ಕಮಲಾಪುರ: ‘ಪರಿಶಿಷ್ಟ ಜಾತಿಯಲ್ಲಿ ಮಾದಿಗ ಸಮುದಾಯದ ಜನಸಂಖ್ಯೆ ಹೆಚ್ಚಿದ್ದು, ಅವರಿಗೆ ಶೇ 6ರಷ್ಟು ಮೀಸಲಾತಿ ಒದಗಿಸುವಂತೆ ನ್ಯಾ.ನಾಗಮೋಹನದಾಸ ಹಾಗೂ ಸದಾಶಿವ ಆಯೋಗಗಳು ಶಿಫಾರಸು ಮಾಡಿವೆ. ಸರ್ಕಾರ ಕೇವಲ ಶೇ 5.25ರಷ್ಟು ಮೀಸಲಾತಿ ಒದಗಿಸಿ ಅನ್ಯಾಯ ಮಾಡಿದ್ದು, ಇದನ್ನು ನಾವು ಒಪ್ಪುವುದಿಲ್ಲ’ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಮಲಾಪುರ ಆಕೃತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಬಾಬು ಜಗಜೀವನರಾಂ ಅವರ ತಾಲ್ಲೂಕು ಮಟ್ಟದ ಜಯಂತಿಯಲ್ಲಿ ಮಾತನಾಡಿದ ಅವರು, ‘ಮಾದಿಗರ ಮೀಸಲಾತಿ ಹೋರಾಟದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ನಾವು ಬಹುಸಂಖ್ಯಾತರಿದ್ದೇವೆ’ ಎಂದು ಹೇಳಿದರು.

‘2013, 2023ರಲ್ಲಿ ನಾವು ಅಧಿಕಾರಕ್ಕೆ ಬಂದರೆ ಮೊದಲ ಅಧಿವೇಶನದಲ್ಲೇ ಒಳಮೀಸಲಾತಿ ಜಾರಿಗೊಳಿಸುವುದಾಗಿ ಕಾಂಗ್ರೆಸ್ನವರು ಹೇಳಿದ್ದರು, ಒಳಮೀಸಲಾತಿ ಜಾರಿಯಾಗಿಲ್ಲ. ಸರ್ಕಾರದ ಒಳ ಮೀಸಲಾತಿ ಆದೇಶದ ಪ್ರಕಾರ 14ಕ್ಕಿಂತ ಹೆಚ್ಚು ಹುದ್ದೆಗಳಿದ್ದಾಗ ಮಾತ್ರ ಒಳಮೀಸಲಾತಿ ಅನ್ವಯವಾಗುತ್ತದೆ. ದೊಡ್ಡ ಹುದ್ದೆಗಳು ಕಡಿಮೆ ಪ್ರಮಾಣದಲ್ಲಿರುತ್ತವೆ. ನಮ್ಮ ಮಕ್ಕಳಿಗೆ ಅನ್ಯಾಯವಾಗುತ್ತದೆ. ಈ ಮೀಸಲಾತಿ ಕೇವಲ ಪೌರ ಕಾರ್ಮಿಕ, ಪೊಲೀಸ್, ಶಿಕ್ಷಕರಾಗುವುದಕ್ಕೆ ಸೀಮಿತಗೊಳ್ಳಲಿದೆ’ ಎಂದರು.

‘ನಾವು ಯಾರ ವಿರೋಧಿಯಲ್ಲ, ನಮ್ಮ ಪಾಲು ಕೇಳುತ್ತಿದ್ದೇವೆ. ಕೊಡದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಸಿದ ಅವರು, ‘ಅಂಬೇಡ್ಕರ್ ಅವರು ಮೀಸಲಾತಿಯನ್ನು ಕೇವಲ 10 ವರ್ಷಕ್ಕಾಗಿ ನೀಡಿದ್ದರು. ಮತ್ತೆ ಮೀಸಲಾತಿ ಮುಂದುವರಿಸಲು ಶ್ರಮಿಸಿದವರು ಬಾಬೂಜಿ’ ಎಂದರು.

ಈ ಸಂದರ್ಭದಲ್ಲಿ ನಿರಗುಡಿ ಹವಾ ಮಲ್ಲಿನಾಥ ಮಹಾರಾಜ, ಮುಖಂಡರಾದ ರವಿ ಬಿರಾದಾರ, ಗುರುಪಾದಪ್ಪ ಮಾಟೂರ, ಶಿವಶೆಟ್ಟಿ ಪಾಟೀಲ, ಮಲ್ಲಿನಾಥ ಪಾಟೀಲ, ಶಾಮ ನಾಟೀಕಾರ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ವಿಠಲ ಕಾಂಬಳೆ ಹೊಡಲ, ಕಾರ್ಯಾಧ್ಯಕ್ಷ ಹಣಮಂತ ಹೊಸಮನಿ, ತಾಜೋದ್ದೀನ್ ಪಟೇಲ್, ಉದಯ ರಟಕಲ್ ಸೇರಿ ಮತ್ತಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-34-1396463846

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.