ಕಲಬುರಗಿ: ಕಾಶಿ ಮಾದರಿ ಗಂಗಾ ಆರತಿ ಮಹೋತ್ಸವ ಹಾಗೂ ವಿಠ್ಠಲ ಹೇರೂರ ಅವರ 11ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮವನ್ನು ಡಿ.3ರಂದು ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಗದ್ಗುರು ಭಗವಾನ ವೇದವ್ಯಾಸ ಬ್ರಹ್ಮರ್ಷಿ ಪೀಠದ ರಾಷ್ಟ್ರೀಯ ಅಧ್ಯಕ್ಷ ಬ್ರಹ್ಮರ್ಷಿ ರಾಜುಗುರು ಸ್ವಾಮೀಜಿ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನ ಜಗದ್ಗುರು ಭಗವಾನ ವೇದವ್ಯಾಸ ಬ್ರಹ್ಮರ್ಷಿ ಪೀಠ ಹಾಗೂ ಹೇರೂರ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ದೇವಲಗಾಣಗಾಪುರ ಗ್ರಾಮದ ವಿಠ್ಠಲ ಹೇರೂರ ಶಕ್ತಿ ಕೇಂದ್ರದಲ್ಲಿ ಬೆಳಿಗ್ಗೆ ಪುಣ್ಯಾರಾಧನೆ ಕಾರ್ಯಕ್ರಮ ನಡೆದರೆ, ಸಂಜೆ ಕುಲದೇವತೆಯಾದ ಗಂಗಾ ಆರತಿ ಮಹೋತ್ಸವ ಸಮೀಪದಲ್ಲಿರುವ ಸಂಗಮದಲ್ಲಿ ಜರುಗಲಿದೆ’ ಎಂದರು.

‘ಗಂಗಾ ಆರತಿ ಮತ್ತು ಕೋಲಿ, ಕಬ್ಬಲಿಗ, ಅಂಬಿಗ ಸಮಾಜದ ಜನಜಾಗೃತಿ ಅಭಿಯಾನ ಅಂಗವಾಗಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಹೋಬಳಿ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗಿದೆ. ಸಮಾಜದ ಸಮಸ್ಯೆಗಳು ಮತ್ತು ಸಂಘಟನೆ ಬಗ್ಗೆ ಚರ್ಚಿಸಲಾಗಿದೆ’ ಎಂದು ತಿಳಿಸಿದರು.

ತೊನಸನಹಳ್ಳಿಯ ಕೊತ್ತಲಪ್ಪ ಸ್ವಾಮೀಜಿ ಮಾತನಾಡಿ, ‘ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕರೂ ಆಗಿದ್ದ ಹೇರೂರ್ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಪಕ್ಷಾತೀತ ಮತ್ತು ಜಾತ್ಯತೀತವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಎಲ್ಲ ಪಕ್ಷಗಳ ರಾಜಕೀಯ ನಾಯಕರು, ಸಮುದಾಯಗಳ ಮುಖಂಡರು ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

ಮಾತಾ ಮಾಣಿಕೇಶ್ವರಿ ಆಶ್ರಯಮದ ಭಾರದ್ವಾಜ್ ಸ್ವಾಮೀಜಿ, ಜಿಲ್ಲಾ ಕೋಲಿ ಸಮಾಜದ ಅಧ್ಯಕ್ಷ ಬಸವರಾಜ ಬೂದಿಹಾಳ, ದೀಪಕಕುಮಾರ ಪೂಜಾರಿ, ರಾಕೇಶ ಕೋರೆ, ರಾಜಶೇಖರ ತಲಾರಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.