೀ ಬಿದ್ದಿದೆ. ಕಲಬುರ್ಗಿ ನಗರ ಹಾಗೂ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲೂ ಮಳೆಯಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 44 ಮಿ.ಮೀ ದಾಖಲಾಗಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಸತತ ಮಳೆಯ ಕಾರಣ ನಾಗರಾಳ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಒಳಹರಿವಿನ ಪ್ರಮಾಣಕ್ಕೆ ತಕ್ಕಂತೆ ಹೊರಹರಿವನ್ನೂ ಹೆಚ್ಚಿಸಲಾಗಿದೆ. ಭಾನುವಾರ ಬೆಳಿಗ್ಗೆಯಿಂದ 898 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ ಎಂದು ಜಲಾಶಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉಳಿದಂತೆ; ಇಜೇರಿಯಲ್ಲಿ 42 ಮಿ.ಮೀ, ಆಂದೋಲಾದಲ್ಲಿ 36.4 ಮಿ.ಮೀ, ಚಿಂಚೋಳಿ- 39 ಮಿ.ಮೀ,  ಜೇವರ್ಗಿ 34.6 ಮಿ.ಮೀ, ನೆಲೋಗಿ 18.2 ಮಿ.ಮೀ ಮಳೆಯಾಗಾದೆ.

ಸಂಪರ್ಕ ಕಡಿತ: ಸೇಡಂನಿಂದ ಊಡಗಿ ಮಾರ್ಗದಿಂದ ಹಂಗನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಊಡಗಿ-ಹಂಗನಳ್ಳಿ ಬಳಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಭಾರಿ ಮಳೆಯಿಂದಾಗಿ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ತಾಲ್ಲೂಕು ಕೇಂದ್ರದಿಂದ ಸಂಪರ್ಕ ಕಡಿತಗೊಂಡಿದ್ದು,
ದೂರದಿಂದ ಮಳಖೇಡ ಮೂಲಕ ಸೇಡಂಗೆ ಹೋಗುವುದು ಅನಿವಾರ್ಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು